ನಾಟಿಂಗ್ಹ್ಯಾಮ್: ಇಲ್ಲಿನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿದೆ. ಈ ಪಂದ್ಯವನ್ನು ಭಾರತ ಗೆದ್ದಲ್ಲಿ ಕ್ಲೀನ್ ಸ್ವೀಪ್ ಮಾಡಿದಂತಾಗುತ್ತದೆ.
ತವರು ನೆಲದಲ್ಲಿ ಒಂದಾದರೂ ಪಂದ್ಯ ಗೆಲ್ಲುವ ತವಕದಲ್ಲಿ ಇಂಗ್ಲೆಂಡ್ ತಂಡ ಇದೆ. ಈ ಹಿನ್ನೆಲೆಯಲ್ಲಿ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಪಾರ್ಕಿನ್ಸನ್ ಮತ್ತು ಕರನ್ ಬದಲಾಗಿ ರೀಸ್ ಟೋಪ್ಲೆ ಮತ್ತು ಫಿಲ್ ಸಾಲ್ಟ್ ಆಡಲಿದ್ದಾರೆ.
-
England have won the toss and elect to bat first in the third and final T20I.
— BCCI (@BCCI) July 10, 2022 " class="align-text-top noRightClick twitterSection" data="
A look at #TeamIndia Playing XI for the game.
Live - https://t.co/BEVTo51IKg #ENGvIND pic.twitter.com/JHHMW1TInu
">England have won the toss and elect to bat first in the third and final T20I.
— BCCI (@BCCI) July 10, 2022
A look at #TeamIndia Playing XI for the game.
Live - https://t.co/BEVTo51IKg #ENGvIND pic.twitter.com/JHHMW1TInuEngland have won the toss and elect to bat first in the third and final T20I.
— BCCI (@BCCI) July 10, 2022
A look at #TeamIndia Playing XI for the game.
Live - https://t.co/BEVTo51IKg #ENGvIND pic.twitter.com/JHHMW1TInu
ಭಾರತ ತಂಡದಲ್ಲಿ ನಾಲ್ಕು ಬದಲಾವಣೆ: ಭಾರತ ಈ ಬಾರಿ ನಾಲ್ಕು ಬದಲಾವಣೆ ಮಾಡಿದೆ. ಯುಜುವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಕೈಗಿಡಲಾಗಿದ್ದು, ರವಿ ಬಿಷ್ಣೋಯ್, ಉಮ್ರಾನ್ ಮಲಿಕ್, ಅವೇಶ್ ಖಾನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ತಂಡಗಳು: ಭಾರತ : ರೋಹಿತ್ ಶರ್ಮಾ(ನಾಯಕ), ರಿಷಬ್ ಪಂತ್(ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಅವೇಶ್ ಖಾನ್, ಉಮ್ರಾನ್ ಮಲಿಕ್, ರವಿ ಬಿಷ್ಣೋಯ್
ಇಂಗ್ಲೆಂಡ್ : ಜೇಸನ್ ರಾಯ್, ಜೋಸ್ ಬಟ್ಲರ್ (ವಿಕೆಟ್ ಕೀಪರ್/ನಾಯಕ ), ಡೇವಿಡ್ ಮಲನ್, ಫಿಲಿಪ್ ಸಾಲ್ಟ್, ಲಿಯಾಮ್ ಲಿವಿಂಗ್ಸ್ಟೋನ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡಾನ್, ರೀಸ್ ಟೋಪ್ಲೆ, ರಿಚರ್ಡ್ ಗ್ಲೀಸನ್
ಇದನ್ನೂ ಓದಿ: ಅಂತಿಮ ಟಿ20 ಫೈಟ್: ಇಂಗ್ಲೆಂಡ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್ನತ್ತ ಭಾರತ ಚಿತ್ತ