ಸೌತಾಂಪ್ಟನ್(ಇಂಗ್ಲೆಂಡ್): ಆತಿಥೇಯ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಇಂಗ್ಲೆಂಡ್ನ ಸೌತಾಂಪ್ಟನ್ನಲ್ಲಿ ಪಂದ್ಯ ಆರಂಭಗೊಂಡಿದೆ. ಹಿರಿಯರ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಯುವ ಪಡೆಯೊಂದಿಗೆ ತಂಡ ಮುನ್ನಡೆಸುತ್ತಿದ್ದಾರೆ. ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳುವ ಉದ್ದೇಶದಿಂದ ಕೆಲ ಪ್ಲೇಯರ್ಸ್ಗೆ ಈ ಸರಣಿ ಮಹತ್ವದಾಗಿದೆ.
ಇಂಗ್ಲೆಂಡ್ ಆಡುವ 11ರ ಬಳಗ: ಜಾಸನ್ ರಾಯ್, ಜೋಸ್ ಬಟ್ಲರ್(ಕ್ಯಾಪ್ಟನ್, ವಿ.ಕೀ), ಡೇವಿಡ್ ಮಲನ್, ಮೊಯಿನ್ ಅಲಿ, ಲಿವಿಗ್ಸ್ಟೋನ್, ಹ್ಯಾರಿ ಬ್ರೊಕ್, ಸ್ಯಾಮ್ ಕರ್ರನ್, ಕ್ರಿಸ್ ಜೋರ್ಡನ್,ಟೈಮಲ್ ಮಿಲ್ಸೆ, ಟೊಪ್ಲೆ,ಯಾಥ್ಯೂ ಪಾರ್ಕಿನ್ಸನ್
ಟೀಂ ಇಂಡಿಯಾ ಆಡುವ 11ರ ಬಳಗ: ರೋಹಿತ್ ಶರ್ಮಾ(ಕ್ಯಾಪ್ಟನ್), ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿ,ಕೀ), ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಯಜುವೇಂದ್ರ ಚಹಲ್
-
#TeamIndia Playing XI for the 1st T20I.
— BCCI (@BCCI) July 7, 2022 " class="align-text-top noRightClick twitterSection" data="
Live - https://t.co/Xq3B0KTRD1 #ENGvIND pic.twitter.com/vTS7aINk3l
">#TeamIndia Playing XI for the 1st T20I.
— BCCI (@BCCI) July 7, 2022
Live - https://t.co/Xq3B0KTRD1 #ENGvIND pic.twitter.com/vTS7aINk3l#TeamIndia Playing XI for the 1st T20I.
— BCCI (@BCCI) July 7, 2022
Live - https://t.co/Xq3B0KTRD1 #ENGvIND pic.twitter.com/vTS7aINk3l
ಇದನ್ನೂ ಓದಿರಿ: ರೋಹಿತ್ ನಾಯಕತ್ವದಲ್ಲಿ ಖುಲಾಯಿಸಿತು ಅದೃಷ್ಟ.. ಮೊದಲ T-20 ಪಂದ್ಯಕ್ಕೆ ಅರ್ಷದೀಪ್ ಸಿಂಗ್ ಡೆಬ್ಯು
ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಎಲ್ಲ ತಂಡಗಳು ಅದರ ತಯಾರಿಯಲ್ಲಿವೆ. ಹೀಗಾಗಿ ಟೀಂ ಇಂಡಿಯಾ ಕೂಡ ಬೆಸ್ಟ್ ಪ್ಲೇಯಿಂಗ್ XI ಹುಡುಕಾಟದಲ್ಲಿದೆ. ಹಿರಿಯರ ಅನುಪಸ್ಥಿತಿಯಲ್ಲಿ ರೋಹಿತ್ ಬಳಗ ಮೊದಲ ಟಿ20 ಪಂದ್ಯವನ್ನಾಡುತ್ತಿರುವ ಕಾರಣ ಇಶಾನ್ ಕಿಶನ್, ದೀಪಕ್ ಹೂಡಾ,ಸೂರ್ಯಕುಮಾರ್ ಯಾದವ್, ಹಾರ್ದಿಕ್ ಹಾಗೂ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮೇಲೆ ಹೆಚ್ಚಿನ ಒತ್ತಡವಿದೆ. ಬೌಲಿಂಗ್ ವಿಭಾಗದ ಜವಾಬ್ದಾರಿ ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ಹಾಗೂ ಯಜುವೇಂದ್ರ ಚಹಲ್ ಮೇಲೆ ಇದೆ.