ಲಂಡನ್: ಆ್ಯಶಸ್ ಸರಣಿಯಲ್ಲಿ ಸಮಬಲ ಸಾಧಿಸಬೇಕು ಎಂಬ ಹಠದಲ್ಲಿ ಇಂಗ್ಲೆಂಡ್ ಬ್ಯಾಟರ್ಗಳು ಕೊನೆಯ ಪಂದ್ಯದ ಅಂತಿಮ ಇನ್ನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಸ್ಟೋಕ್ಸ್ ನಾಯಕತ್ವ ಮತ್ತು ಮೆಕಲಮ್ ಕೋಚ್ ಆದ ನಂತರ ಅಳವಡಿಸಿಕೊಂಡ ಬೇಸ್ ಬಾಲ್ ನೀತಿಯನ್ನು ಸರಿಯಾಗಿ ಕಾರ್ಯರೂಪಕ್ಕೆ ತಂದಿದ್ದಾರೆ. ಇದರಿಂದ ಆಂಗ್ಲ ಪಡೆಯ ಎಲ್ಲಾ ಬ್ಯಾಟರ್ಗಳು ಹೊಡಿ ಬಡಿ ಆಟಕ್ಕೆ ಮುಂದಾಗಿದ್ದು 100 ಆಸುಪಾಸಿನ ಸ್ಟ್ರೈಕ್ ರೇಟ್ನಲ್ಲೇ ಬ್ಯಾಟ್ ಬೀಸಿದ್ದಾರೆ.
ಇದರಿಂದ ಇಂಗ್ಲೆಂಡ್ನ ಬ್ಯಾಟರ್ಗಳು 81.5 ಓವರ್ನಲ್ಲಿ 395 ರನ್ ಕಲೆಹಾಕಿ, ಆಸ್ಟೇಲಿಯಾಕ್ಕೆ 396 ರನ್ನ ಗುರಿಯನ್ನು ನೀಡಿದೆ. ಈ ಗುರಿಯನ್ನು ಬೆನ್ನು ಹತ್ತಿರುವ ಕಾಂಗರೂ ಪಡೆಗೆ ಡೇವಿಡ್ ವಾರ್ನರ್ (30) ಮತ್ತು ಉಸ್ಮಾನ್ ಖವಾಜಾ (39) ಉತ್ತಮ ಆರಂಭವನ್ನು ನೀಡಿದ್ದಾರೆ. ಭೋಜನ ವಿರಾಮದ ವೇಳೆಗೆ ಆಸಿಸ್ ವಿಕೆಟ್ ನಷ್ಟವಿಲ್ಲದೇ 75 ರನ್ ಕಲೆಹಾಕಿದ್ದು, 309 ರನ್ನ ಹಿನ್ನಡೆಯಲ್ಲಿದೆ.
-
𝗜𝗰𝗼𝗻𝗶𝗰. #EnglandCricket | #Ashes pic.twitter.com/RugbVXAfig
— England Cricket (@englandcricket) July 30, 2023 " class="align-text-top noRightClick twitterSection" data="
">𝗜𝗰𝗼𝗻𝗶𝗰. #EnglandCricket | #Ashes pic.twitter.com/RugbVXAfig
— England Cricket (@englandcricket) July 30, 2023𝗜𝗰𝗼𝗻𝗶𝗰. #EnglandCricket | #Ashes pic.twitter.com/RugbVXAfig
— England Cricket (@englandcricket) July 30, 2023
ಎರಡನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 12 ರನ್ನ ಮುನ್ನಡೆಯಿಂದ ಮೊದಲ ಇನ್ನಿಂಗ್ಸ್ನಲ್ಲಿ ಆಲ್ಔಟ್ ಆಗಿತ್ತು. ಮೂರನೇ ದಿನ ಎರಡನೇ ಇನ್ನಿಂಗ್ಸ್ನ ಬ್ಯಾಟಿಂಗ್ ಆರಂಭಿಸಿದ ಆಂಗ್ಲರು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. 16ನೇ ಓವರ್ ಮೊದಲ ವಿಕೆಟ್ ಪತನವಾಯಿತಾದರೂ, ಈ ವೇಳೆಗೆ 79 ರನ್ ಜೊತೆಯಾಟವನ್ನು ಜ್ಯಾಕ್ ಕ್ರಾಲಿ ಮತ್ತು ಡಕೆಟ್ (42) ಜೋಡಿ ಮಾಡಿತ್ತು. ಮೊಯಿನ್ ಅಲಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಮೂರನೇ ವಿಕೆಟ್ ಆಗಿ ನಾಯಕ ಬೆನ್ ಸ್ಟೋಕ್ಸ್ ಕಣಕ್ಕಿಳಿದರು. ಕ್ರಾಲಿ (73) ಸ್ಟೋಕ್ಸ್ ಜೊತೆಗೆ 70 ರನ್ ಜೊತೆಯಾಟ ಆಡಿ ವಿಕೆಟ್ ಕೊಟ್ಟರು.
ಟೆಸ್ಟ್ನಲ್ಲಿ ವಿಕೆಟ್ ಕಾಯ್ದುಕೊಂಡು ಆಡುವುದರಲ್ಲಿ ಖ್ಯಾತರಾಗಿದ್ದ ರೂಟ್ ಕ್ರೀಸ್ಗೆ ಬಂದೊಡನೆಯೇ ಹೊಡಿ ಬಡಿ ಆಟಕ್ಕೆ ಮುಂದಾದರು. ರೂಟ್ ಅಬ್ಬರದ ಆಟಕ್ಕೆ ಮೈದಾನದಲ್ಲಿದ್ದ ಪ್ರೇಕ್ಷಕರು ಕರತಾಡನದಿಂದ ಪ್ರೋತ್ಸಾಹಿಸಿದರೆ, ಆಸ್ಟ್ರೇಲಿಯಾದ ಆಟಗಾರರು ದಂಗಾದರು. 42 ರನ್ ಗಳಿಸಿ ನಾಯಕ ಸ್ಟೋಕ್ಸ್ ವಿಕೆಟ್ ಕೊಟ್ಟರೆ, 9 ರನ್ ಹ್ಯಾರಿ ಬ್ರೂಕ್ ವಿಕೆಟ್ ಕೊಟ್ಟರು. ಬ್ರೂಕ್ ನಂತರ ಬಂದ ಜಾನಿ ಬೈರ್‌ಸ್ಟೋವ್ ಮತ್ತು ರೂಟ್ ಅಬ್ಬರವನ್ನು ಮುಂದುವರೆಸಿದರು. ಈ ಜೋಡಿ ಆಕ್ರಮಣಕಾರಿ ಆಟದಿಂದ 100 ರನ್ ಜೊತೆಯಾಟ ಮಾಡಿತ್ತು. ಈ ನಡುವೆ ರೂಟ್ 9 ರನ್ನಿಂದ ಶತಕ ವಂಚಿತರಾಗಿ ವಿಕೆಟ್ ಕೊಟ್ಟರು. ನಿನ್ನೆಯ ಇನ್ನಿಂಗ್ಸ್ನಲ್ಲಿ 106 ಬಾಲ್ ಆಡಿದ ರೂಟ್ 1 ಸಿಕ್ಸ್ ಮತ್ತು 11 ಬೌಂಡರಿಯಿಂದ 91 ರನ್ ಕಲೆಹಾಕಿದರು.
-
Just the start Australia would have wanted in their mammoth chase 👏#WTC25 | 📝 #ENGvAUS: https://t.co/AybW31movm pic.twitter.com/dVxOfccVp0
— ICC (@ICC) July 30, 2023 " class="align-text-top noRightClick twitterSection" data="
">Just the start Australia would have wanted in their mammoth chase 👏#WTC25 | 📝 #ENGvAUS: https://t.co/AybW31movm pic.twitter.com/dVxOfccVp0
— ICC (@ICC) July 30, 2023Just the start Australia would have wanted in their mammoth chase 👏#WTC25 | 📝 #ENGvAUS: https://t.co/AybW31movm pic.twitter.com/dVxOfccVp0
— ICC (@ICC) July 30, 2023
ರೂಟ್ ಬೆನ್ನಲ್ಲೇ 103 ಬಾಲ್ನಲ್ಲಿ 78 ರನ್ಗಳಿಸಿ ಆಡುತ್ತಿದ್ದ ಜಾನಿ ಬೈರ್‌ಸ್ಟೋವ್ ಸಹ ವಿಕೆಟ್ ಕೊಟ್ಟರು. ಅವರ ನಂತರ ತಂಡ ಗಾಯದಿಂದ ಬಳಲುತ್ತಿದ್ದರೂ ನೋವಿನ ನಡುವೆಯೇ ತಂಡಕ್ಕೆ 29 ರನ್ ಕೊಡುಗೆಯನ್ನು ಮೋಯಿನ್ ಅಲಿ ನೀಡಿದರು. ಕ್ರೀಸ್ನಲ್ಲಿ ಕ್ರಿಸ್ ವೋಕ್ಸ್ ಮತ್ತು ಮಾರ್ಕ್ ವುಡ್ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 80 ಓವರ್ಗೆ 9 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿತ್ತು. ಕ್ರೀಸ್ನಲ್ಲಿ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಇದ್ದರು.
ದಾಖಲೆ ಬರೆದ ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್ ಜೋಡಿ: ನಾಲ್ಕನೇ ದಿನ 1.5 ಓವರ್ ಆಡಿದ ಇಂಗ್ಲೆಂಡ್ 6 ರನ್ ಸೇರಿಸಿ 395 ರನ್ ಗಳಿಸಿ ಆಲ್ಔಟ್ ಆಯಿತು. ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ನಂತರ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಜೋಡಿ ಎಂಬ ದಾಖಲೆಯನ್ನು ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಜೋಡಿ ಪಡೆಯಿತು (ಸ್ಟುವರ್ಟ್ ಬ್ರಾಡ್ಗೆ ಇದು ಕೊನೆಯ ಇನ್ನಿಂಗ್ಸ್). ಸಚಿನ್-ದ್ರಾವಿಡ್ ಜೋಡಿ 1996-2012 ವರೆಗೆ 146 ಪಂದ್ಯದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. 138 ಪಂದ್ಯಗಳಲ್ಲಿ ಆಂಡರ್ಸನ್ ಮತ್ತು ಬ್ರಾಡ್ ಜೋಡಿ ಆಡಿದೆ.
ಇದನ್ನೂ ಓದಿ: 12 ರನ್ಗಳ ಹಿನ್ನಡೆಯಲ್ಲಿ ಇಂಗ್ಲೆಂಡ್: ಸರಣಿ ಟೈ ಮಾಡಿಕೊಳ್ಳಲು ಸ್ಟೋಕ್ಸ್ ಚಿಂತನೆ..