ETV Bharat / sports

ರೆಡ್-ಬಾಲ್ ಕ್ರಿಕೆಟ್ ನನ್ನ ಮೊದಲ ಆದ್ಯತೆ : ಭುವನೇಶ್ವರ ಕುಮಾರ್ - ರೆಡ್-ಬಾಲ್ ಕ್ರಿಕೆಟ್

ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿಯ ಅಂತಿಮ ಪಂದ್ಯದ ನಂತರ ಮಾತನಾಡಿದ ಭುವನೇಶ್ವರ ಕುಮಾರ್, ರೆಡ್-ಬಾಲ್ ಕ್ರಿಕೆಟ್ ನನ್ನ ಮೊದಲ ಆದ್ಯತೆ ಎಂದು ಹೇಳಿದ್ದಾರೆ.

Bhuvneshwar
ಭುವನೇಶ್ವರ ಕುಮಾರ್
author img

By

Published : Mar 29, 2021, 12:31 PM IST

ಪುಣೆ: ಭಾರತ ತಂಡದ ಪ್ರಮುಖ ಬೌಲಿಂಗ್​ ಅಸ್ತ್ರ, ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಗಾಯದ ಸಮಸ್ಯೆಗಳನ್ನು ಎದುರಿಸಿದ್ದ ಭುವನೇಶ್ವರ ಕುಮಾರ್, ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವಕಾಶ ಪಡೆದು ಭಾರತದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿಯ ಅಂತಿಮ ಪಂದ್ಯದ ನಂತರ ಮಾತನಾಡಿದ ಅವರು, ರೆಡ್-ಬಾಲ್ ಕ್ರಿಕೆಟ್ ನನ್ನ ಮೊದಲ ಆದ್ಯತೆ ಎಂದು ಹೇಳಿದ್ದಾರೆ.

ಭುವನೇಶ್ವರ ಕುಮಾರ್ ಹೇಳಿಕೆ

ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿ ಆಡಿದ್ದು ನಾನು ಈ ಬಾರಿಯ ಐಪಿಎಲ್​ನಲ್ಲಿ ನನ್ನ ಹೊಣೆ ಮತ್ತು ನಿರ್ವಹಣೆಯನ್ನ ಹೇಗೆ ನಿಭಾಯಿಸಬೇಕೆನ್ನುವುದನ್ನು ಅರಿತುಕೊಂಡಿದ್ದೆನೆ. ಕ್ರಿಕೆಟ್​ನಲ್ಲಿ ನನ್ನ ಮೊದಲ ಆದ್ಯತೆ ಟೆಸ್ಟ್​ ಕ್ರಿಕೆಟ್​ಗೆ ಎಂದು ಹೇಳಿದ್ದಾರೆ.

ಟೆಸ್ಟ್‌ನಲ್ಲಿ ಪುನರಾಗಮನ ಮಾಡುವ ಬಗ್ಗೆ ಯೋಚಿಸುತ್ತಿದ್ದೀರಾ ಎಂದು ಕೇಳಿದಾಗ, "ಖಂಡಿತವಾಗಿಯೂ, ರೆಡ್-ಬಾಲ್ ಕ್ರಿಕೆಟ್ ನನ್ನ ಮೊದಲ ಆದ್ಯತೆ. ಟೆಸ್ಟ್​ ಕ್ರಿಕೆಟ್​​ ಮನಸ್ಸಿನಲ್ಲಿಟ್ಟುಕೊಂಡು ನಾನು ಸಿದ್ಧತೆ ನಡೆಸುತ್ತೇನೆ. ಟೆಸ್ಟ್ ಪಂದ್ಯಗಳಿಗೆ ಯಾವ ರೀತಿಯ ತಂಡವನ್ನು ಆಯ್ಕೆ ಮಾಡಲಾಗುವುದು ಎನ್ನುವ ಸಂಪೂರ್ಣ ಸನ್ನಿವೇಶವನ್ನು ಅರಿತುಕೊಂಡಿದ್ದೇನೆ "ಎಂದರು.

ಓದಿ : ಆಂಗ್ಲರ ವಿರುದ್ಧ 7 ರನ್​ಗಳ ರೋಚಕ ಜಯ ಸಾಧಿಸಿದ ಭಾರತ.. 2-1ರಲ್ಲಿ ಏಕದಿನ ಸರಣಿ ವಶ!

"ನಾನು ಹಿಂದೆ ಮಾಡಿದಂತೆ ದೀರ್ಘಾವಧಿಯ ಯೋಜನೆಗಳನ್ನು ಮಾಡುವುದನ್ನು ನಿಲ್ಲಿಸಿದ್ದೇನೆ, ನಾನು ಫಿಟ್ ಆಗಿರುವುದಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ." ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.