ನವದೆಹಲಿ : ಅಹಮದಾಬಾದ್‌ನಲ್ಲಿ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡಬೇಕಿದ್ದ ಇಂಗ್ಲೆಂಡ್ ಎಡಗೈ ವೇಗದ ಬೌಲರ್ ಸ್ಯಾಮ್ ಕರನ್ ಹಲವು ಕಾರಣಗಳಿಂದ ಮೊದಲೇ ನಿಗದಿತ ಸಮಯಕ್ಕೆ ಬರಲು ಸಾಧ್ಯವಿಲ್ಲದ ಕಾರಣ 4ನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.
ವ್ಯವಸ್ಥಾಪನಾ ಸಮಸ್ಯೆಗಳಿಂದಾಗಿ ಕರನ್ ಮೊದಲೇ ನಿಗದಿತ ಸಮಯಕ್ಕೆ ಬರಲು ಸಾಧ್ಯವಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಗುರುವಾರ ದೃಢಪಡಿಸಿದೆ.
ಆದರೆ, ಮಾರ್ಚ್ 12ರಂದು ಆರಂಭವಾಗುವ ಟಿ-20 ಸರಣಿ ಆಡಲಿದ್ದಾರೆ ಎಂದು ಇಸಿಬಿ ಸ್ಪಷ್ಟಪಡಿಸಿದೆ. ಫೆಬ್ರವರಿ 26ರಂದು ಭಾರತಕ್ಕೆ ಟಿ-20 ತಂಡಕ್ಕೆ ಆಯ್ಕೆಯಾದ ಆಟಗಾರರು ಬಂದಿಳಿಯಲಿದ್ದಾರೆ.
ಓದಿ : ಸ್ಟುವರ್ಟ್ ಬಿನ್ನಿ, ವಿಹಾರಿ, ಫಿಂಚ್, ಸೌಥಿ ಸೇರಿ ಸ್ಫೋಟಕ ಪ್ಲೇಯರ್ಸ್ ಅನ್ಸೋಲ್ಡ್!