ETV Bharat / sports

ದೀರ್ಘ ಇನ್ನಿಂಗ್ಸ್​ ಆಡುವ ಚೇತೇಶ್ವರ ಪೂಜಾರ ನಮಗೆ ದೊಡ್ಡ ವಿಕೆಟ್: ಜೋ ರೂಟ್ - ಭಾರತ ಮತ್ತು ಇಂಗ್ಲೆಂಡ್​ ಟೆಸ್ಟ್​ ಸರಣಿ

ನಮ್ಮವರು ಪೂಜಾರರಂತೆ ಮಾನಸಿಕವಾಗಿ ಬಲಶಾಲಿಯಾಗಬೇಕು. ಕೆಲವೊಮ್ಮೆ ನಾವು ನಮ್ಮ ತಾಳ್ಮೆ ಪ್ರಯತ್ನಿಸಬೇಕು. ಸುದೀರ್ಘ ಆಟ ಆಡುವ ಸಾಮರ್ಥ್ಯ ಹೊಂದುವ ಕೌಶಲ ನಮ್ಮಲ್ಲಿ ಬೆಳಸಿಕೊಳ್ಳಬೇಕು ಎಂದು ಜೋ ರೂಟ್ ಹೇಳಿದರು.

Pujara will be huge wicket for us: Root
ಜೋ ರೂಟ್ ಮತ್ತು ಚೇತೇಶ್ವರ ಪೂಜಾರ
author img

By

Published : Feb 4, 2021, 5:59 PM IST

ಚೆನ್ನೈ: ಗೋಡೆಯಂತೆ ನಿಂತು ವಿಕೆಟ್​ ಕಾಪಾಡುತ್ತ ದೀರ್ಘ ಇನ್ನಿಂಗ್ಸ್​​ ಆಡುವ ಸಾಮರ್ಥ್ಯ ಹೊಂದಿರುವ ಚೇತೇಶ್ವರ ಪೂಜಾರ ಅವರ ವಿಕೆಟ್​ ಅತೀ ಮುಖ್ಯ ಮತ್ತು ದೊಡ್ಡದು ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಹೇಳಿದ್ದಾರೆ.

ನಾಲ್ಕು ಪಂದ್ಯಗಳ ಡೌನ್​ ಅಂಡರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ರಾಜ್‌ಕೋಟ್ ಮೂಲದ ಪೂಜಾರಾ ಅದನ್ನು ಸಾಬೀತುಪಡಿಸಿದ್ದಾರೆ. ಈ ಸರಣಿಯಲ್ಲಿ ಮೂರು ಅರ್ಧಶತಕ ಬಾರಿಸಿದ ಅವರು, 900ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದ್ದಾರೆ.

ಇದನ್ನೂ ಓದಿ...ಧೋನಿ, ಸಚಿನ್​, ಬ್ರಾಡ್ಮನ್​, ಲಾರಾ, ದ್ರಾವಿಡ್​ ದಾಖಲೆ ಮೇಲೆ ಕೊಹ್ಲಿ ಕಣ್ಣು... ಇಲ್ಲಿದೆ ಅವುಗಳ ಸಂಪೂರ್ಣ ವಿವರ

ಅವರೊಬ್ಬ ಅದ್ಭುತ ಆಟಗಾರ: ನನಗನಿಸಿದ ಮಟ್ಟಿಗೆ ಚೇತೇಶ್ವರ ಪೂಜಾರಾ ಅದ್ಭುತ ಆಟಗಾರ. ಅವರ ಬ್ಯಾಟಿಂಗ್ ಶೈಲಿ ಮತ್ತು ಆಟದ ಮೇಲಿನ ಪ್ರೀತಿ ತುಂಬ ಆಸಕ್ತಿದಾಯಕ. ಅವರೊಂದಿಗೆ ಕೇವಲ ಎರಡು ಪಂದ್ಯಗಳನ್ನು ಆಡಿರುವ ಸಂತೋಷವಿದ್ದು, ಪೂಜಾರ ಅವರಿಂದ ನಾವು ಬಹಳಷ್ಟು ಕಲಿಯಬೇಕಿದೆ ಎಂದು ಶುಕ್ರವಾರ ಇಲ್ಲಿ ಪ್ರಾರಂಭವಾಗುವ ಮೊದಲ ಟೆಸ್ಟ್ ಮುನ್ನಾ ದಿನ ವರ್ಚುಯಲ್ ಪತ್ರಿಕಾಗೋಷ್ಠಿಯಲ್ಲಿ ರೂಟ್ ಹೇಳಿದರು.

ಪೂಜಾರ ವಿಕೆಟ್​ ಕಬಳಿಸುವುದೇ ತಂಡದ ಗುರಿ: ಅವರೊಮ್ಮೆ ಕ್ರೀಸ್​ಗೆ ಬಂದರೆ ದೀರ್ಘಕಾಲ ಇನ್ನಿಂಗ್ಸ್​ ಮುನ್ನೆಡಸಲಿದ್ದಾರೆ. ಅವರನ್ನು ಬೇಗನೇ ಔಟ್​ ಮಾಡುವ ಗುರಿಯನ್ನು ಹೊಂದಿದ್ದೇವೆ. ಆದರೆ, ಅಷ್ಟು ಬೇಗನೇ ಔಟಾಗುವವರಲ್ಲ. ಬೌಲರ್​​ಗಳೂ ಸುಸ್ತಾಗುತ್ತಾರೆ. ಒಂದು ವೇಳೆ ತಂಡ ಸಂಕಷ್ಟದಲ್ಲಿದ್ದರೆ ಗೋಡೆಯಂತೆ ನಿಂತು ಪಾರು ಮಾಡುತ್ತಾರೆ. ಹೀಗಾಗಿ, ಅವರೇ ನಮಗೆ ಬಹುಮುಖ್ಯವಾದ ವಿಕೆಟ್​ ಎಂದರು.

ನಮ್ಮವರು ಪೂಜಾರಾರಂತೆ ಮಾನಸಿಕವಾಗಿ ಬಲಶಾಲಿಯಾಗಬೇಕು. ಕೆಲವೊಮ್ಮೆ ನಾವು ನಮ್ಮ ತಾಳ್ಮೆಯನ್ನು ಪ್ರಯತ್ನಿಸಬೇಕು. ಸುದೀರ್ಘ ಆಟ ಆಡುವ ಸಾಮರ್ಥ್ಯ ಹೊಂದುವ ಕೌಶಲ ನಮ್ಮಲ್ಲಿ ಬೆಳಸಿಕೊಳ್ಳಬೇಕು. ಅದಕ್ಕೆ ಮಾನಸಿಕವಾಗಿ ಸದೃಢರಾಗಬೇಕು. ಅವರಿಗೆ ಬೌಲಿಂಗ್​ ಮಾಡುವುದೇ ದೊಡ್ಡ ಸವಾಲು ಎಂದರು. ಪೂಜಾರ ಈಚೆಗಷ್ಟೇ 81 ಟೆಸ್ಟ್ ಪಂದ್ಯಗಳಿಂದ 6000 ರನ್​ಗಳನ್ನು ಪೂರೈಸಿದ್ದಾರೆ. ಅಜೇಯ 206 ರನ್ ಅವರ ಅತ್ಯಧಿಕ ಸ್ಕೋರ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.