ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಯಲ್ಲಿ ಟೀಮ್ ಇಂಡಿಯಾ 3-2 ಅಂತರದಿಂದ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿ ವಶ ಪಡಿಸಿಕೊಂಡಿದೆ.
ಹಲವು ಬದಲಾವಣೆಯೊಂದಿಗೆ 5 ನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ, ಕೆ.ಎಲ್. ರಾಹುಲ್ಗೆ ಕೊಕ್ ನೀಡಿ ಟಿ. ನಟರಾಜನ್ಗೆ ಚಾನ್ಸ್ ನಿಡಲಾಗಿತ್ತು. ಈ ಪಂದ್ಯದಲ್ಲಿ 6 ಬೌಲರ್ಗಳನ್ನು ಕಣಕ್ಕಿಳಿಸಿದ ಭಾರತ ತಂಡ ಪಕ್ಕಾ ಪ್ಲಾನ್ ಮೂಲಕ ಅಖಾಡಕ್ಕಿಳಿದಿತ್ತು.
-
Taking back happy memories from Ahmedabad 🤘👏
— BCCI (@BCCI) March 20, 2021 " class="align-text-top noRightClick twitterSection" data="
Onto the ODIs next 👍👍#TeamIndia @GCAMotera #INDvENG @Paytm pic.twitter.com/vGpNVkylZX
">Taking back happy memories from Ahmedabad 🤘👏
— BCCI (@BCCI) March 20, 2021
Onto the ODIs next 👍👍#TeamIndia @GCAMotera #INDvENG @Paytm pic.twitter.com/vGpNVkylZXTaking back happy memories from Ahmedabad 🤘👏
— BCCI (@BCCI) March 20, 2021
Onto the ODIs next 👍👍#TeamIndia @GCAMotera #INDvENG @Paytm pic.twitter.com/vGpNVkylZX
ರಾಹುಲ್ಗೆ ಅವಕಾಶ ನೀಡದ ಕಾರಣ ರೋಹಿತ್ ಶರ್ಮಾ ಜೊತೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿದಿದ್ದರು. ಈ ಜೋಡಿ ಟೀಮ್ ಇಂಡಿಯಾಗೆ ಭದ್ರ ಬುನಾದಿ ಹಾಕಿತ್ತು. ಈ ಜೋಡಿ ಮೊದಲ ವಿಕೆಟ್ಗೆ 94 ರನ್ಗಳ ಜೊತೆಯಾಟವಾಡಿತ್ತು. ಹಿಟ್ ಮ್ಯಾನ್ ರೋಹಿತ್ ಶರ್ಮಾ 64 ರನ್ಗಳಿಸಿದರೆ, ನಾಯಕ ವಿರಾಟ್ ಕೊಹ್ಲಿ ಅಜಯ 80 ರನ್ಗಳಿಸಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾಗಿದ್ದರು.
-
C.H.A.M.P.I.O.N.S! 🏆🏆#TeamIndia @GCAMotera #INDvENG @Paytm pic.twitter.com/V0zCW4BugT
— BCCI (@BCCI) March 20, 2021 " class="align-text-top noRightClick twitterSection" data="
">C.H.A.M.P.I.O.N.S! 🏆🏆#TeamIndia @GCAMotera #INDvENG @Paytm pic.twitter.com/V0zCW4BugT
— BCCI (@BCCI) March 20, 2021C.H.A.M.P.I.O.N.S! 🏆🏆#TeamIndia @GCAMotera #INDvENG @Paytm pic.twitter.com/V0zCW4BugT
— BCCI (@BCCI) March 20, 2021
ಪಂದ್ಯ ಆರಂಭಕ್ಕೂ ಮುಂಚೆ ವಿರಾಟ್ ಕೊಹ್ಲಿ ಮಾತನಾಡಿ "ಅನಿರೀಕ್ಷಿತವಾಗಿ ಕೆ.ಎಲ್. ರಾಹುಲ್ ಐದನೇ ಪಂದ್ಯದಿಂದ ಹೊರಗುಳಿಯುತ್ತಿದ್ದಾರೆ ಹಾಗೂ ರೋಹಿತ್ ಶರ್ಮಾ ಜತೆ ನಾನೇ ಇನಿಂಗ್ಸ್ ಆರಂಭಿಸಲಿದ್ದೇನೆ. ಸೂರ್ಯಕುಮಾರ್‌ಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತೇವೆ. ಗಾಯದಿಂದ ಕಳೆದ ಪಂದ್ಯಗಳಿಂದ ಹೊರಗುಳಿದಿದ್ದ ಟಿ.ನಟರಾಜನ್ ಅಂತಿಮ 11ಕ್ಕೆ ಮರಳಲಿದ್ದಾರೆ. ಆ ಮೂಲಕ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡದ ಸಂಯೋಜನೆ ಉತ್ತಮವಾಗಿದೆ," ಎಂದು ಕೊಹ್ಲಿ ಹೇಳಿದ್ದರು.
ಓದಿ : ಇಂಗ್ಲೆಂಡ್ ಮೇಲೆ ಭಾರತದ ಸವಾರಿ: 3-2 ಅಂತರದಿಂದ ಟಿ-20 ಸರಣಿ ಗೆದ್ದ ಕೊಹ್ಲಿ ಪಡೆ
ಪಂದ್ಯದ ನಂತರ ಮಾತನಾಡಿದ ವಿರಾಟ್ "ರಿಷಭ್ ಮತ್ತು ಶ್ರೇಯಸ್ ಬ್ಯಾಟಿಂಗ್ಗೆ ಇಳಿದೇ ಇಲ್ಲ. ಆದರೂ ನಾವು 224 ರನ್ ಗಳಿಸಿದ್ದೆವು. ಇದರಿಂದ ಗೋತ್ತಾಗುತ್ತೆ ನಮ್ಮ ಬ್ಯಾಟಿಂಗ್ ಬಲ ಹೆಚ್ಚಿದೆ" ಎಂದು ಹೇಳಿದರು.
"ಇಂದು ರೋಹಿತ್ ಮತ್ತು ನಾನು ಇಬ್ಬರೂ ಉತ್ತಮ ರನ್ ಕಲೆ ಹಾಗುವ ಉದ್ದೇಶದಲ್ಲಿ ಹೋಗಿದ್ದೆವು. ನಾವು ಮೊದಲೇ ನಿರ್ಧರಿಸಿದ್ದೆವು, ಒಬ್ಬರು ದೊಡ್ಡ ಹೊಡೆತದ ಮೂಲಕ ರನ್ಗಳಿಸಿದರೆ, ಇನ್ನೊಬ್ಬರು ವಿಕೆಟ್ ಕಾಯ್ದುಕೊಂಡು ರನ್ ಮಾಡುವ ಉದ್ದೇಶ ಹೊಂದಿದ್ದೆವು. ಅದರಂತೆ ವರ್ಕೌಟ್ ಆಗಿತ್ತು. ನಮ್ಮಿಬ್ಬರಲ್ಲಿ ಯಾರೇ ಔಟಾದರು, ನಂತರ ಬಂದ ಸೂರ್ಯಕುಮಾರ್ ಮತ್ತು ಹಾರ್ದಿಕ್ ಆ ಆಟವನ್ನ ಮುಂದುವರೆಸುಂತೆ ಪ್ಲಾನ್ ಮಾಡಲಾಗಿತ್ತು ಎಂದು ವಿರಾಟ್ ಹೇಳಿದ್ದಾರೆ.
"ನಾನು ಐಪಿಎಲ್‌ನಲ್ಲೂ ಓಪನರ್ ಆಗಿ ಬ್ಯಾಟಿಂಗ್ ಮಾಡಲಿದ್ದೇನೆ, ಈ ಹಿಂದೆ ಬೇರೆ ಬೇರೆ ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡಿದ್ದೇನೆ. ಆದರೆ ನಮ್ಮಲ್ಲಿ ಈಗ ಮಧ್ಯಮ ಕ್ರಮಾಂಕ ಬಲವಾಗಿದೆ ಎಂದು ನಾನು ಭಾವಿಸುತ್ತೇನೆ "ಎಂದು ಕೊಹ್ಲಿ ಹೇಳಿದರು.