ETV Bharat / sports

ಇತ್ತೀಚಿನ ದಿನಗಳಲ್ಲಿ ಈ ಗೆಲುವು ಅತ್ಯಂತ ಸಿಹಿಯಾಗಿದೆ: ವಿರಾಟ್​ ಕೊಹ್ಲಿ - ವಿರಾಟ್ ಕೊಹ್ಲಿ

ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಭಾರತ ತಂಡ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 317 ರನ್​ಗಳಿಸಿತ್ತು. 318 ರನ್​ಗಳ ಗುರಿ ಬೆನ್ನಟ್ಟಿದ ಪ್ರವಾಸಿ ತಂಡ 251 ರನ್​ಗಳಿಗೆ ಆಲೌಟ್ ಆಗುವ ಮೂಲಕ 66 ರನ್​ಗಳಿಂದ ಸೋಲು ಕಂಡಿತು.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ
author img

By

Published : Mar 24, 2021, 11:31 AM IST

ಪುಣೆ: ಭಾರತ ಹಾಗೂ ಪ್ರವಾಸಿ ಇಂಗ್ಲೆಂಡ್ ತಂಡಗಳ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 66 ರನ್​ಗಲ ಭರ್ಜರಿ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ1-0 ಮುನ್ನಡೆ ಸಾಧಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ "ಇತ್ತೀಚಿನ ದಿನಗಳಲ್ಲಿ ಈ ಗೆಲುವು ಅತ್ಯಂತ ಸಿಹಿಯಾಗಿದೆ. ಎದುರಾಳಿ ತಂಡವನ್ನು ಆಲೌಟ್​ ಮಾಡಿ ಗೆಲುವು ಪಡೆದಿದ್ದು ಅತ್ಯುತ್ತಮವಾಗಿತ್ತು" ಎಂದು ಹೇಳಿದ್ದಾರೆ.

ಟಿ -20 ಸರಣಿಯಲ್ಲಿ ಪ್ಲಾಪ್​ ಆಗಿದ್ದ ಕೆ ಎಲ್ ರಾಹುಲ್ ಈ ಪಂದ್ಯದಲ್ಲಿ ಅರ್ಧಶತಕ ಮಿಂಚಿದರೆ, ಟಿ-20 ಸರಣಿಯಲ್ಲಿ ಬೆಂಚ್ ಕಾದಿದ್ದ ಶಿಖರ್ ಧವನ್​ 98 ರನ್​ಗಳಿ ತಮ್ಮ ಸಾಮರ್ಥ್ಯವನ್ನ ಸಾಬೀತು ಮಾಡಿದ್ದಾರೆ.

"ನಾನು ಈ ಹಿಂದೆ ಹೇಳಿದಂತೆ, ಎಲ್ಲರಿಗೂ ತಮ್ಮ ಸಾಮರ್ಥ್ಯವನ್ನ ಸಾಬೀತು ಮಾಡಲು ಅವಕಾಶ ಬೇಕಾಗುತ್ತದೆ. ಈ ಇನ್ನಿಂಗ್ಸ್​ನಲ್ಲಿ ಶಿಖರ್ ಮತ್ತು ಕೆ.ಎಲ್​​ ರನ್​ ಗಳಿಸಿ ಸಾಬೀತು ಮಾಡಿದ್ದಾರೆ. ಅವರನ್ನ ನಾವು ಬೆಂಬಲಿಸಬೇಕಷ್ಟೆ ಎಂದು ಹೇಳಿದರು.

ಓದಿ : "ಅಂತಾರಾಷ್ಟ್ರೀಯ ಕ್ರಿಕೆಟ್​ ಒತ್ತಡ ನಿಭಾಯಿಸುವುದು ನನಗೆ ತಿಳಿದಿದೆ": ಧವನ್​

"ನಮ್ಮ ಬೌಲರ್‌ಗಳು ಎಷ್ಟು ಪರಿಣಾಮಕಾರಿ ಎಂದು ದೃಢಪಡಿಸಿದ್ದಾರೆ. ಉತ್ತಮ ಬೌಲಿಂಗ್ ದಾಳಿ ಮಾಡಿ ಎದುರಾಳಿ ತಂಡದ ಬ್ಯಾಟ್ಸ್​ಮನ್​ಗಳನ್ನ ಕಟ್ಟಿ ಹಾಕಿ ತಂಡಕ್ಕೆ ದೊಡ್ಡ ಜಯ ತಂದು ಕೊಟ್ಟಿದ್ದಾರೆ " ಎಂದು ಅವರು ಹೇಳಿದರು.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಭಾರತ ತಂಡ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 317 ರನ್​ಗಳಿಸಿತ್ತು. 318ರನ್​ಗಳ ಗುರಿ ಬೆನ್ನಟ್ಟಿದ ಪ್ರವಾಸಿ ತಂಡ 251 ರನ್​ಗಳಿಗೆ ಆಲೌಟ್ ಆಗುವ ಮೂಲಕ 66 ರನ್​ಗಳಿಂದ ಸೋಲು ಕಂಡಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.