ಚೆನ್ನೈ : ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್-ಫಾರ್ಮ್ ಬ್ಯಾಟ್ಸ್‌ಮನ್-ವಿಕೆಟ್‌ಕೀಪರ್ ರಿಷಭ್ ಪಂತ್ ಸ್ಥಾನ ಪಡೆದುಕೊಂಡಿದ್ದಾರೆ. ಶುಕ್ರವಾರ ಈ ಬಗ್ಗೆ ತಂಡದ ನಾಯಕ ವಿರಾಟ್ ಕೊಹ್ಲಿ ಅಧಿಕೃತವಾಗಿ ಹೇಳಿದ್ದಾರೆ. ಇದರಿಂದ 36 ವರ್ಷದ ಅನುಭವಿ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಮೊದಲ ಟೆಸ್ಟ್ನಿಂದ ಹೊರಗುಳಿಯಲಿದ್ದಾರೆ.
23 ವರ್ಷದ ಪಂತ್ ಕೊನೆಯ ಬಾರಿಗೆ ಎರಡು ವರ್ಷಗಳ ಹಿಂದೆ ಭಾರತ ನೆಲದಲ್ಲಿ ಹೈದರಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಆಡಿದ್ದರು. ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ ಮೂರನೇ ಮತ್ತು ಬ್ರಿಸ್ಬೇನ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಪಂತ್ ಉತ್ತಮ ಆಟವಾಡಿ ತಂಡಕ್ಕೆ ಆಸರೆಯಾಗಿದ್ದರು. ಅದರಲ್ಲೂ ನಾಲ್ಕನೇ ಪಂದ್ಯದಲ್ಲಿ ಅತ್ಯುತಮ ಪ್ರದರ್ಶನ ನೀಡುವ ಮೂಲಕ ಗೆಲುವಿನ ರೂವಾರಿಯಾಗಿದ್ದರು.
"ಹೌದು, ರಿಷಭ್ ಪಂತ್ ಮೊದಲ ಟೆಸ್ಟ್ ಪಂದ್ಯದ ಭಾಗವಾಗಲಿದ್ದಾರೆ. ಆಸ್ಟ್ರೇಲಿಯಾ ಟೂರ್ನಲ್ಲಿ ಪಂತ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ನಂತರ ರಿಷಭ್ ಅದ್ಭುತವಾದ ಪ್ರದರ್ಶನ ನೀಡ್ತಿದ್ದು, ತಂಡಕ್ಕೆ ಇದು ವರವಾಗಲಿದೆ.
ಓದಿ : ಯಾರಿಗೆ ಡಬ್ಲ್ಯೂಟಿಸಿ ಫೈನಲ್ ಟಿಕೆಟ್? ತವರಿನಲ್ಲಿ ಸೋಲಿಲ್ಲದ ಸರದಾರನಿಗೆ ಆಂಗ್ಲರು ಹಾಕ್ತಾರಾ ಬ್ರೇಕ್?
ಕೊನೆಯ ಬಾರಿ 2018ರ ಅಕ್ಟೋಬರ್‌ನಲ್ಲಿ ತವರು ನೆಲದಲ್ಲಿ ಆಡಿದ್ದ ಪಂತ್ ಈಗ ಮತ್ತೆ ಕಣಕ್ಕಿಳಿಯುತ್ತಿದ್ದಾರೆ. ಇವರು ಭವಿಷ್ಯದ ಭರವಸೆಯ ಆಟಗಾರ" ಎಂದು ವಿರಾಟ್ ಹೇಳಿದ್ದಾರೆ.