ಚೆನ್ನೈ: ಭಾರತದ ಎದುರಿನ ಮೊದಲ ಟೆಸ್ಟ್ನ ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ. ನಾಯಕ ಜೋ ರೂಟ್ ತನ್ನ 100ನೇ ಪಂದ್ಯದಲ್ಲಿ ಬಾರಿಸಿದ ದಾಖಲೆಯ ದ್ವಿಶತಕದ ನೆರವಿನಿಂದ ತಂಡವು ಪ್ರಥಮ ಇನ್ನಿಂಗ್ಸ್ನಲ್ಲಿ ಪಾರಮ್ಯ ಮೆರೆದಿದೆ.
2ನೇ ದಿನದ ಮುಕ್ತಾಯಕ್ಕೆ ಪ್ರಥಮ ಇನ್ನಿಂಗ್ಸ್ನಲ್ಲಿ 8 ವಿಕೆಟ್ ಕಳೆದುಕೊಂಡು 555 ರನ್ ಗಳಿಸಿರುವ ಇಂಗ್ಲೆಂಡ್, ಡಿಕ್ಲೇರ್ ಘೋಷಿಸದೆ ಮೂರನೇ ದಿನಕ್ಕೆ ಆಟವನ್ನು ಕಾಯ್ದಿರಿಸಿಕೊಂಡಿದೆ. ಡಾಮಿನಿಕ್ ಬೇಸ್ ಹಾಗೂ ಜಾಕ್ ಲೀಚ್ ನಾಳಿನ ಆಟಕ್ಕೆ ಬ್ಯಾಟಿಂಗ್ ಉಳಿಸಿಕೊಂಡಿದ್ದಾರೆ.
ಮೊದಲ ದಿನದ ಅಂತ್ಯಕ್ಕೆ 3ವಿಕೆಟ್ ಕಳೆದುಕೊಂಡು 263 ರನ್ ಗಳಿಸಿದ್ದ ಆಂಗ್ಲರು, ಇಂದು ಕೂಡ ಭಾರತೀಯ ಬೌಲರ್ಗಳ ಮೇಲೆ ಸವಾರಿ ಮಾಡಿದರು. ನಿನ್ನೆ 128 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದ ರೂಟ್, ಇಂದು 200ರ ಗಡಿ ದಾಟುವ ಮೂಲಕ 100ನೇ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು.
ರೂಟ್ಗೆ ಮೊದಲ ಸೆಷನ್ ಆರಂಭದಿಂದ ಸಾಥ್ ನೀಡಿದ ಅಲ್ರೌಂಡರ್ ಬೆನ್ಸ್ಟೋಕ್ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ತನ್ನ ಬತ್ತಳಿಕೆ ಮತ್ತೊಂದು ಫಿಫ್ಟಿಯನ್ನು ಹಾಕಿಕೊಂಡರು. ಅಲ್ಲದೆ, ಬೌಲರ್ಗಳು ನಿನ್ನೆಯಂತೆ ಇಂದು ಸಂಜೆಯವರೆಗೂ ವಿಕೆಟ್ ಪಡೆಯಲು ಹೆಣಗಾಡಿದರು. ಆದರೆ, ಅಂತಿಮ ಸೆಷನ್ನಲ್ಲಿ ಭಾರತದ ಬೌಲರ್ಗಳು ಆಂಗ್ಲರನ್ನು ಬಹುಬೇಗನೇ ಪೆವಿಲಿಯನ್ ಕಳುಹಿಸುವಲ್ಲಿ ಯಶಸ್ವಿಯಾದರು.
ಊಟದ ವಿರಾಮದ ವೇಳೆಗೆ ಇಂಗ್ಲೆಂಡ್ 3 ವಿಕೆಟ್ಗೆ 355 ರನ್ ಗಳಿಸಿತ್ತು. ಅದಾಗಲೇ ರೂಟ್ 150ರ ಗಡಿ ದಾಟಿದ್ದರೆ, ನಾಯಕನಿಗೆ ಸಾಥ್ ನೀಡುತ್ತಿದ್ದ ಸ್ಟೋಕ್ಸ್ ತನ್ನ 23ನೇ ಅರ್ಧಶತಕ ಪೂರೈಸಿದರು. ಆದರೆ, ಭಾರತದ ಬೌಲರ್ಗಳು ವಿಕೆಟ್ ಪಡೆಯಲಾಗದೆ ಸುಸ್ತಾದರು. ವಿರಾಮದ ನಂತರವೂ ಈ ಇಬ್ಬರ ಆಟ ಬೃಹತ್ ಇನ್ನಿಂಗ್ಸ್ ಕಟ್ಟುವತ್ತ ಸಾಗಿತು.
ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಜೋ ರೂಟ್: ಈ ಮೂಲಕ ಸತತ ಮೂರು ಟೆಸ್ಟ್ ಪಂದ್ಯಗಳಲ್ಲಿ 150ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿರುವ ಜೋ ರೂಟ್ ವಿಶಿಷ್ಟ ದಾಖಲೆ ಬರೆದವರ ಸಾಲಿಗೆ ಸೇರಿಕೊಂಡರು. ಟೆಸ್ಟ್ನಲ್ಲಿ ಸತತ ನಾಲ್ಕು ಬಾರಿ 150+ ರನ್ ಸಾಧಿಸಿದ ಶ್ರೀಲಂಕಾದ ಕುಮಾರ್ ಸಂಗಕ್ಕಾರ ಮೊದಲ ಸ್ಥಾನದಲ್ಲಿದ್ದಾರೆ.
ನಂತರದ ಸ್ಥಾನದಲ್ಲಿ ಸತತ 3 ಬಾರಿ 150+ ರನ್‌ಗಳ ಸಾಧನೆಗೈದ ವ್ಯಾಲಿ ಹಮ್ಮಾಂಡ್, ಡಾನ್ ಬ್ರಾಡ್ಮನ್, ಜಹೀರ್ ಅಬ್ಬಾಸ್, ಮುದಾಸ್ಸರ್ ನಜರ್ ಹಾಗೂ ಟಾಮ್ ಲಾಥಮ್ ಇದ್ದಾರೆ. ಈ ಪಟ್ಟಿಗೀಗ ರೂಟ್ ಸೇರಿಕೊಂಡಿದ್ದಾರೆ. ಅಲ್ಲದೆ, ಟೆಸ್ಟ್ನಲ್ಲಿ ಈವರೆಗೂ 20 ಶತಕ ಸಿಡಿಸಿರುವ ರೂಟ್ ಈ ಪೈಕಿ 10 ಬಾರಿ 150ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದ್ದಾರೆ. ಕೊಹ್ಲಿ ಕೂಡ 10 ಬಾರಿ 150ಕ್ಕೂ ಅಧಿಕ ರನ್ ಬಾರಿಸಿದ್ದಾರೆ.
ಇದನ್ನೂ ಓದಿ...ಜೋ ರೂಟ್ ಮತ್ತೊಂದು ದಾಖಲೆ: ಶತಕದ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಮೊದಲ ಆಟಗಾರ
ಆದರೆ, ಬಿರುಸಿನ ದಾಳಿ ನಡೆಸುತ್ತಾ ಶತಕದತ್ತ ಮುನ್ನುಗ್ಗುತ್ತಿದ್ದ ಸ್ಟೋಕ್ಸ್ (82), ನದೀಮ್ ಬೌಲಿಂಗ್ನಲ್ಲಿ ಸಿಕ್ಸರ್ ಬಾರಿಸಲು ಹೋಗಿ ಚೇತೇಶ್ವರ ಪೂಜಾರಗೆ ಕ್ಯಾಚಿತ್ತರು. 10 ಬೌಂಡರಿ ಮತ್ತು 3 ಸಿಕ್ಸರ್ ಅವರ ಅರ್ಧಶತಕದಲ್ಲಿ ಸೇರಿವೆ. ರೂಟ್ ಮತ್ತು ಸ್ಟೋಕ್ಸ್ ಅಬ್ಬರದ ಬ್ಯಾಟಿಂಗ್ನಿಂದ 4ನೇ ವಿಕೆಟ್ಗೆ 124 ರನ್‌ಗಳ ಜೊತೆಯಾಟ ಮೂಡಿಬಂತು.
ಮೊದಲನೇ ದಿನದಿಂದಲೂ ಭಾರತದ ವೇಗಿಗಳನ್ನು ಕಾಡಿದ ರೂಟ್ 143ನೇ ಓವರ್ನ 2ನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ದ್ವಿಶತಕ ಪೂರೈಸಿಕೊಂಡರು. ಆದರೆ, ಇನ್ನೂರರ ಗಡಿ ದಾಟಿ 250ರತ್ತ ಮುನ್ನುಗ್ಗುತ್ತಿದ್ದ ರೂಟ್ಗೆ ಸ್ಪಿನ್ನರ್ ಶಹಬಾದ್ ನದೀಮ್ ಪೆವಿಲಿಯನ್ ದಾರಿ ತೋರಿಸಿದರು. ಎಲ್ಬಿಗೆ ಬಲಿಯಾದ ರೂಟ್ನ 218ರನ್‌ಗಳ ಆಟದಲ್ಲಿ 19 ಬೌಂಡರಿ ಹಾಗೂ 2 ಸಿಕ್ಸರ್ ಸೇರಿವೆ.
ನಿನ್ನೆ ಮತ್ತು ಇಂದು ದಂಡನೆಗೆ ಒಳಗಾಗಿದ್ದ ಬೌಲರ್ಗಳು ಎರಡನೇ ದಿನದ ಕೊನೆಯ ಸೆಷನ್ನಲ್ಲಿ ಮತ್ತೆ ಹಳಿಗೆ ಮರಳಿದರು. ನಾಯಕನ ಜೊತೆ ಅರ್ಧಶತಕ ಜೊತೆಯಾಟವಾಡಿದ ಪೋಪ್ (34), ಅಶ್ವಿನ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ನಂತರ ಕ್ರೀಸ್ಗೆ ಬಂದ ಜೋಸ್ ಬಟ್ಲರ್ ಮತ್ತು ಬೆಸ್ ಭಾರತದ ಬೌಲರ್ಗಳಿಗೆ ಬೆಂಡೆತ್ತಲು ಶುರು ಮಾಡಿದರು. ಈಗಾಗಲೇ ಆರು ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ 500ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.
-
India bounced back in the last session with four wickets but England finished the day on a high with a solid 555/8.#INDvENG | https://t.co/gnj5x4GOos pic.twitter.com/v4m2TsfR17
— ICC (@ICC) February 6, 2021 " class="align-text-top noRightClick twitterSection" data="
">India bounced back in the last session with four wickets but England finished the day on a high with a solid 555/8.#INDvENG | https://t.co/gnj5x4GOos pic.twitter.com/v4m2TsfR17
— ICC (@ICC) February 6, 2021India bounced back in the last session with four wickets but England finished the day on a high with a solid 555/8.#INDvENG | https://t.co/gnj5x4GOos pic.twitter.com/v4m2TsfR17
— ICC (@ICC) February 6, 2021
30 ರನ್ ಗಳಿಸಿದ್ದ ಬಟ್ಲರ್, ಇಶಾಂತ್ ಶರ್ಮಾ ಬೌಲಿಂಗ್ನಲ್ಲಿ ಬೋಲ್ಡ್ ಆದರು. ಈ ಮೂಲಕ ಇಶಾಂತ್ ಈ ಟೆಸ್ಟ್ನಲ್ಲಿ ಮೊದಲ ವಿಕೆಟ್ ಪಡೆದುಕೊಂಡರು. ಬಟ್ಲರ್ ಔಟಾದ ನಂತರದ ಎಸೆತದಲ್ಲೇ ಇಶಾಂತ್ಗೆ ಜೋಫ್ರಾ ಆರ್ಚರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಇಂಗ್ಲೆಂಡ್ 525 ರನ್ಗೆ 8 ವಿಕೆಟ್ ಕಳೆದುಕೊಂಡಿತು. 175ನೇ ಓವರ್ನ ಮೊದಲ ಬಾಲ್ನಲ್ಲಿ ಹಿಟ್ಮ್ಯಾನ್ ರೋಹಿತ್ ಶರ್ಮಾನತ್ತ ಬೆಸ್ ಹೊಡೆದರು. ಆದರೆ, ಗಾಳಿಯಲ್ಲಿ ಬಂದ ಬಾಲ್ ಅನ್ನು ರೋಹಿತ್ ಶರ್ಮಾ ಕೈ ಚೆಲ್ಲಿದರು. ಭಾರತದ ಪರ ಇಶಾಂತ್, ನದೀಮ್, ಅಶ್ವಿನ್, ಬುಮ್ರಾ ತಲಾ 2 ವಿಕೆಟ್ ಪಡೆದುಕೊಂಡಿದ್ದಾರೆ.