ಚೆನ್ನೈ: ಎಂ. ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಹಿಟ್ಮ್ಯಾನ್ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದ ಮೂಲಕ ಶರ್ಮಾ ತಮ್ಮ ಟೆಸ್ಟ್ ಕರಿಯರ್ನ 7 ನೇ ಶತಕ ಬಾರಿಸಿದರು. ರೋಹಿತ್ ಶರ್ಮಾ 131 ಬೌಲ್ಗಳಲ್ಲಿ 14 ಬೌಂಡರಿ ಎರಡು ಸಿಕ್ಷರ್ ನೆರವಿನಿಂದ 100 ರನ್ಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡುತ್ತಿರುವ ರಹಾನೆ 25* ರನ್ ಗಳಿಸಿದ್ದಾರೆ.
ಟಾಸ್ ಗೆದ್ದು ಟೀಮ್ ಇಂಡಿಯಾ ಬ್ಯಾಟಿಂಗ್ಗೆ ಇಳಿದ ಟೀಮ್ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿದೆ.
-
💯
— ICC (@ICC) February 13, 2021 " class="align-text-top noRightClick twitterSection" data="
Seventh Test hundred for Rohit Sharma – his first in Chennai 👏#INDvENG | https://t.co/DSmqrU68EB pic.twitter.com/uvktWDMWHC
">💯
— ICC (@ICC) February 13, 2021
Seventh Test hundred for Rohit Sharma – his first in Chennai 👏#INDvENG | https://t.co/DSmqrU68EB pic.twitter.com/uvktWDMWHC💯
— ICC (@ICC) February 13, 2021
Seventh Test hundred for Rohit Sharma – his first in Chennai 👏#INDvENG | https://t.co/DSmqrU68EB pic.twitter.com/uvktWDMWHC
ಚಿಪಾಕ್ ಅಂಗಳದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದ ಟೀಮ್ ಇಂಡಿಯಾಗೆ ಆರಂಭದಲ್ಲೇ ಆಂಗ್ಲ ಪಡೆ ಶಾಕ್ ನೀಡಿತು. ಆರಂಭಿಕರಾಗಿ ಬ್ಯಾಟಿಂಗ್ಗೆ ಬಂದ ಶುಭಮನ್ ಗಿಲ್ ಹಾಗೂ ಹಿಟ್ಮ್ಯಾನ್ ರೋಹಿತ್ ಶರ್ಮಾ ತಂಡಕ್ಕೆ ಕಳಪೆ ಆರಂಭ ನೀಡಿದರೆ. ಕೇವಲ ಮೂರು ಬೌಲ್ ಎದುರಿಸಿ ಶೂನ್ಯ ರನ್ಗಳಿಸಿದ ಗಿಲ್, ಓಲೀ ಸ್ಟೋನ್ ಬೌಲಿಂಗ್ನಲ್ಲಿ ಎಲ್ಬಿಡಬ್ಲುಗೆ ಬಲಿಯಾಗುವ ಮೂಲಕ ಪೆವಲಿಯನ್ ಹಾದಿ ಹಿಡಿದರು.
ನಂತರ ರೋಹಿತ್ ಶರ್ಮಾ ಜೊತೆಗೂಡಿದ ಅನುಭವಿ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ 58 ಬೌಲ್ಗಳಲ್ಲಿ ಕೇವಲ 21 ರನ್ಗಳಿಸಿ ಜಾಕ್ ಲೀಚ್ಗೆ ಔಟಾದರು. 85 ರನ್ಗಳಿಗೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾಗೆ ಆಸರೆಯಾಗಬೇಕಿದ್ದ ನಾಯಕ ವಿರಾಟ್ ಕೊಹ್ಲಿ ಡಕ್ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಅತ್ತ ವಿಕೆಟ್ ಬೀಳುತ್ತಿದ್ದರೂ ಇತ್ತ ಕ್ರೀಸ್ಗೆ ಅಂಟಿಕೊಂಡು ನಿಂತ ಹಿಟ್ಮ್ಯಾನ್ ರೋಹಿತ್ ಶರ್ಮಾ ಹೊಡಿ ಬಡಿ ಆಟಕ್ಕೆ ಮುಂದಾರು. ಕೇವಲ 129 ಬೌಲ್ಗಳಲ್ಲಿ 14 ಬೌಂಡರಿ 2 ಸಿಕ್ಸರ್ ನೆರವಿನಿಂದ 100* ರನ್ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇವರ ಜೊತೆ * ರನ್ಗಳಿಸಿರುವ ಉಪನಾಯಕ ರಹಾನೆ ಕ್ರಿಸ್ನಲ್ಲಿದ್ದಾರೆ. ಲಂಚ್ ವೇಳೆಗೆ ಭಾರತ ತಂಡ ರನ್ಗಳಿಸಿದ್ದು ಪ್ರಮುಖ 3 ವಿಕೆಟ್ ಕಳೆದುಕೊಂಡಿದೆ.
ಓದಿ : ಐಪಿಎಲ್ ಹರಾಜಿನಿಂದ ಹೊರಗುಳಿಯುವುದು ಬಹಳ ಕಷ್ಟದ ನಿರ್ಧಾರ: ರೂಟ್
ಸಂಕ್ಷೀಪ್ತ ಸ್ಕೋರ್ : ಟೀ ವಿರಾಮದ ವೇಳೆಗೆ ಭಾರತ 189/3, ರೋಹಿತ್ ಶರ್ಮಾ 132 , ಪೂಜಾರ 21, ರಹಾನೆ 36* , ಮೋಹಿನ್ ಅಲಿ 1/47, ಓಲೀ ಸ್ಟೋನ್ 1/25, ಜಾಕ್ ಲೀಚ್ 1/31.