ಲಂಡನ್ : ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವೂ ಭಾರತೀಯ ಬೌಲರ್ಗಳನ್ನು ಇಂಗ್ಲೆಂಡ್ ದಾಂಡಿಗರು ಕಾಡಿದ್ದಾರೆ. ಜೋ ರೂಟ್ ಮತ್ತ ಜಾನಿ ಬೇರ್ಸ್ಟೋ ಜೊತೆಯಾಟ ಭಾರತೀಯ ಬೌಲರ್ಗಳಿಗೆ ತಲೆನೋವಾಗಿದ್ದು, ಕೊನೆಗೂ ಆಲ್ಔಟ್ ಆಗಿದ್ದಾರೆ.
ಮೂರನೇ ದಿನದ ಅಂತ್ಯಕ್ಕೆ ಇಂಗ್ಲೆಂಡ್ 391ರನ್ಗಳಿಗೆ ಆಲ್ಔಟ್ ಆಗಿದ್ದು, ಟೀಂ ಇಂಡಿಯಾ ವಿರುದ್ಧ 27 ರನ್ಗಳ ಲೀಡ್ ಅನ್ನು ಹೊಂದಲು ಸಾಧ್ಯವಾಗಿದೆ. ಭಾರತೀಯ ಬೌಲರ್ಗಳನ್ನು ಬಹುವಾಗಿ ಕಾಡಿದ್ದ 321 ಎಸೆತಗಳಲ್ಲಿ 180 ರನ್ ಗಳಿಸಿದ್ದು, ತಂಡ ಆಲ್ಔಟ್ ಆದ ಕಾರಣದಿಂದ ದ್ವಿಶತಕದಿಂದ ವಂಚಿತರಾಗಿದ್ದಾರೆ.
ಒಟ್ಟು 107 ಎಸೆತಗಳಲ್ಲಿ 57 ರನ್ ಗಳಿಸಿ, ಭರವಸೆ ಮೂಡಿಸಿದ್ದ ಜಾನಿ ಬೇರ್ಸ್ಟೋ ಮಹಮದ್ ಸಿರಾಜ್ಗೆ ವಿಕೆಟ್ ಒಪ್ಪಿಸಿದ್ದು, ಒಟ್ಟು 128 ಓವರ್ಗಳಲ್ಲಿ 391 ರನ್ಗಳನ್ನು ಇಂಗ್ಲೆಂಡ್ ತಂಡ ಗಳಿಸಿದೆ.
ಭಾರತದ ಪರ ಇಶಾಂತ್ ಶರ್ಮಾ 69 ರನ್ಗೆ 3 ವಿಕೆಟ್, ಮೊಹಮದ್ ಸಿರಾಜ್ 94 ರನ್ ನೀಡಿ 4 ವಿಕೆಟ್ ಪಡೆದಿದ್ದು, ಒಂದು ಹಂತಕ್ಕೆ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಲು ನೆರವಾಗಿದೆ.
ಇದನ್ನೂ ಓದಿ: ಟೆಸ್ಟ್ನಲ್ಲಿ ಜೋ ರೂಟ್ 9000 ರನ್.. ಈ ಸಾಧನೆ ಮಾಡಿದ 2ನೇ ಇಂಗ್ಲಿಷ್ ದಾಂಡಿಗ..