ಚೆನ್ನೈ: ಕೊರೊನಾ ಕಾಲದಲ್ಲಿ ಸುಮಾರು ಒಂದು ವರ್ಷದ ನಂತರ ಮತ್ತು ಟೀಕೆಗಳ ನಡುವೆಯೇ ಭಾರತೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಮರಳಿದ ಪ್ರೇಕ್ಷಕರಿಗೆ ಹಿಟ್ಮ್ಯಾನ್ ರೋಹಿತ್ ಶರ್ಮಾ ಭರಪೂರ ಮನರಂಜನೆ ನೀಡಿದರು.
ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಬ್ಯಾಟಿಂಗ್ ಆರಂಭಿಸಿತು. ಪಂದ್ಯದ ಮೊದಲ ದಿನದ ಮೂರನೇ ಓವರ್ನಲ್ಲಿ ಕವರ್ ಡ್ರೈವ್ ಮೂಲಕ ಬೆಂಡನ್ನು ಬೌಂಡರಿಗಟ್ಟಿ ಪಂದ್ಯಕ್ಕೆ ರೋಹಿತ್ ಅದ್ಭುತ ಚಾಲನೆ ನೀಡಿದರು.
ಇದನ್ನೂ ಓದಿ...ಒಂದು ವರ್ಷದ ನಂತರ ರೋಹಿತ್ ಶರ್ಮಾ ಶತಕದ ಪುಳಕ
ಚೆಂಡು ಬೌಂಡರಿ ಗೆರೆ ಮುಟ್ಟುತ್ತಿದ್ದಂತೆ ಡ್ರೆಸ್ಸಿಂಗ್ ಕೊಠಡಿಯಿಂದ ನಾಯಕ ವಿರಾಟ್ ಕೊಹ್ಲಿ ಮತ್ತು ಸಹ ಆಟಗಾರರು ಚಪ್ಪಾಳೆ ತಟ್ಟಿ ಸಂತೋಷಪಟ್ಟರು. ವರ್ಷದ ನಂತರ ಮೈದಾನಕ್ಕೆ ಬಂದ ಪ್ರೇಕ್ಷಕರು ಹರ್ಷೋದ್ಗಾರ ವ್ಯಕ್ತಪಡಿಸಿದರು.
ಕವರ್ ಡ್ರೈವ್ ಬಾರಿಸಿದ ರೋಹಿತ್ ಶರ್ಮಾಗೆ ನಾಯಕ ವಿರಾಟ್ ಕೊಹ್ಲಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿರುವ ಮತ್ತು ಚೆಪಾಕ್ನಲ್ಲಿ ಪ್ರೇಕ್ಷಕರ ಚೀರಾಟದ ಮೆರಗಿನ ವಿಡಿಯೋವನ್ನು ಬಿಸಿಸಿಐ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
-
Delectable drive from @ImRo45 👌
— BCCI (@BCCI) February 13, 2021 " class="align-text-top noRightClick twitterSection" data="
Applause from #TeamIndia skipper @imVkohli 👏
Loud cheer from the Chepauk crowd 👍
Watch that moment 🎥👉 https://t.co/rilK59Ik2n@Paytm #INDvENG pic.twitter.com/7xdkGB0xkF
">Delectable drive from @ImRo45 👌
— BCCI (@BCCI) February 13, 2021
Applause from #TeamIndia skipper @imVkohli 👏
Loud cheer from the Chepauk crowd 👍
Watch that moment 🎥👉 https://t.co/rilK59Ik2n@Paytm #INDvENG pic.twitter.com/7xdkGB0xkFDelectable drive from @ImRo45 👌
— BCCI (@BCCI) February 13, 2021
Applause from #TeamIndia skipper @imVkohli 👏
Loud cheer from the Chepauk crowd 👍
Watch that moment 🎥👉 https://t.co/rilK59Ik2n@Paytm #INDvENG pic.twitter.com/7xdkGB0xkF
ರೋಹಿತ್ ಶರ್ಮಾ ಅಮೋಘ ಶತಕದ ನೆರವಿನಿಂದ ಭಾರತ ಉತ್ತಮ ಇನ್ನಿಂಗ್ಸ್ನತ್ತ ದಾಪುಗಾಲಿಡುತ್ತಿದೆ. ಆದರೆ, ಭರವಸೆಯ ಆಟಗಾರ ಗಿಲ್ ಆರಂಭದಲ್ಲೇ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ನಂತರ ಪೂಜಾರ 85 ರನ್ಗಳ ಜೊತೆಯಾಟ ನೀಡಿದರಷ್ಟೇ.. ಆದರೆ, ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಹಾಗೆಯೇ ನಾಯಕ ವಿರಾಟ್ ಕೂಡ ಬಂದ ದಾರಿಗೆ ಸುಂಕವಿಲ್ಲದಂತೆ ಸೊನ್ನೆ ಸುತ್ತಿ ಪೆವಿಲಿಯನ್‌ಗೆ ಹೋದರು. ಆದರೆ, ರೋಹಿತ್ ಮತ್ತು ರಹಾನೆ ನಡುವೆ ಉತ್ತಮ ಜೊತೆಯಾಟ ಮೂಡಿ ಬಂತು. ಚಹಾ ವಿರಾಮದ ನಂತರ ರೋಹಿತ್ 161 ರನ್ ಗಳಿಸಿ ಔಟಾದರು.
ಅವರ ಇನ್ನಿಂಗ್ಸ್ನಲ್ಲಿ 18 ಬೌಂಡರಿ ಮತ್ತು 2 ಸಿಕ್ಸರ್ ಇದ್ದವು. ರೋಹಿತ್ ನಿರ್ಗಮನದ ನಂತರ 67 ರನ್ ಬಾರಿಸಿದ್ದ ರಹಾನೆ ಕೂಡ ಔಟಾದರು. ಸದ್ಯ ರಿಷಬ್ ಪಂತ್ (30) ಮತ್ತು ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಅಕ್ಷರ್ ಪಟೇಲ್ ಕ್ರೀಸ್ನಲ್ಲಿದ್ದಾರೆ.