ಚೆನ್ನೈ (ತಮಿಳುನಾಡು) : ಎರಡನೇ ಟೆಸ್ಟ್ನ ಮೊದಲ ದಿನದಾಟದಲ್ಲಿ ಆಕರ್ಷಕ ಶತಕ ಸಿಡಿಸಿ ಲಯಕ್ಕೆ ಮರಳಿದ ಆರಂಭಿಕ ಆಟಗಾರ ರೋಹಿತ್ ಶರ್ಮಾ, ಪಿಚ್ನಲ್ಲಿ ತಿರುವು ಮತ್ತು ಬೌಲರ್ಗಳನ್ನು ಎದುರಿಸಲು ಸಮರ್ಥವಾಗಿ ಎದುರಿಸಲು ಮಾನಸಿಕವಾಗಿ ಸಿದ್ದನಾಗಿದ್ದೆ ಎಂದು ಹೇಳಿದರು.
18 ಬೌಂಡರಿ ಮತ್ತು ಎರಡು ಸಿಕ್ಸರ್ಗಳೊಂದಿಗೆ 161 ರನ್ ಗಳಿಸಿದ ರೋಹಿತ್ ಶರ್ಮಾ, ಉಪನಾಯಕ ಅಜಿಂಕ್ಯ ರಹಾನೆ ಅವರೊಂದಿಗೆ ಮಹತ್ವದ ಜೊತೆಯಾಟವಾಡಿದರು. ನಾಲ್ಕನೇ ವಿಕೆಟ್‌ಗೆ ಇವರಿಬ್ಬರು 162 ರನ್ ಸೇರಿಸಿದರು.
ಸ್ಪಿನ್ ಸ್ನೇಹಿ ಪಿಚ್ನಲ್ಲಿ ಬೌಲರ್ಗಳು ಪ್ರಾಬಲ್ಯ ಸಾಧಿಸುವ ಯೋಜನೆಯಿತ್ತು. ಆದರೆ, ಅದನ್ನು ಸವಾಲಾಗಿ ಸ್ವೀಕರಿಸಿದೆ. ಪಿಚ್ ಹೇಗೆ ಸಿದ್ದಪಡಿಸಲಾಗಿದೆ. ಪಿಚ್ನಲ್ಲಿ ಚೆಂಡು ಹೇಗೆ ತಿರುವು ಪಡೆಯುತ್ತದೆ ಎಂಬುದರ ಕುರಿತು ನಮಗೆ ತಿಳಿದಿತ್ತು. ಆದ್ದರಿಂದ ಉತ್ತಮ ತರಬೇತಿ ಕೂಡ ಪಡೆದಿದ್ದೆವು ಎಂದು ವರ್ಚುವಲ್ ಸಭೆಯಲ್ಲಿ ಹೇಳಿದರು.
ಇದನ್ನೂ ಓದಿ...ಲಯಕ್ಕೆ ಮರಳಿದ ರೋಹಿತ್ ಮಿಂಚಿನ ಶತಕ: ಮೊದಲ ದಿನದ ಅಂತ್ಯಕ್ಕೆ ಭಾರತ 300/6
ತಿರುವು ಪಡೆಯುವ ಪಿಚ್ಗಳಲ್ಲಿ ಬೌಲರ್ಗಳಿಂದ ನಾವು ಒಂದು ಹೆಜ್ಜೆ ಮುಂದಾಲೋಚನೆಯಲ್ಲಿರಬೇಕು, ಪೂರ್ವಭಾವಿಯಾಗಿ ಸಿದ್ದರಾಗಬೇಕು. ಹಾಗೆಯೇ ಎಷ್ಟರ ಮಟ್ಟಿಗೆ ಬೌನ್ಸಿಂಗ್ ಆಗುತ್ತಿದೆ ಎಂಬುದನ್ನು ಅರಿಯಬೇಕು. ಹೀಗಾಗಿ, ದೊಡ್ಡ ಹೊಡೆತಕ್ಕೂ ಮೊದಲು ನಾನು ಯೋಚಿಸುತ್ತಿದ್ದೆ. ಅದಕ್ಕಾಗಿ ನಾನು ಮಾನಸಿಕವಾಗಿ ಸಿದ್ದನಾಗಿದ್ದೆ ಎಂದರು.
ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ರೋಹಿತ್ ಶರ್ಮಾ ಆಸರೆಯಾದರು. ಮೈದಾನದಾದ್ಯಂತ ಬೌಂಡರಿಗಳನ್ನು ಬಡಿಯುವ ಮೂಲಕ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದರು. ಅಜಿಂಕ್ಯ ರಹಾನೆ ಕೂಡ 67 ರನ್ಗಳ ಕೊಡುಗೆ ನೀಡಿದರು.
ಭಾರತ ಮೊದಲ ದಿನದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 300 ರನ್ ಪೇರಿಸಿದೆ. ಎರಡನೇ ದಿನಕ್ಕೂ ಬ್ಯಾಟಿಂಗ್ ಕಾಯ್ದುಕೊಂಡಿದೆ. ರಿಷಭ್ ಪಂತ್ (33) ಮತ್ತು ಅಕ್ಷರ್ ಪಟೇಲ್ (5) ಕ್ರೀಸ್ನಲ್ಲಿದ್ದಾರೆ.