ETV Bharat / sports

ಸರಣಿ ಡ್ರಾ ಮಾಡಿಕೊಂಡರೆ ಅದು ನನ್ನ ಕ್ರಿಕೆಟ್​ ಜೀವನದ ಅತ್ಯುತ್ತಮ ಸಾಧನೆ: ರೂಟ್ ​ - ನಾಲ್ಕು ಟೆಸ್ಟ್​​ ಪಂದ್ಯಗಳ​ ಸರಣಿ

ನಾಳೆಯಿಂದ ಅಂತಿಮ ಹಾಗೂ ನಾಲ್ಕನೇ ಟೆಸ್ಟ್​ ಪಂದ್ಯ ಆರಂಭವಾಗಲಿದ್ದು, ಇದು ಇಂಗ್ಲೆಂಡ್​ ತಂಡಕ್ಕೆ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಯ ಫೈನಲ್‌ಗೆ ಅರ್ಹತೆ ಪಡೆಯ ಬೇಕಾದರೆ ಈ ಪಂದ್ಯವನ್ನು ಆಂಗ್ಲ ಪಡೆ ಗೆಲ್ಲಲೇಬೇಕು ಇಲ್ಲವೇ ಡ್ರಾ ಮಾಡಿಕೊಳ್ಳಲೆ ಬೇಕಾದ ಪರಿಸ್ಥಿತಿಯಲ್ಲಿದೆ.

Root
ಜೋ ರೂಟ್​
author img

By

Published : Mar 3, 2021, 11:35 AM IST

ಅಹಮದಾಬಾದ್: ಭಾರತ ವಿರುದ್ಧದ ನಿರ್ಣಾಯಕ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನಾವು ಜಯ ಗಳಿಸಿದರೆ ಅದು ನನ್ನ ಕ್ರಿಕೆಟ್​ ಜೀವನದ ಅತ್ಯುತ್ತಮ ಸಾಧನೆ ಆಗಲಿದೆ ಎಂದು ಇಂಗ್ಲೆಂಡ್​ ತಂಡದ ನಾಯಕ ಜೋ ರೂಟ್​ ಹೇಳಿದ್ದಾರೆ. ಪ್ರಸ್ತುತ ನಾಲ್ಕು ಟೆಸ್ಟ್​​ ಪಂದ್ಯಗಳ​ ಸರಣಿಯಲ್ಲಿ ಭಾರತ ತಂಡ 2-1 ರಿಂದ ಮುನ್ನಡೆ ಸಾಧಿಸಿದೆ.

ನಾಳೆಯಿಂದ ಅಂತಿಮ ಹಾಗೂ ನಾಲ್ಕನೇ ಟೆಸ್ಟ್​ ಪಂದ್ಯ ಆರಂಭವಾಗಲಿದ್ದು, ಇದು ಭಾರತ​ ತಂಡಕ್ಕೆ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​​​​​​ನ (ಡಬ್ಲ್ಯುಟಿಸಿ) ಫೈನಲ್‌ಗೆ ಅರ್ಹತೆ ಪಡೆಯ ಬೇಕಾದರೆ ಈ ಪಂದ್ಯವನ್ನು ಭಾರತ ಡ್ರಾ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿದೆ. ಇನ್ನು ಆಂಗ್ಲ ಪಡೆ ಈ ಪಂದ್ಯ ಗೆದ್ದು ತಂಡವನ್ನ ಜಯದ ಹಳಿಗೆ ಮರಳಬೇಕಾದ ಒತ್ತಡದಲ್ಲಿದೆ. ಒಂದೊಮ್ಮೆ ಈ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಜಯಗಳಿಸಿದರೆ, ಆಸ್ಟ್ರೇಲಿಯಾ ಡಬ್ಲ್ಯೂಟಿಸಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಹೀಗಾಗಿ ಭಾರತಕ್ಕೆ ಇದು ಅತ್ಯಂತ ಮಹತ್ವದ ಪಂದ್ಯವಾಗಿದೆ.

"ನೀವು ಇತ್ತೀಚಿನ ದಿನಗಳಲ್ಲಿ ತವರು ನೆಲದಲ್ಲಿ ಭಾರತದ ದಾಖಲೆಯನ್ನು ನೋಡುತ್ತಿದ್ದೀರಿ, ಇದು ನಂಬಲಾಗದ ಸಂಗತಿಯಾಗಿದೆ. ಆದ್ದರಿಂದ, ನಾವು ಸರಣಿಯನ್ನ ಡ್ರಾ ಮಾಡಿಕೊಳ್ಳುವುದು ಉತ್ತಮ ಎಂದು ಜೋ ರೂಟ್​ ಹೇಳಿದ್ದಾರೆ.

ಓದಿ : 4ನೇ ಟೆಸ್ಟ್​ ಪಂದ್ಯದಲ್ಲಿ ನಾವು ಗೆದ್ದರೆ ಅದು ’’ನಂಬಲಸಾಧ್ಯವಾದ ಚಳಿಗಾಲ’’ ವಾಗಲಿದೆ : ಜಾಕ್​​​​ ಕ್ರಾವ್ಲೆ

"ನಾನು ಈ ಸರಣಿಯನ್ನ ಡ್ರಾ ಮಾಡಿಕೊಂಡರೆ ಕ್ಯಾಪ್ಟನ್ ಆಗಿ ನನ್ನ ಅತ್ಯುತ್ತಮ ಸಾಧನೆಗಳೊಂದಿಗೆ ಇದು ಖಂಡಿತವಾಗಿಯೂ ಇರುತ್ತದೆ. ಕಳೆದ ಎರಡು ವರ್ಷಗಳಿಂದ ನಾವು ಕಂಡ ಪ್ರಗತಿ ನಿಜವಾಗಿಯೂ ಸಂತೋಷಕರವಾಗಿದೆ. ಅದರಲ್ಲೂ ನಾನು ತವರು ನೇಲ ಬಿಟ್ಟು ವಿದೇಶಿ ನೆಲಗಳಲ್ಲಿ ಉತ್ತಮ ಆಟವಾಡಿದ್ದೇವೆ. ಇದು ನಮಗೆ ಸಂತಸ ನೀಡಿದೆ. ನಾವು ಕೊನೆಯ ಟೆಸ್ಟ್​ ಪಂದ್ಯ ಗೆಲ್ಲುವ ಇಂಗಿತದಲ್ಲಿದ್ದೇವೆ. ವಿದೇಶಿ ಮತ್ತು ಕಷ್ಟಕರ ಪರಿಸ್ಥಿತಿಗಳಲ್ಲಿ ನಾವು ಗೆಲವು ಪಡೆದುಕೊಂಡರೆ ಇದೊಂದು ಅದ್ಭುತ ಸಾಧನೆಯಾಗಲಿದೆ "ಎಂದು ಅವರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.