ಓವಲ್(ಇಂಗ್ಲೆಂಡ್): ಭಾರತ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 191 ರನ್‌ಗಳಿಗೆ ಆಲೌಟ್ ಆಗಿದ್ದು, ಎರಡನೇ ದಿನದಾಟ ನಡೆಯುತ್ತಿದೆ. ಪಂದ್ಯಾರಂಭದಲ್ಲೇ ಒಟ್ಟು 3 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಈಗ ಸ್ವಲ್ಪ ಮಟ್ಟಿಗೆ ದೃಢವಾದ ಆಟ ಪ್ರದರ್ಶಿಸುತ್ತಿದೆ.
-
150 Test wickets and counting for @y_umesh 💪💪#TeamIndia pic.twitter.com/KmfbJ3bbJY
— BCCI (@BCCI) September 3, 2021 " class="align-text-top noRightClick twitterSection" data="
">150 Test wickets and counting for @y_umesh 💪💪#TeamIndia pic.twitter.com/KmfbJ3bbJY
— BCCI (@BCCI) September 3, 2021150 Test wickets and counting for @y_umesh 💪💪#TeamIndia pic.twitter.com/KmfbJ3bbJY
— BCCI (@BCCI) September 3, 2021
ಎರಡನೇ ದಿನದ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್, ಸದ್ಯಕ್ಕೆ 39.3 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದೆ. ಗುರುವಾರ ಜಸ್ಪ್ರೀತ್ ಬೂಮ್ರಾ ಎರಡು ವಿಕೆಟ್ ಪಡೆದಿದ್ದು, ಇಂದು ಉಮೇಶ್ ಯಾದವ್ 2 ವಿಕೆಟ್ ಉರುಳಿಸಿದರು.
13 ಓವರ್ಗಳಲ್ಲಿ 49 ರನ್ ನೀಡಿರುವ ಉಮೇಶ್ ಯಾದವ್, ಡೇವಿಡ್ ಮಲನ್, ಜೋ ರೂಟ್ ಮತ್ತು ಕ್ರೇಗ್ ಓವರ್ಟನ್ ಅವರ ವಿಕೆಟ್ ಕಬಳಿಸಲು ಸಫಲರಾಗಿದ್ದಾರೆ. ಈಗ ಒಲ್ಲಿ ಪೋಪ್ ಮತ್ತು ಜಾನಿ ಬೇರ್ಸ್ಟೋ ಪಿಚ್ನಲ್ಲಿದ್ದು, ಭಾರತೀಯ ಬೌಲರ್ಗಳನ್ನು ಕಾಡುತ್ತಿದ್ದಾರೆ. ಇಬ್ಬರೂ ಅರ್ಧ ಶತಕದ ಸನಿಹ ಬಂದು ತಲುಪಿದ್ದಾರೆ.
ಇಂಗ್ಲೆಂಡ್ ನಾಯಕ ಜೋ ರೂಟ್ 21 ರನ್‌ಗಳಿಸಿ ಔಟಾದರೆ, ಡೇವಿಡ್ ಮಲನ್ 31ರನ್‌ಗಳಿಸಿ ಪೆವಿಲಿಯನ್ಗೆ ಮರಳಿದ್ದಾರೆ. ಇನ್ನು ಭಾರತದ ಪರ ಶಾರ್ದೂಲ್ ಠಾಕೂರ್, ಮೊಹಮದ್ ಸಿರಾಜ್, ರವೀಂದ್ರ ಜಡೇಜಾ ಆಂಗ್ಲರನ್ನು ಕಾಡುವ ನಿರೀಕ್ಷೆ ಇದೆ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು ಧೋನಿಯ ಧೈರ್ಯಶಾಲಿ, ನಿಸ್ವಾರ್ಥ ನಿರ್ಧಾರ: ರವಿಶಾಸ್ತ್ರಿ