ETV Bharat / sports

3ನೇ ದಿನದಾಟ: ಕುಸಿದ ಭಾರತಕ್ಕೆ ಕೊಹ್ಲಿ-ಅಶ್ವಿನ್​ ಆಸರೆ, ಭೋಜನ ವಿರಾಮಕ್ಕೆ 351 ರನ್​ ಮುನ್ನಡೆ - virat kohli

ಆಂಗ್ಲರ ಕಠಿಣ ಬೌಲಿಂಗ್​ ದಾಳಿಯಿಂದಾಗಿ ರನ್ ಗಳಿಸಲು ಪರದಾಡಿದ ಭಾರತದ ಆಟಗಾರರು, ಎರಡನೇ ಇನ್ನಿಂಗ್ಸ್​ನಲ್ಲಿ 6 ವಿಕೆಟ್​ ಕಳೆದುಕೊಂಡು 152 ರನ್​ ಪೇರಿಸಿದ್ದಾರೆ.

ನಾಯಕ ವಿರಾಟ್​ ಕೊಹ್ಲಿ
ನಾಯಕ ವಿರಾಟ್​ ಕೊಹ್ಲಿ
author img

By

Published : Feb 15, 2021, 12:30 PM IST

ಚೆನ್ನೈ: ಎರಡನೇ ಟೆಸ್ಟ್​​ನ ಮೂರನೇ ದಿನದಾಟದಲ್ಲಿ ಪ್ರಾಬಲ್ಯ ಸಾಧಿಸಿದ ಆಂಗ್ಲರ ಬೌಲಿಂಗ್​​​ನಿಂದಾಗಿ ಸತತ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ನಾಯಕ ವಿರಾಟ್​ ಕೊಹ್ಲಿ-ಆರ್​.ಅಶ್ವಿನ್​ ಆಸರೆಯಾಗಿದ್ದಾರೆ. ಈ ಮೂಲಕ 351 ರನ್​ಗಳ ಮುನ್ನಡೆ ಸಾಧಿಸಿರುವ ಇಂಡಿಯಾ, ಆಂಗ್ಲರಿಗೆ ಬೃಹತ್​ ಗುರಿ ನೀಡುವತ್ತ ಹೆಜ್ಜೆ ಹಾಕಿದೆ.

ಮೊದಲ ಇನ್ನಿಂಗ್ಸ್​ನ ಭಾರತ ನೀಡಿದ್ದ 329 ರನ್​ ಬೆನ್ನತ್ತಿದ ಆಂಗ್ಲರು ಎರಡನೇ ದಿನದಾಟದಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 134 ರನ್​ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ, 195 ರನ್​ಗಳ ಮುನ್ನಡೆ ಸಾಧಿಸಿದ ಮತ್ತೆ ಕಣಕ್ಕಿಳಿದ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 52 ರನ್​ ಗಳಿಸಿ 1 ವಿಕೆಟ್​ ಕಳೆದುಕೊಂಡಿತ್ತು. ಶುಭಮನ್​ ಗಿಲ್​ ಔಟಾಗಿದ್ದರು.

ಇಂದು ಮೂರನೇ ದಿನದಾಟದಲ್ಲಿ ಬ್ಯಾಟಿಂಗ್​ ಮುಂದುವರೆಸಿದ ಭಾರತಕ್ಕೆ, ಭೋಜನ ವಿರಾಮಕ್ಕೂ ಮೊದಲೇ ಐದು ವಿಕೆಟ್​ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್​ ಆಘಾತ ನೀಡಿತು. ಜಾಕ್​ ಲೀಚ್​ಮೂರು ವಿಕೆಟ್​ ಕಿತ್ತಿದರೆ, ಮೊಯಿನ್​ ಅಲಿ 2 ವಿಕೆಟ್​ ಬಲಿ ಪಡೆದು ಮಿಂಚಿದರು.

ಮೂರನೇ ದಿನಕ್ಕೂ ಬ್ಯಾಟಿಂಗ್​ ಕಾಯ್ದುಕೊಂಡಿದ್ದ ಪೂಜಾರ (7) ರನೌಟ್​ ಆದರು. ರೋಹಿತ್​ ಶರ್ಮಾ (26) ಎರಡನೇ ಇನ್ನಿಂಗ್ಸ್​​ನಲ್ಲಿ ರನ್​ ಪೇರಿಸಲು ತಡಕಾಡಿದರು. ಲೀಚ್​ ಬೌಲಿಂಗ್​​ನಲ್ಲಿ ಅನಗತ್ಯ ಹೊಡೆತಕ್ಕೆ ಮುಂದಾಗಿ ಚೆಂಡನ್ನು ಬೌಂಡರಿಗೆ ಕಳುಹಿಸಲು ಬಂದ ರೋಹಿತ್​ ಶರ್ಮಾ ಸ್ಟಂಪ್​ ಆದರು.

ಅದಾದ ನಂತರ ರಿಷಭ್​ ಪಂತ್​ (8) ಕೂಡ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ ಜಾಕ್​ ಲೀಚ್​ಗೆ ವಿಕೆಟ್​ ಒಪ್ಪಿಸಿದರು. ಹೀಗಾಗಿ, ಆಂಗ್ಲರ ಕಟ್ಟುನಿಟ್ಟಿನ ಬೌಲಿಂಗ್​ ಮುಂದೆ ಪಂತ್​ ಅಬ್ಬರದ ಬ್ಯಾಟಿಂಗ್​ ಮಂಕಾಯಿತು. ನಂತರ ಉಪನಾಯಕ ಅಜಿಂಕ್ಯ ರಹಾನೆ (10) ಕೂಡ ಪಂತ್​ ಹಿಂದೆಯೇ ಮೊಯಿನ್​ ಬೌಲಿಂಗ್​​ನಲ್ಲಿ ಒಲಿ ಪೋಪ್​ಗೆ ಕ್ಯಾಚಿ ನೀಡಿ ನಿರ್ಗಮಿಸಿದರು. ಹಾಗೆಯೇ ಅಕ್ಷರ್ ಪಟೇಲ್​ ಕೂಡ ಬೇಗನೇ ಪೆವಿಲಿಯನ್​ ಸೇರಿದರು.

ಇತ್ತ ಸತತ ವಿಕೆಟ್​ ಕಳೆದುಕೊಂಡರೂ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ನಾಯಕ ವಿರಾಟ್​ ಕೊಹ್ಲಿ 38 ರನ್​ ಮತ್ತು ಅವರಿಗೆ ಸಾಥ್​ ನೀಡಿದ ಅಶ್ವಿನ್ 34 ರನ್​ ಗಳಿಸಿ ಕ್ರೀಸ್​ನಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.