ETV Bharat / sports

ಮೊಟೆರಾ ಪಿಚ್​ನಲ್ಲಿ ಈ ರೀತಿಯ ಫಲಿತಾಂಶ ಬಂದಿದ್ದು ಅಚ್ಚರಿಯೇ ಸರಿ : ಇಯಾನ್ ಮಾರ್ಗನ್

author img

By

Published : Mar 17, 2021, 8:40 AM IST

ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್‌ನಲ್ಲಿ ನಮ್ಮ ತಂಡ ಇಷ್ಟು ಸುಲಭವಾಗಿ ಗುರಿ ಮುಟ್ಟುತ್ತದೆ ಎಂದು ನಾನು ಅಂದು ಕೊಂಡಿರಲಿಲ್ಲ, ನನಗೆ ಈ ಪಂದ್ಯದ ಫಲಿತಾಂಶ ನೋಡಿ ಅಚ್ಚರಿಯಾಗಿದೆ ಎಂದು ಇಯಾನ್ ಮಾರ್ಗನ್ ಹೇಳಿದ್ದಾರೆ.

Eoin Morgan
ಇಯಾನ್ ಮಾರ್ಗನ್

ಅಹಮದಾಬಾದ್: ಭಾರತ ವಿರುದ್ಧದ ಮೂರನೇ ಟಿ -20 ಪಂದ್ಯದಲ್ಲಿ ಇಂಗ್ಲೆಂಡ್​ ಪಡೆ ಎಂಟು ವಿಕೆಟ್‌ಗಳ ಜಯ ದಾಖಲಿಸಿತು. ಈ ಜಯದ ಮೂಲಕ ಇಂಗ್ಲೆಂಡ್​ ತಂಡ 5 ಪಂದ್ಯಗಳ ಟಿ-20 ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ.

ಪಂದ್ಯದ ಬಳಿಕ ಮಾತನಾಡಿದ ಇಂಗ್ಲೆಂಡ್​ ತಂಡದ ನಾಯಕ ಇಯಾನ್ ಮಾರ್ಗನ್ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್‌ನಲ್ಲಿ ನಮ್ಮ ತಂಡ ಇಷ್ಟು ಸುಲಭವಾಗಿ ಗುರಿ ಮುಟ್ಟುತ್ತದೆ ಎಂದು ನಾನು ಅಂದು ಕೊಂಡಿರಲಿಲ್ಲ, ನನಗೆ ಈ ಪಂದ್ಯದ ಫಲಿತಾಂಶ ನೋಡಿ ಆಶ್ಚರ್ಯವಾಗಿದೆ ಎಂದಿದ್ದಾರೆ.

ಈ ಪಿಚ್​ನಲ್ಲಿ ಬ್ಯಾಟ್ಸ್​​ಮನ್​ಗಳು ಹೊಂದಿಕೊಂಡು ಆಡುವುದು ತುಂಬಾ ಕಷ್ಟದ ಕೆಲಸ, ಆದರೆ, ನಮ್ಮ ತಂಡದ ಬ್ಯಾಟ್ಸ್​ಮನ್​ಗಳು ಹೊಂದಾಣಿಕೆಯಿಂದ ಆಡಿ ತಂಡಕ್ಕೆ ಜಯ ತಂದು ಕೊಟ್ಟಿದ್ದಾರೆ. ನಮ್ಮ ಬೌಲಿಂಗ್‌ನ ಮೊದಲಾರ್ಧ ನಾವು ಹಿಡಿತ ಸಾಧಿಸಿದ್ದೆವು, ಆದರೆ ಕೋನೆಯ 5 ಓವರ್​​ಗಳಲ್ಲಿ ಭಾರತ ತಂಡ ಉತ್ತಮ ಸ್ಕೋರ್ ಗಳಿಸಿತು ಎಂದರು.

ಓದಿ: ರಾಹುಲ್ ಚಾಂಪಿಯನ್ ಪ್ಲೇಯರ್, ಆರಂಭಿಕನಾಗಿ ಮುಂದುವರಿಯುತ್ತಾರೆ: ಕನ್ನಡಿಗನ ಪರ ನಿಂತ ಕೊಹ್ಲಿ

"ಜೋಸ್ ವಿಶ್ವ ದರ್ಜೆಯ ಆಟಗಾರ, ನಮ್ಮ ತಂಡ ಅವರನ್ನು ಹೊಂದಲು ತುಂಬಾ ಅದೃಷ್ಟವಂತರು. ಇನ್ನಿಂಗ್ಸ್​ ಆರಂಭಿಸುವಾಗ ಹೊಡಿ- ಬಡಿ ಆಟಕ್ಕೆ ಮುಂದಾಗಿ ಅತ್ಯುತ್ತಮ ಇನ್ನಿಂಗ್ಸ್​​ ಕಟ್ಟುತ್ತಾರೆ. ಅವರು ನಮ್ಮ ತಂಡದ ಶ್ರೇಷ್ಠ ನಾಯಕ. ಅವರು ನನ್ನ ಉತ್ತಮ ಸ್ನೇಹಿತ" ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.