ಚೆನ್ನೈ: ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಎರಡನೇ ದಿನದಾಟ ಮುಕ್ತಾಯಗೊಳಿಸಿರುವ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡು 555 ರನ್ ಗಳಿಸಿದೆ.
ಎರಡೂ ದಿನದಲ್ಲಿ ಆರು ಸೆಷನ್ಗಳನ್ನು ಪೂರ್ಣಗೊಳಿಸಿರುವ ಇಂಗ್ಲೆಂಡ್, ಡಿಕ್ಲೇರ್ ಘೋಷಿಸದೆ ಮೂರನೇ ದಿನಕ್ಕೂ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಲ್ರೌಂಡರ್ ಬೆನ್ಸ್ಟೋಕ್ಸ್, 3ನೇ ದಿನದಾಟದಲ್ಲಿ ಇನ್ನೂ ಒಂದು ಗಂಟೆ ಬ್ಯಾಟಿಂಗ್ ಮಾಡಲಿದ್ದೇವೆ. ಆದರೆ, ಟೆಸ್ಟ್ ಗೆಲ್ಲಲು ಬಹಳ ದೂರ ಸಾಗಬೇಕಿದೆ ಎಂದು ತಿಳಿಸಿದರು.
ಡಿಕ್ಲೇರ್ ಘೋಷಿಸುವ ಕುರಿತು ನಿರ್ಧಾರ ತೆಗೆದುಕೊಂಡಿಲ್ಲ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಮೂರ್ಖತನ ಪ್ರದರ್ಶಿಸಿದ್ದೇವೆ. ನಾಳೆಯೂ ಇನ್ನೊಂದು ಗಂಟೆ ಬ್ಯಾಟಿಂಗ್ ಮಾಡಿಸುವ ಚಿಂತನೆ ನಡೆಸಿದ್ದೇನೆ ಎಂದು 2ನೇ ದಿನ ಮುಕ್ತಾಯದ ನಂತರ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ...ಡಾನ್ ಬ್ರಾಡ್ಮನ್ ದಾಖಲೆ ಮುರಿದ ಜೋ ರೂಟ್: 2ನೇ ದಿನದಾಂತ್ಯಕ್ಕೆ ಇಂಗ್ಲೆಂಡ್ 555/8
ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಇಶಾಂತ್ ಶರ್ಮಾ ಬೌಲಿಂಗ್ನಲ್ಲಿ ಸತತ ಎರಡು ಎಸೆತಗಳಿಗೆ ವಿಕೆಟ್ ಒಪ್ಪಿಸಿದ್ದೇವೆ. ಹೀಗಾಗಿ, ಸ್ಪಿನ್, ಬೌನ್ಸ್ ಮತ್ತು ರಿವರ್ಸ್ ಸ್ವಿಂಗ್ಗೆ ಆದ್ಯತೆ ನೀಡುತ್ತೇವೆ. ನಮ್ಮ ಆಟಗಾರರು ಉತ್ತಮವಾಗಿ ಆಡಿದ್ದಾರೆ ಎಂದು ಸಹ ಆಟಗಾರರನ್ನು ಶ್ಲಾಘಿಸಿದರು.
ಅದ್ಭುತ ಪ್ರದರ್ಶನ ತೋರಿದ ಬೆನ್ಸ್ಟೋಕ್ಸ್ ತನ್ನ 23ನೇ ಅರ್ಧಶತಕ ಪೂರೈಸಿಕೊಂಡಿದ್ದು, ನಾಯಕ ಜೋ ರೂಟ್ ಜೊತೆಗೂಡಿ 124 ರನ್ಗಳ ಕೊಡುಗೆ ನೀಡಿದ್ದಾರೆ. ಅಲ್ಲದೆ, ರೂಟ್ ಕಳೆದ ಮೂರು ಟೆಸ್ಟ್ಗಳಲ್ಲಿ 2ನೇ ದ್ವಿಶತಕ ಸಿಡಿಸಿದರು.