ಚೆನ್ನೈ: ಭಾರತದ ಎದುರಿನ ಮೊದಲ ಟೆಸ್ಟ್ನ ಮೂರನೇ ದಿನದಾಟದ ಆರಂಭದಲ್ಲಿ ಇಂಗ್ಲೆಂಡ್ ಸರ್ವಪತನ ಕಂಡಿದೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ಜೋ ರೂಟ್ (218) ಅಮೋಘ ದ್ವಿಶತಕದ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 578 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.
-
Innings Break!
— BCCI (@BCCI) February 7, 2021 " class="align-text-top noRightClick twitterSection" data="
Ashwin picks up his third wicket and Anderson is clean bowled!
England all out for 578 in the first innings.
Scorecard - https://t.co/VJF6Q62aTS #INDvENG @Paytm pic.twitter.com/JMi535iSoY
">Innings Break!
— BCCI (@BCCI) February 7, 2021
Ashwin picks up his third wicket and Anderson is clean bowled!
England all out for 578 in the first innings.
Scorecard - https://t.co/VJF6Q62aTS #INDvENG @Paytm pic.twitter.com/JMi535iSoYInnings Break!
— BCCI (@BCCI) February 7, 2021
Ashwin picks up his third wicket and Anderson is clean bowled!
England all out for 578 in the first innings.
Scorecard - https://t.co/VJF6Q62aTS #INDvENG @Paytm pic.twitter.com/JMi535iSoY
ಎರಡನೇ ದಿನಾದಟದ ಅಂತ್ಯದಲ್ಲಿ 8 ವಿಕೆಟ್ ಕಳೆದುಕೊಂಡು 555 ರನ್ ಗಳಿಸಿದ್ದ ಆಂಗ್ಲ ಪಡೆ, ಮೂರನೇ ದಿನದಾಟ ಆರಂಭವಾದ ಕೆಲಹೊತ್ತಿನಲ್ಲೇ ಆಂಗ್ಲರ ಪಡೆ 23 ರನ್ ಗಳಿಸುವುದರೊಳಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ಈ ಮೂಲಕ 190.1 ಓವರ್‌ಗಳಲ್ಲಿ 578 ರನ್‌ಗಳಿಗೆ ಆಲೌಟ್ ಆಯಿತು.
ಮೊದಲ ಇನ್ನಿಂಗ್ಸ್ ಆರಂಭಿಸದ ಟೀಮ್ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿತು. ಹಿಟ್ಮ್ಯಾನ್ ರೊಹಿತ್ ಶರ್ಮಾ ಕೇವಲ 6 ರನ್ಗಳಿಸಿ ಜೋರ್ಫಾ ಆರ್ಚರ್ ಬೌಲಿಂಗ್ನಲ್ಲಿ ಬಟ್ಲರ್ಗೆ ಕ್ಯಾಚ್ ನೀಡುವ ಮೂಲಕ ಪೇವಲಿಯನ್ ಹಾದಿ ಹಿಡಿದರು. ಪ್ರಸ್ತುತ ಟೀ ಇಂಡಿಯಾ 27/1 ರನ್ ಗಳಿಸಿದೆ. ಶುಭಮನ್ ಗಿಲ್ 18*, ಚೇತೇಶ್ವರ ಪೂಜಾರ 7* ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ಇನ್ನೂ ಇಂಗ್ಲೆಂಡ್ ಪರ ಆರ್ಚರ್ 1 ವಿಕೆಟ್ ಪಡೆದು ಭಾರತಕ್ಕೆ ಆಘಾತ ನೀಡಿದರು.
ಓದಿ : ಡಾನ್ ಬ್ರಾಡ್ಮನ್ ದಾಖಲೆ ಮುರಿದ ಜೋ ರೂಟ್: 2ನೇ ದಿನದಾಂತ್ಯಕ್ಕೆ ಇಂಗ್ಲೆಂಡ್ 555/8