ಲಂಡನ್ : ಆತಿಥೇಯ ಇಂಗ್ಲೆಂಡ್-ಭಾರತ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಕಮ್ಬ್ಯಾಕ್ ಮಾಡಿದೆ. ಕೆಳ ಕ್ರಮಾಂಕದಲ್ಲಿ ರಿಷಭ್ ಪಂತ್ ಮತ್ತು ಶಾರ್ದೂಲ್ ಠಾಕೂರ್ ಸಿಡಿಸಿದ ಅರ್ಧಶತಕಗಳ ನೆರವಿನಿಂದ ಭಾರತ ತಂಡ 466 ರನ್ಗಳಿಗೆ ಆಲೌಟ್ ಆಗಿದೆ .
-
Despite losing two wickets, India have added 116 runs in the second session and are in a strong position at tea 👏#WTC23 | #ENGvIND | https://t.co/zRhnFiKhzZ pic.twitter.com/rdrvvCtYY7
— ICC (@ICC) September 5, 2021 " class="align-text-top noRightClick twitterSection" data="
">Despite losing two wickets, India have added 116 runs in the second session and are in a strong position at tea 👏#WTC23 | #ENGvIND | https://t.co/zRhnFiKhzZ pic.twitter.com/rdrvvCtYY7
— ICC (@ICC) September 5, 2021Despite losing two wickets, India have added 116 runs in the second session and are in a strong position at tea 👏#WTC23 | #ENGvIND | https://t.co/zRhnFiKhzZ pic.twitter.com/rdrvvCtYY7
— ICC (@ICC) September 5, 2021
ನಾಲ್ಕನೇ ದಿನವಾದ ಇಂದು ಭಾರತ 312 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ತಂಡಕ್ಕೆ ಶಾರ್ದೂಲ್ ಮತ್ತು ಪಂತ್ ಜೋಡಿ ಕೊಂಚ ಮುನ್ನಡೆ ತಂದು ಕೊಟ್ಟರು. ಚಹಾ ವಿರಾಮಕ್ಕೂ ಮುನ್ನ ಭಾರತ 8 ವಿಕೆಟ್ ಕಳೆದುಕೊಂಡು 445 ರನ್ ಗಳಿಸಿತ್ತು.
-
Craig Overton brings an end to India's innings with the wicket of Umesh Yadav.
— ICC (@ICC) September 5, 2021 " class="align-text-top noRightClick twitterSection" data="
England have a target of 368 in front of them. Who holds the advantage? 👀 #WTC23 | #ENGvIND | https://t.co/QGdaGyCg2Y pic.twitter.com/APp8lS21Lm
">Craig Overton brings an end to India's innings with the wicket of Umesh Yadav.
— ICC (@ICC) September 5, 2021
England have a target of 368 in front of them. Who holds the advantage? 👀 #WTC23 | #ENGvIND | https://t.co/QGdaGyCg2Y pic.twitter.com/APp8lS21LmCraig Overton brings an end to India's innings with the wicket of Umesh Yadav.
— ICC (@ICC) September 5, 2021
England have a target of 368 in front of them. Who holds the advantage? 👀 #WTC23 | #ENGvIND | https://t.co/QGdaGyCg2Y pic.twitter.com/APp8lS21Lm
ಮೊದಲ ಇನಿಂಗ್ಸ್ ನಲ್ಲಿ ಅರ್ಧಶತಕ ಸಿಡಿಸಿ ತಂಡವನ್ನು ಮುನ್ನಡೆಸಿದ್ದ ಶಾರ್ದೂಲ್ ಠಾಕೂರ್ ಎರಡನೇ ಇನಿಂಗ್ಸ್ ನಲ್ಲೂ ಅರ್ಧಶತಕ ಸಿಡಿಸಿ ತಂಡಕ್ಕೆ ತಮ್ಮದೆಯಾದ ಕೊಡುಗೆ ನೀಡಿದರು. ಶಾರ್ದೂಲ್ 70 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 60 ರನ್ ಗಳಿಸಿದರೆ, ರಿಷಭ್ ಪಂತ್ 105 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ ಅರ್ಧಶತಕ ಪೂರೈಸಿದರು.
ಇನ್ನು, ಪ್ರಸ್ತುತ ಟೀಂ ಇಂಡಿಯಾ 10 ವಿಕೆಟ್ ಕಳೆದುಕೊಂಡು 466 ರನ್ಗಳಿಸಿದೆ. ಈ ಮೂಲಕ 367 ರನ್ಗಳ ಮುನ್ನಡೆ ಸಾಧಿಸಿದ್ದು, ಇಂಗ್ಲೆಂಡ್ ತಂಡ ಈ ಪಂದ್ಯ ಗೆಲ್ಲಬೇಕಾದರೆ 368 ರನ್ಗಳಿಸಬೇಕಾಗಿದೆ.
ನಾಲ್ಕನೇ ದಿನದ ಆಟ ಆರಂಭದಲ್ಲೇ ಟೀಂ ಇಂಡಿಯಾ ಜಡೇಜಾ (17) ಮತ್ತು ರಹಾನೆ (0) ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತ ಅನುಭವಿಸಿತು.
ಮೂರನೇ ದಿನದಾಟದ ಅಂತ್ಯದ ವೇಳೆ ರವೀಂದ್ರ ಜಡೇಜಾ ಅಜೇಯ(9)ರನ್ ಗಳಿಕೆ ಮಾಡಿ ಕ್ರೀಸ್ ಕಾಯ್ದುಕೊಂಡಿದ್ದರು. ಇಂದು ಕೇವಲ 8 ರನ್ಗಳಿಸಿ ಕ್ರೀಸ್ ವೋಕ್ಸ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಅಜಿಂಕ್ಯಾ ರಹಾನೆ ಯಾವುದೇ ರನ್ಗಳಿಲ್ಲದೆ ವೋಕ್ಸ್ಗೆ ವಿಕೆಟ್ ಒಪ್ಪಿಸುವ ಮುಲಕ ಮತ್ತೊಮ್ಮೆ ನಿರಾಶೆ ಮೂಡಿಸಿದರು.