ಹೈದರಾಬಾದ್: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲಿಗೆ ಚೆಂಡಿನ ಗುಣಮಟ್ಟ ಕುರಿತು ಕಳವಳ ವ್ಯಕ್ತಪಡಿಸಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಸಹ ಆಟಗಾರರು ದೂರು ನೀಡಿರುವ ಪರಿಣಾಮ, ಅದರ ಗುಣಮಟ್ಟ ಪರಿಶೀಲನೆ ನಡೆಸುವಂತೆ ಕ್ರಿಕೆಟ್ ಚೆಂಡು ತಯಾರಕ ಸಂಸ್ಥೆ ಸ್ಯಾನ್ಸ್ಪರಿಲ್ಸ್ ಗ್ರೀನ್ಲ್ಯಾಂಡ್ಗೆ (ಎಸ್‌ಜಿ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೂಚಿಸಿದೆ.
ಚೆಂಡಿನ ಗುಣಮಟ್ಟದ ಕುರಿತು ಆಟಗಾರರು ದೂರು ನೀಡಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎಂದು ಬಿಸಿಸಿಐ ನಮಗೆ ಹೇಳಿದೆ. ನಾವು ಕೂಡ ಮೌಲ್ಯಮಾಪನ ಮಾಡುವುದಾಗಿ ಭರವಸೆ ಕೊಟ್ಟಿದ್ದೇವೆ. ಅಲ್ಲದೇ, ಕೆಲ ಆಟಗಾರರು ಪಿಚ್ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದು, ಅಂತಹ ವಿಕೆಟ್ಗಳ ಮೇಲೆ ಚೆಂಡಿನ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ನಾವು ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದು ಎಸ್‌ಜಿ ಮಾರ್ಕೆಟಿಂಗ್ ನಿರ್ದೇಶಕ ಪರಾಸ್ ಆನಂದ್ ತಿಳಿಸಿದರು.
ಇದನ್ನೂ ಓದಿ...ಕೊಹ್ಲಿ ಭಾರತಕ್ಕೆ ಹೊರಟ ನಂತರ ಪ್ಯಾಟ್ ಕಮ್ಮಿನ್ಸ್ ಟಾರ್ಗೆಟ್ ಈ ಬ್ಯಾಟ್ಸ್ಮನ್ ಆಗಿದ್ರಂತೆ?
ಶಕ್ತಿ ಮತ್ತು ಬಾಳಿಕೆ ಗಣನೆಗೆ ತೆಗೆದುಕೊಂಡು ಚೆಂಡಿನ ಗುಣಮಟ್ಟದ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ ಮಾಡುತ್ತೇವೆ. ಮುಂದೆ ಅಂತಹ ಸಂದರ್ಭ ಎದುರಾಗದಂತೆ ನೋಡಿಕೊಳ್ಳುತ್ತೇವೆ. ಚೆಂಡಿನ ಹೊಲಿಗೆ ಕಿತ್ತುಹೋಗದಂತೆ ಕ್ರಮ ಕೈಗೊಳ್ಳುತ್ತೇವೆ. ಕಠಿಣ ಮತ್ತು ಆಕರ್ಷಕ ಮೇಲ್ಮೈಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ವಿವರಿಸಿದರು.
ಮೊದಲ ಟೆಸ್ಟ್ನಲ್ಲಿ ಆಡಿದ ತಂಡವೇ ದ್ವಿತೀಯ ಟೆಸ್ಟ್ಗೂ ಕಣಕ್ಕಿಳಿಯಲಿದೆ. ಈ ಎರಡು ಟೆಸ್ಟ್ಗಳ ನಡುವೆ ಬಹಳ ಕಡಿಮೆ ಸಮಯ ಇದೆ. ಆದರೆ, ಇನ್ನು ಮೂರು ದಿನಗಳು ಮಾತ್ರ ಬಾಕಿಯಿದೆ. ಆದರೆ, ಚೆಂಡುಗಳ ಗುಣಮಟ್ಟದ ಕುರಿತಂತೆ ನಿರಂತರ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದು ಖುಷಿ ವಿಷಯವಲ್ಲ. ಈ ಹಿಂದೆಯೂ ಹೀಗೆ ಆಗಿತ್ತು. 60 ಓವರ್‌ಗಳಲ್ಲಿ ಚೆಂಡು ನಾಶವಾಗುತ್ತಿದೆ ಎಂದು ಕೊಹ್ಲಿ ಮಂಗಳವಾರ ಚೆಂಡುಗಳ ಗುಣಮಟ್ಟ ಪ್ರಶ್ನಿಸಿದ್ದರು.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ. 2ನೇ ಟೆಸ್ಟ್ ಶನಿವಾರ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಪ್ರಾರಂಭವಾಗುತ್ತದೆ. ಪಿಚ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಇಶಾಂತ್ ಶರ್ಮಾ ರಸ್ತೆ ಎಂದು ಕರೆದಿದ್ದರು, ಅಶ್ವಿನ್ ಕೂಡ ಚೆಂಡಿನ ಹೊಲಿಗೆ ಸಾಲು ಕಿತ್ತು ಹೋಗಿದೆ ಎಂದು ಹೇಳಿದ್ದರು.