ETV Bharat / sports

ತವರು ನೆಲದಲ್ಲಿ ಮತ್ತೊಂದು ದಾಖಲೆ ಬರೆದ ಅಶ್ವಿನ್​​​ - ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ಪಂದ್ಯ

ಮೊದಲ ಟೆಸ್ಟ್​​ ಪಂದ್ಯದಲ್ಲಿ ಬೌಲಿಂಗ್​ನಲ್ಲಿ ಮೋಡಿ ಮಾಡಿದ್ದ ಅಶ್ವಿನ್​ 9 ವಿಕೆಟ್​​ ಪಡೆದು ಮಿಂಚಿದ್ದರು. ಎರಡನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ 5 ವಿಕೆಟ್​ ಪಡೆದು ಆಂಗ್ಲ ಪಡೆಯನ್ನ ಕಾಡಿದರು. ಇದೇ ಪಂದ್ಯದಲ್ಲಿ ಅಶ್ವಿನ್ ದಾಖಲೆ ನಿರ್ಮಿಸಿದ್ದಾರೆ.

23rd five wicket haul for R ashwin in 45 home tests Match
ತವರು ನೆಲದಲ್ಲಿ ಮತ್ತೊಂದು ದಾಖಲೆ ಬರೆದ ಅಶ್ವಿನ್​​​
author img

By

Published : Feb 15, 2021, 10:30 AM IST

ಚೆನ್ನೈ: ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಟೀಂ​ ಇಂಡಿಯಾವು ಆಂಗ್ಲ ಪಡೆ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಇಂಗ್ಲೆಂಡ್​ ತಂಡ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 134 ರನ್​​ಗಳಿಗೆ ಆಲೌಟ್​ ಆಗಿದೆ. ಇದಕ್ಕೆ ಪ್ರಮುಖ ಕಾರಣ ಸ್ಪಿನ್​ರ್​ ಅಶ್ವಿನ್​​.

ಮೊದಲ ಟೆಸ್ಟ್​​ ಪಂದ್ಯದಲ್ಲಿ ಬೌಲಿಂಗ್​ನಲ್ಲಿ ಮೋಡಿ ಮಾಡಿದ್ದ ಅಶ್ವಿನ್​ 9 ವಿಕೆಟ್​​ ಪಡೆದು ಮಿಂಚಿದ್ದರು. ಎರಡನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ 5 ವಿಕೆಟ್​ ಪಡೆದು ಆಂಗ್ಲ ಪಡೆಯನ್ನ ಕಾಡಿದರು. ಇದೇ ಪಂದ್ಯದಲ್ಲಿ ಅಶ್ವಿನ್ ದಾಖಲೆ ನಿರ್ಮಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಅಶ್ವಿನ್ 5 ವಿಕೆಟ್ ಪಡೆದರು. ಸಿಬ್ಲೆ, ಲಾರೆನ್ಸ್, ಬೆನ್ ಸ್ಟೋಕ್ಸ್, ಒಲ್ಲಿ ಸ್ಟೋನ್ ಮತ್ತು ಬ್ರಾಡ್ ರ ವಿಕೆಟ್​​ ಪಡೆದಿದ್ದರು. ತವರು ನೆಲದಲ್ಲಿ ಆಡಿದ 45 ಪಂದ್ಯಗಳಲ್ಲಿ 23ನೇ ಬಾರಿಗೆ ಐದು ವಿಕೆಟ್ ಗಳ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಆ ಮೂಲಕ ಇಂಗ್ಲೆಂಡ್ ನ ವೇಗಿ ಜೇಮ್ಸ್ ಆಂಡರ್ಸನ್ ಅವರ ಸಾಧನೆಯನ್ನು ಅಶ್ವಿನ್ ಹಿಂದಿಕ್ಕಿದ್ದಾರೆ. ಆ್ಯಂಡರ್ಸನ್ 89 ಟೆಸ್ಟ್ ಪಂದ್ಯಗಳಲ್ಲಿ 22 ಬಾರಿ ಐದು ವಿಕೆಟ್ ಪಡೆದಿದ್ದಾರೆ.

ಓದಿ : ಸಖತ್​ ಸದ್ದು ಮಾಡ್ತಿದೆ ವಿರಾಟ್ 'ವಿಸಿಲ್'​​ ವಿಡಿಯೋ​.. ಕೊಹ್ಲಿ ಸಿಳ್ಳೆ ಹೊಡೆದಿದ್ದು ಯಾರಿಗೆ?

ತವರು ನೆಲದಲ್ಲಿ ಅತೀ ಹೆಚ್ಚು ಬಾರಿ 5 ವಿಕೆಟ್ ಪಡೆದವರ ಪಟ್ಟಿಯಲ್ಲಿ ಶ್ರೀಲಂಕಾದ ಸ್ಪಿನ್ ದಂತಕಥೆ ಮುತ್ತಯ್ಯ ಮುರಳೀಧರನ್ ಅಗ್ರ ಸ್ಥಾನದಲ್ಲಿದ್ದು, ಮುರಳೀಧರನ್​ 45 ಬಾರಿ ಐದು ವಿಕೆಟ್ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ಶ್ರೀಲಂಕಾದ ಮತ್ತೋರ್ವ ಸ್ಪಿನ್ನರ್ ರಂಗನಾ ಹೆರಾತ್ 26 ಬಾರಿ 5 ವಿಕೆಟ್​​ ಪಡೆದರೆ, ಭಾರತದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ 25 ಬಾರಿ ಈ ಸಾಧನೆ ಮಾಡಿದ್ದಾರೆ.

ಅಶ್ವಿನ್ ಒಟ್ಟಾರೆ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ 29ನೇ ಬಾರಿಗೆ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.