ಲಂಡನ್: 8 ವರ್ಷಗಳ ಹಿಂದೆ ಜನಾಂಗೀಯ ನಿಂದನೆ ಮಹಿಳೆಯರ ಮೇಲೆ ಅವಹೇಳನಕಾರಿ ಟ್ವೀಟ್ ಮಾಡಿ ಇಂಗ್ಲೆಂಡ್ ತಂಡದಿಂದ ಹೊರಬಿದ್ದಿರುವ ವೇಗಿ ರಾಬಿನ್ಸನ್ ಪರ ಇಂಗ್ಲೆಂಡ್ನ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಬ್ಯಾಟಿಂಗ್ ಮಾಡಿದ್ದಾರೆ. ಇಡೀ ತಂಡ ಅವರ ಕ್ಷಮೆಯನ್ನು ಸರ್ವಾನುಮತದಿಂದ ಒಪ್ಪಿಕೊಂಡಿದ್ದು, ಅವರಿಗೆ ನಮ್ಮೆಲ್ಲರ ಬೆಂಬಲವಿದೆ ಎಂದಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿಎ7 ವಿಕೆಟ್ ಪಡೆದು ಉತ್ತಮ ಪ್ರದರ್ಶನ ತೋರಿದ್ದ ರಾಬಿನ್ಸನ್, ಅವರು 2012 ಮತ್ತು 2013ರ ಸಂದರ್ಭದಲ್ಲಿ ಮಾಡಿದ್ದ ಅವಹೇಳನಕಾರಿ ಟ್ವೀಟ್ಗಳಿಂದಾಗಿ ದೇಶದ ಅಪೆಕ್ಸ್ ಕ್ರಿಕೆಟ್ ಮಂಡಳಿಯಿಂದ ಅಮಾನತಾಗಿದ್ದರು. ಇದಕ್ಕಾಗಿ ರಾಬಿನ್ಸನ್ ಅವರು ಈಗಾಗಲೇ ಬೇಷರತ್ತಾಗಿ ಸಾರ್ವಜನಿಕ ಕ್ಷಮೆಯಾಚಿಸಿದ್ದಾರೆ.
ಬ್ರಿಟಿಷ್ ಮಾಧ್ಯಮದೊಂದಿಗೆ ಮಾತನಾಡುತ್ತಾ ರಾಬಿನ್ಸನ್ ಕ್ಷಮೆಯನ್ನು ಸ್ವೀಕರಿಸಿದ್ದೀರಾ ಅಥವಾ ಕೆಲವು ಆಟಗಾರರು ಅದರ ಬಗ್ಗೆ ಇನ್ನೂ ಆತಂಕಕ್ಕೊಳಗಾಗಿದ್ದಾರೆಯೇ ಎಂದು ಕೇಳಿದ್ದಕ್ಕೆ ಆ್ಯಂಡರ್ಸನ್, 'ಇಲ್ಲ, ಎಲ್ಲರೂ ಸ್ವೀಕರಿಸಿದ್ದಾರೆ ಎಂದು ಭಾವಿಸುತ್ತೇನೆ' ಎಂದು ತಿಳಿಸಿದ್ದಾರೆ.
ತಂಡದ ಮುಂದೆ ಎದ್ದು ನಿಂತು ಆತ ಕ್ಷಮೆ ಕೇಳಿದ್ದಾನೆ, ಅಲ್ಲಿ ಆತ ಎಷ್ಟು ನಿಷ್ಠಾವಂತನಾಗಿದ್ದ ಎಂದು ನೀವು ನೋಡಬಹುದು. ಆತ ತನ್ನ ತಪ್ಪಿಗೆ ಬೇಸರ ವ್ಯಕ್ತಪಡಿಸಿದ್ದಾನೆ. ನಾವೊಂದು ಗುಂಪಾಗಿ ವಿಭಿನ್ನ ವ್ಯಕ್ತಿಯಾಗಿರುವುದಕ್ಕೆ ಅವರನ್ನು ಪ್ರಶಂಸಿಸಬೇಕಾಗಿದೆ.
ಅಂದಿನಿಂದ ಅವರು ಸಾಕಷ್ಟು ಪ್ರಬುದ್ಧರಾಗಿದ್ದಾರೆ ಮತ್ತು ಬೆಳೆಯುತ್ತಿದ್ದಾರೆ. ಅವರಿಗೆ ತಂಡದ ಸಂಪೂರ್ಣ ಬೆಂಬಲ ಸಿಗಲಿದೆ" ಎಂದು ಆ್ಯಂಡರ್ಸನ್ ತಿಳಿಸಿದ್ದಾರೆ.
ಇಂಗ್ಲೆಂಡ್ ಪ್ರಧಾನಿ ಸೇರಿದಂತೆ ರಾಜಕೀಯ ವರ್ಗವು ಕೂಡ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ಹದಿಹರೆಯದವನಾಗಿದ್ದಾಗ ಮಾಡಿದ ಯಾವುದೋ ತಪ್ಪಿಗಾಗಿ ಇಂದು ವೇಗದ ಬೌಲರ್‌ನನ್ನು ಅಮಾನತುಗೊಳಿಸುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಒತ್ತಾಯಿಸಿದೆ.
ನಾನು ಮಾಡಿರುವ ಕೆಲಸಕ್ಕೆ ತೀವ್ರವಾಗಿ ವಿಷಾದಿಸುತ್ತೇನೆ ಮತ್ತು ಅಂತಹ ಕಮೆಂಟ್ ಮಾಡಿರುವುದಕ್ಕೆ ನಾನು ನಾಚಿಕೆಪಡುತ್ತಿದ್ದೇನೆ. ನಾನು ವಿಚಾರಹೀನನಾಗಿ ಮತ್ತು ಬೇಜವಾಬ್ದಾರಿಯಿಂದ ವರ್ತಿಸಿದ್ದೇನೆ ಮತ್ತು ಆ ಸಮಯದಲ್ಲಿ ನನ್ನ ಮನಸ್ಸಿನ ಸ್ಥಿತಿಯನ್ನು ಲೆಕ್ಕಿಸದೆ ಆ ರೀತಿ ಮಾಡಿರುವುದು ಅಕ್ಷಮ್ಯ ಎಂದು ನಾನು ಒಪ್ಪಿಕೊಳ್ಳುತ್ತೇನೆ ಎಂದು ಬಹಿರಂಗವಾಗಿ ಈಗಾಗಲೇ ರಾಬಿನ್ಸನ್ ಕ್ಷಮೆ ಕೇಳಿಕೊಂಡಿದ್ದಾರೆ.
ಇದನ್ನು ಓದಿ: ಅತ್ಯುನ್ನತ ಲಯದಲ್ಲಿರುವ ಭಾರತವನ್ನು ಎದುರಿಸುವುದೇ ಕಿವೀಸ್ಗೆ ದೊಡ್ಡ ಸವಾಲು: ಇಶ್ ಸೋಧಿ