ಸಿಡ್ನಿ : ಆ್ಯಶಸ್ ಸರಣಿಯ ನಾಲ್ಕನೇ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ. 5 ಪಂದ್ಯಗಳ ಸರಣಿಯಲ್ಲಿ ಈಗಾಗಲೇ 3-0 ಮುನ್ನಡೆಯೊಂದಿಗೆ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿರುವ ಆಸೀಸ್, ಕೊನೆಯ ಎರಡು ಓವರ್ಗಳಲ್ಲಿ ಒಂದು ವಿಕೆಟ್ ಪಡೆಯಲಾಗದೆ ಪಂದ್ಯ ಗೆಲ್ಲುವಲ್ಲಿ ವಿಫಲವಾಯಿತು.
388 ರನ್ಗಳ ಗೆಲುವಿನ ಗುರಿ ಪಡೆದಿದ್ದ ರೂಟ್ ಪಡೆ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿತ್ತು. ಆದರೆ, ಇಂದು ಬೆಳಗ್ಗೆ ದಿಢೀರ್ ಕುಸಿತ ಕಂಡು 100 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು.
ಈ ಸಂದರ್ಭದಲ್ಲಿ ತಂಡಕ್ಕೆ ನಾಯಕ ಜೋ ರೂಟ್ (24) ಹಾಗೂ ಆಲ್ರೌಂಡರ್ ಬೆನ್ ಸ್ಟೋಕ್ಸ್(60) ಜೊತೆಗೂಡಿ ರಕ್ಷಣಾತ್ಮಕ ಆಟವಾಡಿದರು. ಅರ್ಧಶತಕದ ಆಡವಾಡಿದ ಸ್ಟೋಕ್ಸ್(60) ನಾಯಕನ ವಿಕೆಟ್ ಪತನದ ಬಳಿಕ ಜಾನಿ ಬೈರ್ಸ್ಟೋ (41) ಇಂಗ್ಲೆಂಡ್ಗೆ ನೆರವಾದರು.
-
Match drawn 🏏
— ICC (@ICC) January 9, 2022 " class="align-text-top noRightClick twitterSection" data="
A riveting game comes to an end as England survive with one wicket remaining 👏#WTC23 | #Ashes pic.twitter.com/qrTwtoZMwp
">Match drawn 🏏
— ICC (@ICC) January 9, 2022
A riveting game comes to an end as England survive with one wicket remaining 👏#WTC23 | #Ashes pic.twitter.com/qrTwtoZMwpMatch drawn 🏏
— ICC (@ICC) January 9, 2022
A riveting game comes to an end as England survive with one wicket remaining 👏#WTC23 | #Ashes pic.twitter.com/qrTwtoZMwp
ಆದರೆ, ಇವರಿಬ್ಬರು ಔಟ್ ಆದ ಬಳಿಕ ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ ಕೂಡ 11, ವುಡ್ 0 ಹಾಗೂ ಜಾಕ್ ಲೀಚ್ 26 ರನ್ಗೆ ಪೆವಿಲಿಯನ್‌ಗೆ ಮರಳಿದ್ದು ಇಂಗ್ಲೆಂಡ್ ಪಾಳೆಯದಲ್ಲಿ ಸೋಲಿನ ಆತಂಕ ಮೂಡಿಸಿತ್ತು.
ಆದರೆ, ಅಂತಿಮವಾಗಿ ಸ್ಟುವರ್ಟ್ ಬ್ರಾಡ್ 35 ಎಸೆತಗಳಲ್ಲಿ 8 ಹಾಗೂ ಜೇಮ್ಸ್ ಎಂಡರ್ಸನ್ 6 ಬಾಲ್ ಎಂದುರಿಸಿ ಔಟಾಗದೆ ಉಳಿದುಕೊಂಡು ಆಂಗ್ಲರನ್ನು ಸೋಲಿನಿಂದ ಬಚಾವ್ ಮಾಡಿದರು. ಈ ಮೂಲಕ ಇಂಗ್ಲೆಂಡ್ ಆ್ಯಶಸ್ ಸರಣಿಯಲ್ಲಿ ವೈಟ್ವಾಶ್ ಮುಖಭಂಗದಿಂದ ಪಾರಾಯಿತು. ಕೊನೆಯ 2 ಓವರ್ಗಳಲ್ಲಿ ಆಸೀಸ್ಗೆ ವಿಕೆಟ್ ಕಬಳಿಸಲಾಗಲಿಲ್ಲ.
ಆಸೀಸ್ ಪರ ಟ್ರಾವಿಸ್ ಹೆಡ್ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಎರಡೂ ಇನ್ನಿಂಗ್ಸ್ಗಳಲ್ಲಿ ಶತಕ(137, 101*) ಬಾರಿಸಿ ಮಿಂಚಿದ ಉಸ್ಮಾನ್ ಖವಾಜಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸರಣಿಯ ಅಂತಿಮ ಪಂದ್ಯವು ಜ.14ರಿಂದ ಹೋಬಾರ್ಡ್ನಲ್ಲಿ ನಡೆಯಲಿದೆ.
ಇದನ್ನೂ ಓದಿ: 65 ಎಸೆತಗಳಲ್ಲಿ 141 ರನ್, ನಂಬಲಾಸಾಧ್ಯವಾದ ಶತಕ: 24ಕ್ಕೆ4 ವಿಕೆಟ್ ಕಳೆದುಕೊಂಡ್ರೂ 228 ರನ್ ಚೇಸ್!