ಲಂಡನ್ : 2ನೇ ಟೆಸ್ಟ್‌ನ 3ನೇ ದಿನದ ಮೊದಲ ಆತಿಥೇಯ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಆಂಗ್ಲ ಪಡೆ ಯಾವುದೇ ವಿಕೆಟ್ ನೀಡದೆ 3ನೇ ದಿನ 97 ರನ್ಗಳಿಸುವ ಮೂಲಕ ಪ್ರಾಬಲ್ಯ ಮೆರೆದಿದೆ.
2ನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 119 ರನ್ಗಳಿಸಿದ್ದ ಆಂಗ್ಲಪಡೆ 3ನೇ ದಿನ ಆ ಮೊತ್ತವನ್ನು ಯಾವುದೇ ವಿಕೆಟ್ ಕಳೆದುಕೊಳ್ಳದೆ 216ಕ್ಕೆ ಏರಿಸಿಕೊಂಡಿದೆ. ಈ ಜೋಡಿ ಒಟ್ಟಾರೆ 4ನೇ ವಿಕೆಟ್ ಜೊತೆಯಾಟದಲ್ಲಿ 108 ರನ್ಗಳಿಸಿ ಅಜೇಯರಾಗಿದ್ದಾರೆ.
ನಿನ್ನೆ ಅಜೇಯರಾಗಿ ಉಳಿದ್ದ ನಾಯಕ ಜೋ ರೂಟ್, ಇಂದು ಆ ಮೊತ್ತವನ್ನು 89ಕ್ಕೆ ಏರಿಸಿಕೊಂಡರೆ, ಜಾನಿ ಬೈರ್ಸ್ಟೋವ್ 91 ಎಸೆತಗಳಲ್ಲಿ 51 ರನ್ಗಳಿಸಿ ಟೆಸ್ಟ್ ಕ್ರಿಕೆಟ್ನಲ್ಲಿ 22ನೇ ಅರ್ಧಶತಕ ಪೂರ್ಣಗೊಳಿಸಿ ನಾಯಕನಿಗೆ ಸಾಥ್ ನೀಡುತ್ತಿದ್ದಾರೆ.
-
That will be Lunch on Day 3 of the Lord's Test.
— BCCI (@BCCI) August 14, 2021 " class="align-text-top noRightClick twitterSection" data="
England are 216/3, trail by 148 runs.
Scorecard - https://t.co/KGM2YEualG #ENGvIND pic.twitter.com/PFW2UbL9d5
">That will be Lunch on Day 3 of the Lord's Test.
— BCCI (@BCCI) August 14, 2021
England are 216/3, trail by 148 runs.
Scorecard - https://t.co/KGM2YEualG #ENGvIND pic.twitter.com/PFW2UbL9d5That will be Lunch on Day 3 of the Lord's Test.
— BCCI (@BCCI) August 14, 2021
England are 216/3, trail by 148 runs.
Scorecard - https://t.co/KGM2YEualG #ENGvIND pic.twitter.com/PFW2UbL9d5
3ನೇ ದಿನದ ಭೋಜನ ವಿರಾಮಕ್ಕೂ ಮುನ್ನ ಇಂಗ್ಲೆಂಡ್ ತಂಡ 216 ರನ್ಗಳಿಸಿದ್ದು, ಇನ್ನು 148ರನ್ಗಳ ಹಿನ್ನಡೆಯಲ್ಲಿದೆ. ಭಾರತದ 5 ಬೌಲರ್ಗಳಲ್ಲಿ ಜಸ್ಪ್ರೀತ್ ಬುಮ್ರಾ 15 ಓವರ್ ಎಸೆದು ಕೇವಲ 34 ರನ್ ನೀಡಿ ಸ್ವಲ್ಪ ಪರಿಣಾಮಕಾರಿ ಎನಿಸಿದರು.
ಆದರೆ, ಉಳಿದ ಬೌಲರ್ಗಳನ್ನು ಇಂಗ್ಲೆಂಡ್ ದಾಂಡಿಗರು ಸಮರ್ಥವಾಗಿ ದಂಡಿಸಿದರು. ಸ್ಪಿನ್ನರ್ ಜಡೇಜಾ ಕೂಡ ಕೆಲವು ಓವರ್ ಎಸೆದರಾದರೂ ಅವರಿಂದಲೂ ಏನು ಪ್ರಯೋಜನವಾಗಲಿಲ್ಲ.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಕೆ ಎಲ್ ರಾಹುಲ್ ಅವರು ಶತಕ(129) ಮತ್ತು ವಿರಾಟ್ ಕೊಹ್ಲಿ 42 ಹಾಗೂ ಜಡೇಜಾ ಅವರು 40 ರನ್ಗಳ ನೆರವಿನಿಂದ 364 ರನ್ ಗಳಿಸಿತ್ತು.
ಇದನ್ನು ಓದಿ:ತಂಡದಿಂದ ಕೈಬಿಟ್ಟ ನೋವನ್ನೇ ಇಂಧನವಾಗಿಸಿಕೊಂಡು ಕನ್ನಡಿಗ ಕೆ ಎಲ್ ರಾಹುಲ್ ಭರ್ಜರಿ ಕಮ್ಬ್ಯಾಕ್