ETV Bharat / sports

ಸೆಮಿಫೈನಲ್​ಗೂ ಮುನ್ನ ಇಂಗ್ಲೆಂಡ್​ಗೆ ಶಾಕ್​.. ಶರವೇಗದ ಬೌಲರ್​ ಮಾರ್ಕ್​ವುಡ್​ಗೆ ಗಾಯ

ವಿಶ್ವಕಪ್​ನಲ್ಲಿ ಅತಿವೇಗದ ಬೌಲಿಂಗ್ ಮಾಡಿ ದಾಖಲೆ ನಿರ್ಮಿಸಿದ ಇಂಗ್ಲೆಂಡ್​ನ ಮುಂಚೂಣಿ ವೇಗಿ ಮಾರ್ಕ್​ವುಡ್​ ಸ್ನಾಯುಸೆಳೆಕ್ಕೀಡಾಗಿದ್ದಾರೆ. ಭಾರತ ಎದುರಿನ ಸೆಮಿಫೈನಲ್​ ಪಂದ್ಯದಲ್ಲಿ ಕಣಕ್ಕಿಳಿಯುವ ಬಗ್ಗೆ ಅನುಮಾನವಿದೆ.

England bowler mark wood injured
ಶರವೇಗದ ಬೌಲರ್​ ಮಾರ್ಕ್​ವುಡ್​ಗೆ ಗಾಯ
author img

By

Published : Nov 8, 2022, 10:18 PM IST

ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್​ನಲ್ಲಿ ಸೆಮೀಸ್​ ಸೇರಿರುವ ಇಂಗ್ಲೆಂಡ್​ -ಭಾರತ ಭರ್ಜರಿ ತಾಲೀಮು ನಡೆಸುತ್ತಿವೆ. ಈ ಮಧ್ಯೆ ಆಂಗ್ಲ ಪಡೆಯ ಪ್ರಮುಖ ಬೌಲರ್​ ಮಾರ್ಕ್​ ವುಡ್​ ಗಾಯಗೊಂಡಿದ್ದು, ಅಭ್ಯಾಸಕ್ಕೆ ಗೈರಾಗಿದ್ದಾರೆ. ಬ್ಯಾಟರ್​ ಡೇವಿಡ್​ ಮಲಾನ್​ ಬಳಿಕ ಮಾರ್ಕ್​ ವುಡ್​ ಗಾಯಗೊಂಡಿದ್ದು ಇಂಗ್ಲೆಂಡ್​ಗೆ ತಲೆನೋವಾಗಿದೆ.

ನವೆಂಬರ್​ 10 ರಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ಅಡಿಲೇಡ್​ನಲ್ಲಿ ಎರಡನೇ ಸೆಮಿಫೈನಲ್​ ಕಾದಾಟ ನಡೆಯಲಿದೆ. ತಂಡದ ವೇಗದ ಬೌಲರ್ ಮಾರ್ಕ್ ವುಡ್ ಸಂಪೂರ್ಣ ಫಿಟ್ ಆಗಿಲ್ಲ. ಈ ಕಾರಣಕ್ಕಾಗಿ ಮಂಗಳವಾರದ ಅಭ್ಯಾಸದಲ್ಲಿ ಅವರು ಭಾಗವಹಿಸಲಿಲ್ಲ. ಸೆಮಿಫೈನಲ್‌ಗೂ ಮುನ್ನ ಇಂಗ್ಲೆಂಡ್‌ಗೆ ಇದು ಹಿನ್ನಡೆ ಉಂಟು ಮಾಡುವ ಆತಂಕವಿದೆ.

ಸ್ನಾಯು ಸೆಳೆತಕ್ಕೀಡಾಗಿರುವ ಇಂಗ್ಲೆಂಡ್​ ಶರವೇಗದ ಬೌಲರ್​ ನೆಟ್ಸ್‌ನಲ್ಲಿ ಮಂಗಳವಾರ ಅಭ್ಯಾಸ ಮಾಡಿಲ್ಲ. ವಿಶ್ವಕಪ್​ ಆರಂಭಕ್ಕೂ ಮೊದಲು ಮೊಣಕೈ ಗಾಯ ಮಾಡಿಕೊಂಡಿದ್ದ ವುಡ್​, ಬಳಿಕ ಚೇತರಿಸಿಕೊಂಡು ತಂಡದಲ್ಲಿ ಸ್ಥಾನ ಪಡೆದಿದ್ದರು. ಕಳೆದ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೀಡಾದ ವುಡ್​ಗೆ ವಿಶ್ರಾಂತಿ ನೀಡಲಾಗಿತ್ತು.

ಪ್ರಸಕ್ತ ವಿಶ್ವಕಪ್​ನಲ್ಲಿ ಅತಿವೇಗದ ಬೌಲಿಂಗ್​ ಮಾಡಿರುವ ವುಡ್​, ಗಂಟೆಗೆ 155 ಕಿಮೀ ಚೆಂಡು ಎಸೆದಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 149.02 ಕಿಮೀ ಸರಾಸರಿಯಲ್ಲಿ ಬೌಲ್ ಮಾಡಿದ್ದ ವುಡ್​, ನ್ಯೂಜಿಲ್ಯಾಂಡ್​​ ವಿರುದ್ಧ 154.74 ಮಿಂಚಿನ ವೇಗದಲ್ಲಿ ಚೆಂಡು ಎಸೆದಿದ್ದರು. ಅಂದರೆ ಸರಾಸರಿ ಗಂಟೆಗೆ 155 ಕಿ.ಮೀ. ಎಸೆದು ಪ್ರಸಕ್ತ ವಿಶ್ವಕಪ್‌ನ ಅತ್ಯಂತ ವೇಗದ ಬೌಲರ್​ ಎಂಬ ದಾಖಲೆ ನಿರ್ಮಿಸಿದ್ದಾರೆ.

ಮಾರ್ಕ್​ವುಡ್​ಗೂ ಮೊದಲು ಎಡಗೈ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ ಶ್ರೀಲಂಕಾ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಗಾಯಗೊಂಡು ವಿಶ್ರಾಂತಿಯಲ್ಲಿದ್ದಾರೆ. ಗಾಯಗೊಂಡಿರುವ ಮಾರ್ಕ್​ವುಡ್​ 4 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದು, ಸೆಮಿಫೈನಲ್​ ಪಂದ್ಯದಿಂದ ಹೊರಬಿದ್ದರೆ, ಅವರ ಜಾಗಕ್ಕೆ ಕ್ರಿಸ್ ಜೋರ್ಡಾನ್ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಓದಿ: ಟಿ20 ವಿಶ್ವಕಪ್​ನಲ್ಲಿ ಆರ್​ ಅಶ್ವಿನ್​ ದಾಖಲೆ.. ಅತ್ಯಧಿಕ ವಿಕೆಟ್​ ಕಿತ್ತ ಮೊದಲ ಭಾರತೀಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.