ETV Bharat / sports

ಬಟ್ಲರ್ ಅಜೇಯ ಅರ್ಧಶತಕ: ಇಂಗ್ಲೆಂಡ್​ಗೆ ಸುಲಭ ತುತ್ತಾದ ಶ್ರೀಲಂಕಾ - ಶ್ರೀಲಂಕಾ ವಿರುದ್ಧ ಇಂಗ್ಲೆಂಡ್​ಗೆ 8 ವಿಕೆಟ್​ ಜಯ

ಕಾರ್ಡಿಫ್​ನ ಸೋಫಿಯಾ ಗಾರ್ಡನ್ಸ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 20 ಓವರ್​ಗಳಲ್ಲಿ ಕೇವಲ 129 ರನ್​ಗಳಿಸಲಷ್ಟೇ ಶಕ್ತವಾಯಿತು.

England vs Sri Lanka 1st T20I
England vs Sri Lanka 1st T20I
author img

By

Published : Jun 24, 2021, 5:10 PM IST

ಕಾರ್ಡಿಫ್: ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಜೋಸ್ ಬಟ್ಲರ್​ ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್​ 8 ವಿಕೆಟ್​ಗಳ ಸುಲಭ ಜಯ ಸಾಧಿಸಿದೆ.

ಕಾರ್ಡಿಫ್​ನ ಸೋಫಿಯಾ ಗಾರ್ಡನ್ಸ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 20 ಓವರ್​ಗಳಲ್ಲಿ ಕೇವಲ 129 ರನ್​ಗಳಿಸಲಷ್ಟೇ ಶಕ್ತವಾಯಿತು.

ನಾಯಕ ಕುಸಾಲ್ ಪೆರೆರಾ 26 ಎಸೆತಗಳಲ್ಲಿ 30 ಮತ್ತು ದಾಸುನ್ ಶನಕ 44 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 50 ರನ್​ಗಳಿಸಿದರು.

ಇಂಗ್ಲೆಂಡ್ ಪರ ಆದಿಲ್ ರಶೀದ್ 17ಕ್ಕೆ2, ಸ್ಯಾಮ್ ಕರ್ರನ್ 25ಕ್ಕೆ2, ಮಾರ್ಕ್​ವುಡ್​ 33ಕ್ಕೆ1, ಜೋರ್ಡನ್ 29ಕ್ಕೆ2 ಮತ್ತು ಲಿವಿಂಗ್​ಸ್ಟೋನ್ 9ಕ್ಕೆ 1 ವಿಕೆಟ್ ಪಡೆದು ಲಂಕಾ ತಂಡವನ್ನು ಅಲ್ಪಮೊತ್ತಕ್ಕೆ ನಿಯಂತ್ರಿಸಿದರು.

130 ರನ್​ಗಳ ಸುಲಭ ಗುರಿ ಬೆನ್ನತ್ತಿದ ಇಂಗ್ಲೆಂಡ್ ಕೇವಲ 17.1 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆರಂಭಿಕರಾದ ಜೇಸನ್​ ರಾಯ್ 22 ಎಸೆತಗಳಲ್ಲಿ 36 ರನ್​ಗಳಿಸಿದರೆ, ಜೋಸ್​ ಬಟ್ಲರ್​ 55 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 68 ಮತ್ತು ಬೈರ್​ಸ್ಟೋವ್​ ಅಜೇಯ 13 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಇದನ್ನು ಓದಿ:ವಿಲಿಯಮ್ಸ್​ ನೇತೃತ್ವದ ಈ ತಂಡ ನ್ಯೂಜಿಲ್ಯಾಂಡ್ ಇತಿಹಾಸದಲ್ಲೇ ಅತ್ಯುತ್ತಮವಾದದ್ದು: ಹ್ಯಾಡ್ಲಿ ಮೆಚ್ಚುಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.