ಲೀಡ್ಸ್(ಇಂಗ್ಲೆಂಡ್): ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಪಾರಮ್ಯ ಮೆರೆದಿದ್ದು, ಟೆಸ್ಟ್ ಸರಣಿಯಲ್ಲಿ 3-0 ಅಂತರದ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ನ್ಯೂಜಿಲ್ಯಾಂಡ್ ನೀಡಿದ್ದ 296ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ತಂಡದ ಪರ ಅಬ್ಬರಿಸಿದ ಬೈರ್ ಸ್ಟೋ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 2ನೇ ಫಿಫ್ಟಿ ಭಾರಿಸಿದ ಸಾಧನೆ ಮಾಡಿದರು.
ಮೊದಲ ಇನ್ನಿಂಗ್ಸ್ನಲ್ಲಿ ನ್ಯೂಜಿಲ್ಯಾಂಡ್ 329ರನ್ಗಳಿಕೆ ಮಾಡಿ ಆಲೌಟ್ ಆಗಿತ್ತು. ಇಂಗ್ಲೆಂಡ್ ತಂಡ ಸಹ 360ರನ್ಗಳಿಕೆ ಮಾಡಿ ಅಲ್ಪ ಮುನ್ನಡೆ ಪಡೆದುಕೊಂಡಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ 326ರನ್ಗಳಿಗೆ ಕಿವೀಸ್ ಪಡೆ ಆಲೌಟ್ ಆಗುವ ಮೂಲಕ 296ರನ್ಗಳ ಗುರಿ ನೀಡಿತ್ತು.
-
3⃣-0⃣
— ICC (@ICC) June 27, 2022 " class="align-text-top noRightClick twitterSection" data="
England sweep the #ENGvNZ series with a brilliant seven-wicket win at Headingley 👏#ENGvNZ | #WTC23 | 📝 Scorecard: https://t.co/vpeNFuixjp pic.twitter.com/zYPKtdyAoJ
">3⃣-0⃣
— ICC (@ICC) June 27, 2022
England sweep the #ENGvNZ series with a brilliant seven-wicket win at Headingley 👏#ENGvNZ | #WTC23 | 📝 Scorecard: https://t.co/vpeNFuixjp pic.twitter.com/zYPKtdyAoJ3⃣-0⃣
— ICC (@ICC) June 27, 2022
England sweep the #ENGvNZ series with a brilliant seven-wicket win at Headingley 👏#ENGvNZ | #WTC23 | 📝 Scorecard: https://t.co/vpeNFuixjp pic.twitter.com/zYPKtdyAoJ
ಇದನ್ನೂ ಓದಿ: ಭಾರತ-ಶ್ರೀಲಂಕಾ ವನಿತೆಯ ಟಿ20: ಅಂತಿಮ ಪಂದ್ಯದಲ್ಲಿ ಸೋಲು, ಸರಣಿ ಗೆದ್ದ ಕೌರ್ ಬಳಗ
ತಂಡದ ಪರ ಒಲಿ ಪೊಪ್ 82ರನ್, ರೂಟ್ ಅಜೇಯ 86ರನ್ಗಳಿಸಿದರೆ, ಬೈರ್‌ಸ್ಟೋ ಕೇವಲ 44 ಎಸೆತಗಳಲ್ಲಿ ಅಜೇಯ 71ರನ್ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಈ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಇನ್ನೂ ಇಂಗ್ಲೆಂಡ್ ತಂಡಕ್ಕೆ ನ್ಯೂಜಿಲ್ಯಾಂಡ್ ತಂಡದ ಮಾಜಿ ಬ್ಯಾಟರ್ ಮೆಕಲಮ್ ಕೋಚ್ ಆಗಿದ್ದು, ತಮ್ಮ ಮೊದಲ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಮಾಡಿದ್ದಾರೆ.