ಲಂಡನ್ : ಪಾಕಿಸ್ತಾನ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆದರೆ, ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಜೋಶ್ ಬಟ್ಲರ್‌ಗೆ ವಿಶ್ರಾಂತಿ ನೀಡಿದೆ. ಶ್ರೀಲಂಕಾ ವಿರುದ್ಧದ ಸರಣಿಗೂ ಕೂಡ ಇದೇ ತಂಡವನ್ನು ಪ್ರಕಟಿಸಿತ್ತು.
ಆದರೆ, ಟಾಮ್ ಬಾಂಟನ್ ಮಾತ್ರ ಈ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಅವಕಾಶ ಪಡೆದಿರುವ ಹೊಸಮುಖವಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಗಾಯಗೊಂಡಿದ್ದ ಉಪನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮೆನ್ ಜೋಸ್ ಬಟ್ಲರ್‌ಗೆ ವಿಶ್ರಾಂತಿ ನೀಡಲಾಗಿದೆ. ಆದರೆ, ತಾವಾಗಿಯೇ ಹಿಂದೆ ಸರಿದಿರುವ ಎಡಗೈ ಬ್ಯಾಟ್ಸ್‌ಮನ್ ಡೇವಿಡ್ ಮಲನ್ ಜಾಗಕ್ಕೆ ಬ್ಯಾಂಟನ್ ಆಯ್ಕೆಯಾಗಿದ್ದಾರೆ.
ಗಾಯದಿಂದ ಒಂದು ತಿಂಗಳಿನಿಂದ ಹೊರಗುಳಿದಿದ್ದ ಸ್ಟೋಕ್ಸ್ಗೆ ಏಕದಿನ ಸರಣಿಯಲ್ಲಿ ಅವಕಾಶ ಸಿಕ್ಕಿಲ್ಲ. ಆದರೆ, ಪಾಕಿಸ್ತಾನ ವಿರುದ್ಧದ ಟಿ 20 ಸರಣಿಯಿಂದ ಮರಳುವ ಸಾಧ್ಯತೆಯಿದೆ. ಜಾರ್ಜ್ ಗಾರ್ಟನ್ ತಂಡದಲ್ಲಿ ಅವಕಾಶ ಪಡೆದಿರುವ ಏಕೈಕ ಅನ್ಕ್ಯಾಪ್ಡ್ ಪ್ಲೇಯರ್ ಆಗಿದ್ದಾರೆ.
ಐಸಿಸಿ ಏಕದಿನ ಸೂಪರ್ ಲೀಗ್ನ ಭಾಗವಾಗಿರುವ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಜುಲೈ 8, 10 ಮತ್ತು 13ರಂದು ಕಾರ್ಡಿಫ್‌ನಲ್ಲಿ ಏಕದಿನ ಸರಣಿ ನಡೆಯಲಿದೆ. ಸೂಪರ್ ಲೀಗ್ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ನಂಬರ್ 1 ಸ್ಥಾನದಲ್ಲಿದ್ದರೆ, ಪಾಕಿಸ್ತಾನ 3ನೇ ಸ್ಥಾನದಲ್ಲಿದೆ.
ಏಕದಿನ ಸರಣಿಗೆ ಇಂಗ್ಲೆಂಡ್ ತಂಡ :
ಇಯಾನ್ ಮಾರ್ಗನ್ (ನಾಯಕ), ಜಾನಿ ಬೈರ್‌ಸ್ಟೋವ್, ಜೇಸನ್ ರಾಯ್, ಜೋ ರೂಟ್, ಸ್ಯಾಮ್ ಬಿಲ್ಲಿಂಗ್ಸ್, ಮೊಯೀನ್ ಅಲಿ, ಸ್ಯಾಮ್ ಕರ್ರನ್, ಡೇವಿಡ್ ವಿಲ್ಲಿ, ಟಾಮ್ ಕರ್ರನ್, ಆದಿಲ್ ರಶೀದ್, ಮಾರ್ಕ್ ವುಡ್, ಲಿಯಾಮ್ ಲಿವಿಂಗ್ಸ್ಟೋನ್, ಕ್ರಿಸ್ ವೋಕ್ಸ್, ಲಿಯಾಮ್ ಡಾಸನ್, ಜಾರ್ಜ್ ಗಾರ್ಟನ್, ಟಾಮ್ ಬಾಂಟನ್
ಇದನ್ನು ಓದಿ: ಕ್ರಿಕೆಟ್ ಬಗ್ಗೆ ಎಳ್ಳಷ್ಟು ಜ್ಞಾನ ಇಲ್ಲದವರು ಕೊಹ್ಲಿ ನಾಯಕತ್ವವನ್ನು ಪ್ರಶ್ನಿಸುತ್ತಿದ್ದಾರೆ..