ಎಡ್ಜ್ಬಾಸ್ಟನ್(ಇಂಗ್ಲೆಂಡ್): ಆತಿಥೇಯ ಇಂಗ್ಲೆಂಡ್ ವಿರುದ್ಧ ನಾಳೆಯಿಂದ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಆಂಗ್ಲರ ಪಡೆ ಆಡುವ ಹನ್ನೊಂದು ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸುವ ಛಲದಲ್ಲಿರುವ ಆಂಗ್ಲರು ಬಲಾಢ್ಯ ಆಟಗಾರರನ್ನು ಕಣಕ್ಕಿಳಿಸಿದ್ದಾರೆ.
ಪ್ರಮುಖವಾಗಿ ಅನುಭವಿ ವೇಗದ ಬೌಲರ್ಗಳಾದ ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್ ಆಡುವ 11ರ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸ್ಯಾಮ್ ಬಿಲ್ಲಿಂಗ್ಸ್ ಕೂಡ ತಂಡದಲ್ಲಿದ್ದಾರೆ. ತಂಡದ ನಾಯಕತ್ವ ಜವಾಬ್ದಾರಿ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮೇಲಿದ್ದು, ಓರ್ವ ಸ್ಪಿನ್ನರ್ ಟೀಂ ಸೇರಿದ್ದಾರೆ.
-
Our XI for the fifth LV= Insurance Test with @BCCI 🏏
— England Cricket (@englandcricket) June 30, 2022 " class="align-text-top noRightClick twitterSection" data="
More here: https://t.co/uXHG3iOVCA
🏴 #ENGvIND 🇮🇳 pic.twitter.com/xZlULGsNiB
">Our XI for the fifth LV= Insurance Test with @BCCI 🏏
— England Cricket (@englandcricket) June 30, 2022
More here: https://t.co/uXHG3iOVCA
🏴 #ENGvIND 🇮🇳 pic.twitter.com/xZlULGsNiBOur XI for the fifth LV= Insurance Test with @BCCI 🏏
— England Cricket (@englandcricket) June 30, 2022
More here: https://t.co/uXHG3iOVCA
🏴 #ENGvIND 🇮🇳 pic.twitter.com/xZlULGsNiB
ಇಂಗ್ಲೆಂಡ್ ತಂಡ ಹೀಗಿದೆ: ಝಾಕ್ ಕ್ರಾಲಿ, ಅಲೆಕ್ಸ್ ಲೀಸ್, ಆಲಿ ಪೋಪ್, ಜೋ ರೂಟ್, ಜೊನಾಥನ್ ಬೈರ್‌ಸ್ಟೋ, ಬೆನ್ ಸ್ಟೋಕ್ಸ್ (ಕ್ಯಾಪ್ಟನ್), ಸ್ಯಾಮ್ ಬಿಲ್ಲಿಂಗ್ಸ್(ವಿ.ಕೀ), ಮ್ಯಾಥ್ಯೂ ಪಾಟ್ಸ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
ಇದನ್ನೂ ಓದಿ: ರೋಹಿತ್ ಶರ್ಮಾ ಆಡದಿರುವ ಬಗ್ಗೆ ಇನ್ನೂ ತೀರ್ಮಾನವಿಲ್ಲ: ರಾಹುಲ್ ದ್ರಾವಿಡ್
ಸ್ಟುವರ್ಟ್ ಬ್ರಾಡ್, ಆಂಡರ್ಸನ್ ಮತ್ತು ಮ್ಯಾಥ್ಯೂ ಪಾಟ್ಸ್ ವೇಗದ ಬೌಲರ್ಗಳಾಗಿದ್ದು, ಜಾಕ್ ಲೀಚ್ ಸ್ಪಿನ್ನರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ತಂಡದ ಕೋಚ್ ಬ್ರೆಂಡನ್ ಮೆಕಲಮ್ ಅವರಿಗಿದು ಎರಡನೇ ಸತ್ವ ಪರೀಕ್ಷೆಯಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿ ಆಯೋಜನೆಗೊಂಡಿತ್ತು. ಟೀಂ ಇಂಡಿಯಾದ ಕೆಲ ಪ್ಲೇಯರ್ಸ್ಗೆ ಕೋವಿಡ್ ಕಾಣಿಸಿಕೊಂಡ ಕಾರಣ ಸ್ವದೇಶಕ್ಕೆ ವಾಪಸ್ ಆಗಿದ್ದರು. ಸರಣಿಯಲ್ಲಿ ಭಾರತ ಈಗಾಗಲೇ 2-1 ಅಂತರದ ಮುನ್ನಡೆಯಲ್ಲಿದೆ.