ಸಿಡ್ನಿ: ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಪ್ರವಾಸಿ ಇಂಗ್ಲೆಂಡ್ ತಂಡ 79.1 ಓವರ್ಗಳಲ್ಲಿ 294 ರನ್ಗಳಿಗೆ ಆಲೌಟ್ ಆಗುವ ಮೂಲಕ 122 ರನ್ಗಳ ಹಿನ್ನಡೆ ಅನುಭವಿಸಿದೆ.
-
England all out!
— ICC (@ICC) January 7, 2022 " class="align-text-top noRightClick twitterSection" data="
Australia take a lead of 122 runs into the second innings as they plot victory plans on day four.
Watch the #Ashes live on https://t.co/CPDKNx77KV (in select regions) 📺#AUSvENG | #WTC23 pic.twitter.com/PyVQLhCJ76
">England all out!
— ICC (@ICC) January 7, 2022
Australia take a lead of 122 runs into the second innings as they plot victory plans on day four.
Watch the #Ashes live on https://t.co/CPDKNx77KV (in select regions) 📺#AUSvENG | #WTC23 pic.twitter.com/PyVQLhCJ76England all out!
— ICC (@ICC) January 7, 2022
Australia take a lead of 122 runs into the second innings as they plot victory plans on day four.
Watch the #Ashes live on https://t.co/CPDKNx77KV (in select regions) 📺#AUSvENG | #WTC23 pic.twitter.com/PyVQLhCJ76
ಶುಕ್ರವಾರ 7 ವಿಕೆಟ್ ಕಳೆದುಕೊಂಡು 258 ರನ್ಗಳಿಸಿದ್ದ ಇಂಗ್ಲೆಂಡ್ ಇಂದು ಆ ಮೊತ್ತಕ್ಕೆ ಕೇವಲ 36 ರನ್ ಸೇರಿಸಿ ಸರ್ವಪತನ ಕಂಡಿತು. 103 ರನ್ಗಳಿಸಿ ಅಜೇಯರಾಗುಳಿದಿದ್ದ ಜಾನಿ ಬೈರ್ಸ್ಟೋವ್ 158 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ಗಳ ಸಹಿತ 113 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಜಾಕ್ ಲೀಚ್ 10, ಬ್ರಾಡ್ 15 ರನ್ಗಳಿಸಿದರು.
ಬೆನ್ ಸ್ಟೋಕ್ಸ್ 91 ಎಸೆತಗಳಲ್ಲಿ 66, ಮಾರ್ಕ್ ವುಡ್ 41 ಎಸೆತಗಳಲ್ಲಿ 39 ರನ್ಗಳಿಸಿ ಹಿನ್ನಡೆಯ ಅಂತರವನ್ನು ತಗ್ಗಿಸಿದ್ದರು. ಸ್ಕಾಟ್ ಬೊಲ್ಯಾಂಡ್ 36ಕ್ಕೆ 4, ನೇಥನ್ ಲಿಯಾನ್ 88ಕ್ಕೆ 2, ಪ್ಯಾಟ್ ಕಮಿನ್ಸ್ 68ಕ್ಕೆ 2 ವಿಕೆಟ್, ಸ್ಟಾರ್ಕ್ ಮತ್ತು ಗ್ರೀನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಉಸ್ಮಾನ್ ಖವಾಜ್(137) ಶತಕ ಹಾಗೂ ಸ್ಟೀವ್ ಸ್ಮಿತ್ 67, ವಾರ್ನರ್ 30., ಹ್ಯಾರಿಸ್ 38, ಸ್ಟಾರ್ಕ್ 34 ರನ್ಗಳ ನೆರವಿನಿಂದ 134 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿಕೊಂಡಿತ್ತು.
ಇದೀಗ 122 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡ 12 ರನ್ಗಳಿಸುವಷ್ಟರಲ್ಲೇ ಆರಂಭಿಕ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡಿದೆ.
ಇದನ್ನೂ ಓದಿ:ಮೂವರು ಕ್ರಿಕೆಟಿಗರ ಮೇಲಿನ ನಿಷೇಧ ಹಿಂಪಡೆದ ಲಂಕಾ ಕ್ರಿಕೆಟ್ ಮಂಡಳಿ