ETV Bharat / sports

ENG vs IND Test: ರೋಹಿತ್‌ಗೆ ಕೋವಿಡ್‌, ಮಯಾಂಕ್‌ಗೆ ಅವಕಾಶ, ಯಾರಿಗೆ ನಾಯಕತ್ವ? - ಮಯಾಂಕ್​ ಅಗರ್​ವಾಲ್​ಗೆ ಬುಲಾವ್​

ಇಂಗ್ಲೆಂಡ್​ ವಿರುದ್ಧ ಜುಲೈ 1 ರಿಂದ ಆರಂಭವಾಗುವ ಟೆಸ್ಟ್​ ಪಂದ್ಯಕ್ಕೆ ಕೊರೊನಾ ಸೋಂಕಿಗೆ ತುತ್ತಾಗಿರುವ ರೋಹಿತ್​ ಶರ್ಮಾ ಬದಲಾಗಿ ಮಯಾಂಕ್​ ಅಗರ್​ವಾಲ್​ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಕೊರೊನಾಗೆ ತುತ್ತಾದ ರೋಹಿತ್​ ಬದಲಾಗಿ ಮಯಾಂಕ್​ಗೆ ಅವಕಾಶ

author img

By

Published : Jun 27, 2022, 4:51 PM IST

ಇಂಗ್ಲೆಂಡ್​ ವಿರುದ್ಧ ಮರುನಿಗದಿಯಾದ ಏಕೈಕ ಟೆಸ್ಟ್​ ಪಂದ್ಯಾರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ ಕೊರೊನಾ ಆಘಾತ ನೀಡಿದೆ. ಸೋಂಕಿಗೆ ತುತ್ತಾಗಿರುವ ತಂಡದ ನಾಯಕ ರೋಹಿತ್​ ಶರ್ಮಾ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದ್ದು, ಬದಲಿ ಆಟಗಾರನಾಗಿ ಆರಂಭಿಕ, ಕರ್ನಾಟಕದ ಮಯಾಂಕ್​ ಅಗರ್​ವಾಲ್​ಗೆ ಸ್ಥಾನ ನೀಡಲಾಗಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಬಿಸಿಸಿಐ, ಕೊರೊನಾ ದೃಢಪಟ್ಟಿರುವ ರೋಹಿತ್​ ಶರ್ಮಾ ಸ್ಥಾನಕ್ಕೆ ಮಯಾಂಕ್​ ಅಗರ್​ವಾಲ್​ರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದೆ. ರೋಹಿತ್​ ಪಂದ್ಯದಿಂದ ಹೊರಗುಳಿದರೆ, ನಾಯಕತ್ವದ ಜವಾಬ್ದಾರಿ ಯಾರ ಮೇಲೆ ಬೀಳಲಿದೆ ಎಂಬುದು ಪ್ರಶ್ನೆಯಾಗಿದೆ.

ಶನಿವಾರ ನಡೆಸಿದ ರ್ಯಾಪಿಡ್​ ಆ್ಯಂಟಿಜನ್ ಟೆಸ್ಟ್​ನಲ್ಲಿ ರೋಹಿತ್​ ಶರ್ಮಾಗೆ ಕೋವಿಡ್​ ದೃಢಪಟ್ಟಿತ್ತು. ಪ್ರಸ್ತುತ ಅವರು ಕ್ವಾರಂಟೈನ್​ ಆಗಿದ್ದು ಬಿಸಿಸಿಐ ವೈದ್ಯಕೀಯ ತಂಡದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮರುನಿಗದಿಯಾದ ಪಂದ್ಯ ಜುಲೈ 1 ರಿಂದ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ವರ್ಷ ನಡೆದ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಇದಾಗಿದೆ. ಕೊರೊನಾ ವೈರಸ್​ ಕಾರಣಕ್ಕೆ ಪಂದ್ಯ ಮುಂದೂಡಲಾಗಿತ್ತು. ಭಾರತ ಸರಣಿಯಲ್ಲಿ 2-1ರ ಮುನ್ನಡೆಯಲ್ಲಿದೆ.

ಇದನ್ನೂ ಓದಿ: ಚುಟುಕು ಕ್ರಿಕೆಟ್‌ನಲ್ಲಿ ಧೋನಿ, ಕೊಹ್ಲಿ ಮಾಡದ ಸಾಧನೆ ತೋರಿದ ಹಾರ್ದಿಕ್‌ ಪಾಂಡ್ಯಾ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.