ಲಂಡನ್: ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕೇವಲ 56 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿರುವ ಭಾರತ ಆಘಾತ ಅನುಭವಿಸಿದೆ.
ನಾಲ್ಕನೇ ದಿನ 27 ರನ್ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತೀಯ ತಂಡ 27 ರನ್ಗಳಿಸುವಷ್ಟರಲ್ಲಿ ಆರಂಭಿಕರಾದ ರೋಹಿತ್ ಶರ್ಮಾ (21) ಮತ್ತು ಕೆ.ಎಲ್ ರಾಹುಲ್ (5) ವಿಕೆಟ್ ಕಳೆದುಕೊಂಡಿತು. ಮಾರ್ಕ್ವುಡ್ ಇವರಿಬ್ಬರ ವಿಕೆಟ್ ಪಡೆದು ಇಂಗ್ಲೆಂಡ್ಗೆ ಮೇಲುಗೈ ತಂದುಕೊಟ್ಟರು.
-
Lunch at Lord's on day four 🍲
— ICC (@ICC) August 15, 2021 " class="align-text-top noRightClick twitterSection" data="
The hosts take control of the match with three crucial wickets in the session. #WTC23 | #ENGvIND | https://t.co/rhWT865o91 pic.twitter.com/5gF7GVnfs8
">Lunch at Lord's on day four 🍲
— ICC (@ICC) August 15, 2021
The hosts take control of the match with three crucial wickets in the session. #WTC23 | #ENGvIND | https://t.co/rhWT865o91 pic.twitter.com/5gF7GVnfs8Lunch at Lord's on day four 🍲
— ICC (@ICC) August 15, 2021
The hosts take control of the match with three crucial wickets in the session. #WTC23 | #ENGvIND | https://t.co/rhWT865o91 pic.twitter.com/5gF7GVnfs8
ಇನ್ನು 3ನೇ ವಿಕೆಟ್ಗೆ ಒಂದಾದ ನಾಯಕ ಕೊಹ್ಲಿ ಮತ್ತು ಪೂಜಾರ 28 ರನ್ಗ ಸೇರಿಸಿ ಉತ್ತಮ ಜೊತೆಯಾಟ ಕಟ್ಟುತ್ತಿದ್ದರು. ಆದರೆ ಸ್ಯಾಮ್ ಕರನ್ ಓವರ್ನಲ್ಲಿ ಹೊರ ಹೋಗುತ್ತಿದ್ದ ಚೆಂಡನ್ನು ಕೆಣಕಿದ ಅವರು ಕೀಪರ್ ಜೋಸ್ ಬಟ್ಲರ್ಗೆ ಕ್ಯಾಚಿತ್ತರು.
ಭೋಜನ ವಿರಾಮಕ್ಕೂ ಮುನ್ನ ಭಾರತ ತಂಡ 3 ವಿಕೆಟ್ ಕಳೆದುಕೊಂಡು 56 ರನ್ಗಳಿಸಿ 29 ರನ್ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಪೂಜಾರ 46 ಎಸೆತಗಳಲ್ಲಿ 3 ರನ್ ಮತ್ತು ರಹಾನೆ 8 ಎಸೆತಗಳಲ್ಲಿ 1ರನ್ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
3ನೇ ದಿನ ಭಾರತದ 364 ರನ್ಗಳಿಗೆ ಉತ್ತರವಾಗಿ ಇಂಗ್ಲೆಂಡ್ 391 ರನ್ಗಳಿಸಿ 27 ರನ್ಗಳ ಮುನ್ನಡೆ ಸಾಧಿಸಿತ್ತು. ಆಂಗ್ಲರ ನಾಯಕ ಜೋ ರೂಟ್ 180 ರನ್ಗಳಿಸಿ ಇಂಗ್ಲೆಂಡ್ ತಂಡಕ್ಕೆ ನೆರವಾಗಿದ್ದರು.
ಇದನ್ನೂ ಓದಿ: 2ನೇ ಭಾಗದ IPLನಲ್ಲಾಡಲು ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಸಿಕ್ತು ಗ್ರೀನ್ ಸಿಗ್ನಲ್