ನಾಟಿಂಗ್‌ಹ್ಯಾಮ್ : ಇಂಗ್ಲೆಂಡ್ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂರನೇ ದಿನವೂ ಕೂಡ ವರುಣನ ಕಾಟದಿಂದ ಆಟ ಕೊನೆಗೊಂಡಿತು. ದಿನದಾಟದ ಅಂತ್ಯಗೊಂಡಾಗ ಆಂಗ್ಲರು ಎರಡನೇ ಇನ್ನಿಂಗ್ಸ್‌ನಲ್ಲಿ 11.1 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 25 ರನ್ ಗಳಿಸಿದ್ದು, 70 ರನ್ಗಳ ಹಿನ್ನಡೆಯಲ್ಲಿದ್ದಾರೆ.
ಇಂಗ್ಲೆಂಡ್ ಆರಂಭಿಕರಾದ ರೊರಿ ಬರ್ನ್ಸ್ ಮತ್ತು ಡೊಮಿನಿಕ್ ಸಿಬ್ಲಿ ಕ್ರಮವಾಗಿ 11 ಮತ್ತು 9 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ದಿನದ ಮೂರನೇ ಅವಧಿಯಲ್ಲಿ ನಿರಂತರ ಮಳೆಯಿಂದಾಗಿ ಆಟ ನಿಲ್ಲಿಸಲಾಯಿತು.
ಇದಕ್ಕೂ ಮುನ್ನ ಭಾರತ 278 ರನ್ಗಳಿಗೆ ಆಲೌಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 95 ರನ್ಗಳ ಮುನ್ನಡೆ ಸಾಧಿಸಿತು. ಟೀಂ ಇಂಡಿಯಾ ಪರ 2ನೇ ದಿನದಾಟದ ಅಂತ್ಯದಲ್ಲಿ ಅರ್ಧಶತಕ ಬಾರಿಸಿದ್ದ ಕನ್ನಡಿಗ ರಾಹುಲ್ 84 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಶತಕದಂಚಿನಲ್ಲಿ ಎಡವಿದರು. 25 ರನ್ ಬಾರಿಸಿದ ರಿಷಬ್ ಪಂತ್ ಹಾಗೂ ಅರ್ಧ ಶತಕ ಗಳಿಸಿದ ಆಲ್ರೌಂಡರ್ ರವೀಂದ್ರ ಜಡೇಜಾ (56) ರಾಹುಲ್ಗೆ ಉತ್ತಮ ಸಾಥ್ ನೀಡಿದರು.
-
That's about it on Day 3⃣ of the first #ENGvIND Test at Trent Bridge!
— BCCI (@BCCI) August 6, 2021 " class="align-text-top noRightClick twitterSection" data="
Rain has cut short the day's play, with England moving to 2⃣5⃣/0⃣ - trailing #TeamIndia by 7⃣0⃣ runs.
Scorecard 👉 https://t.co/TrX6JMzP9A pic.twitter.com/vNIfN11KqP
">That's about it on Day 3⃣ of the first #ENGvIND Test at Trent Bridge!
— BCCI (@BCCI) August 6, 2021
Rain has cut short the day's play, with England moving to 2⃣5⃣/0⃣ - trailing #TeamIndia by 7⃣0⃣ runs.
Scorecard 👉 https://t.co/TrX6JMzP9A pic.twitter.com/vNIfN11KqPThat's about it on Day 3⃣ of the first #ENGvIND Test at Trent Bridge!
— BCCI (@BCCI) August 6, 2021
Rain has cut short the day's play, with England moving to 2⃣5⃣/0⃣ - trailing #TeamIndia by 7⃣0⃣ runs.
Scorecard 👉 https://t.co/TrX6JMzP9A pic.twitter.com/vNIfN11KqP
ಬಳಿಕ ಬಾಲಂಗೋಚಿಗಳಾದ ಶಮಿ 13, ಸಿರಾಜ್ 7 ಹಾಗೂ ಅಬ್ಬರದ ಬ್ಯಾಟಿಂಗ್ ಮಾಡಿದ ಬುಮ್ರಾ 28 ರನ್ ಗಳಿಸಿ ತಂಡವು ಅಮೂಲ್ಯ ಮುನ್ನಡೆ ಪಡೆಯುವಲ್ಲಿ ನೆರವಾದರು. ಶಾರ್ದುಲ್ ಠಾಕೂರ್ ಪಾದಾರ್ಪಣೆ ಪಂದ್ಯದಲ್ಲೇ ಖಾತೆ ತೆರೆಯಲಾಗದೆ ನಿರಾಸೆ ಅನುಭವಿಸಿದರು. ಇಂಗ್ಲೆಂಡ್ ಪರ ರಾಬಿನ್ಸನ್ 5 ವಿಕೆಟ್ ಕಬಳಿಸಿ ಮಿಂಚಿದರು.
ಎರಡನೇ ಇನ್ನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 25 ರನ್ ಗಳಿಸಿರುವ ಇಂಗ್ಲೆಂಡ್ 70 ರನ್ಗಳ ಹಿನ್ನಡೆಯಲ್ಲಿದ್ದು, ನಾಲ್ಕನೇ ದಿನ ಬ್ಯಾಟಿಂಗ್ ಮುಂದುವರೆಸಲಿದೆ. ಆಂಗ್ಲರನ್ನು ಬೇಗ ಕಟ್ಟಿಹಾಕಿ ಸುಲಭದ ಗೆಲುವಿನ ಗುರಿ ಪಡೆಯುವತ್ತ ಟೀಂ ಇಂಡಿಯಾ ಪ್ರಯತ್ನಿಸಲಿದೆ.
ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್ : 15ನೇ ದಿನದ ಪದಕ ಪಟ್ಟಿ