ಭಾರತದ ಮುಂಚೂಣಿ ವೇಗಿ ಜಸ್ಪ್ರೀತ್ ಬೂಮ್ರಾ ಬೆನ್ನುಮೂಳೆ ಮುರಿತಕ್ಕೆ ಒಳಗಾಗಿ ವಿಶ್ವಕಪ್ ತಂಡದಿಂದ ಹೊರಬಿದ್ದ ಬಳಿಕ ಅವರ ಬದಲಿಗೆ ಹಿರಿಯ ವೇಗಿ ಮೊಹಮದ್ ಶಮಿಯನ್ನು ಆಯ್ಕೆ ಮಾಡಲಾಗಿದೆ. ತಂಡವನ್ನು ಕೂಡಿಕೊಂಡಿರುವ ಶಮಿ ನೆಟ್ನಲ್ಲಿ ಬೆವರಿಳಿಸುತ್ತಿದ್ದಾರೆ. ವಿಶ್ವಕಪ್ ಪಂದ್ಯಗಳಿಗೂ ಮೊದಲು ಭಾರತ ಆಸ್ಟ್ರೇಲಿಯಾ ಜೊತೆ ಅಭ್ಯಾಸ ಪಂದ್ಯವನ್ನಾಡುತ್ತಿದೆ. ಇದಕ್ಕೂ ಮೊದಲು ವೇಗಿ ಮೊಹಮದ್ ಶಮಿ ಟ್ವಿಟ್ಟರ್ನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
"ವಿಶ್ವಕಪ್ನಲ್ಲಿ ಆಡಲು ಎದುರು ನೋಡುತ್ತಿದ್ದೇನೆ. ತಂಡಕ್ಕೆ ಹಿಂತಿರುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕೆ ಸಾಕಷ್ಟು ಕಠಿಣ ಪರಿಶ್ರಮ, ಬದ್ಧತೆ ಮತ್ತು ಸಮರ್ಪಣಾಭಾವ ಅಗತ್ಯವಿದೆ. ಆಸ್ಟ್ರೇಲಿಯಾ ಪ್ರವಾಸದ ಸಂಪೂರ್ಣ ಲಾಭ ಪಡೆಯಬೇಕಿದೆ. ಟೀಂ ಇಂಡಿಯಾ ಮತ್ತು ನನ್ನ ಗೆಳೆಯರ ಜೊತೆ ಆಡುವುದಕ್ಕಿಂತ ಉತ್ತಮ ಭಾವನೆ ಮತ್ತೊಂದಿಲ್ಲ" ಎಂದು ಬರೆದುಕೊಂಡಿದ್ದಾರೆ. ಶಮಿಯ ಈ ಭಾವನಾತ್ಮಕ ಬರಹಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
It required a lot of hard work, commitment and dedication to be back but the journey to Australia has been thoroughly rewarding. No better feeling than to be back with #TeamIndia and my boys. Looking forward to the World Cup. pic.twitter.com/K539OYAHzn
— Mohammad Shami (@MdShami11) October 17, 2022 " class="align-text-top noRightClick twitterSection" data="
">It required a lot of hard work, commitment and dedication to be back but the journey to Australia has been thoroughly rewarding. No better feeling than to be back with #TeamIndia and my boys. Looking forward to the World Cup. pic.twitter.com/K539OYAHzn
— Mohammad Shami (@MdShami11) October 17, 2022It required a lot of hard work, commitment and dedication to be back but the journey to Australia has been thoroughly rewarding. No better feeling than to be back with #TeamIndia and my boys. Looking forward to the World Cup. pic.twitter.com/K539OYAHzn
— Mohammad Shami (@MdShami11) October 17, 2022
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಮೊಹಮದ್ ಶಮಿ ಕೊರೊನಾಗೆ ತುತ್ತಾದ ಕಾರಣ ಸರಣಿಯಲ್ಲಿ ಆಡಿರಲಿಲ್ಲ. ಕ್ವಾರಂಟೈನ್ನಲ್ಲಿದ್ದ ಶಮಿ ಬಳಿಕ ಜಸ್ಪ್ರೀತ್ ಬೂಮ್ರಾ ಬದಲಿಗೆ ಟೀಂ ಇಂಡಿಯಾ ವಿಶ್ವಕಪ್ ತಂಡಕ್ಕೆ ಆಯ್ಕೆಯಾದರು.
ವಿಶ್ವಕಪ್ನಲ್ಲಿ ಆಡಲು ಉತ್ಸುಕವಾಗಿರುವ ಹಿರಿಯ ವೇಗಿ, ನೆಟ್ಸ್ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಿಗೆ ಹೆಚ್ಚಿನ ಬೌಲ್ ಮಾಡಿದ್ದಾರೆ. ಇದೇ ವೇಳೆ ದಿನೇಶ್ ಕಾರ್ತಿಕ್ರನ್ನು ಕ್ಲೀನ್ಬೌಲ್ಡ್ ಮಾಡುವ ಮೂಲಕ ತಮ್ಮ ಬೌಲಿಂಗ್ ಇನ್ನೂ ಮೊನಚು ಕಳೆದುಕೊಂಡಿಲ್ಲ ಎಂಬುದನ್ನು ತೋರಿಸಿಕೊಟ್ಟರು.
ಓದಿ: T20 World Cup: ಕೊರೊನಾ ಇದ್ದರೂ ವಿಶ್ವಕಪ್ನಲ್ಲಿ ಆಡಲು ಆಟಗಾರರಿಗೆ ಅವಕಾಶ