ಕೊಲಂಬೊ (ಶ್ರೀಲಂಕಾ) : ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಎ ನಡುವೆ ಉದಯೋನ್ಮುಖ ಏಷ್ಯಾಕಪ್ 2023ರ ಫೈನಲ್ ಪಂದ್ಯ ನಡೆಯುತ್ತಿದೆ. ಪಾಕ್ ಪರ ತಯ್ಯಬ್ ತಾಹಿರ್ ಶತಕ ಸಿಡಿಸಿದರು. ಈ ಶತಕದ ನೆರವಿನಿಂದ ಪಾಕ್ ತಂಡ ಬೃಹತ್ ಮೊತ್ತ ಕಲೆಹಾಕಿದ್ದು, 50 ಓವರ್ಗಳಲ್ಲಿ 352 ರನ್ ಗಳಿಸಿ ಭಾರತಕ್ಕೆ 353 ರನ್ ಟಾರ್ಗೆಟ್ ನೀಡಿದೆ.
ಮೊದಲು ಟಾಸ್ ಗೆದ್ದ ಭಾರತ ಎ ತಂಡ ನಾಯಕ ಯಶ್ ಧುಲ್ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಪಾಕ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಪಾಕ್ ಆರಂಭಿಕರಾದ ಸೈಮ್ ಅಯೂಬ್ ಮತ್ತು ಸಾಹಿಬ್ಜಾದಾ ಫರ್ಹಾನ್ ಶತಕದ ಜೊತೆಯಾಟವಾಡಿ ಭಾರತದ ಬೌಲರ್ಗಳ ಬೆವರಿಳಿಸಿದರು. ಸೈಮ್ ಅಯೂಬ್ 59 ರನ್ ಗಳಿಸುವ ಮೂಲಕ ಆರ್ಧ ಶತಕ ಪೂರೈಸಿದರೆ, ಮತ್ತೊಂದೆಡೆ ಸಾಹಿಬ್ಜಾದಾ ಫರ್ಹಾನ್ ಕೂಡ ಅರ್ಧಶತಕ (65) ಸಿಡಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು.
ಭಾರತಕ್ಕೆ ಕಂಟಕವಾಗಿದ್ದ ಈ ಜೋಡಿಯನ್ನು ಮಾನವ್ ಸುತಾರ್, 59 ರನ್ ಗಳಿಸಿದ್ದ ಸೈಮ್ ಅಯೂಬ್ ವಿಕೆಟ್ ಪಡೆಯುವ ಮೂಲಕ ಬೇರ್ಪಡಿಸಿದರು. ಬಳಿಕ ಒಮೈರ್ ಯೂಸುಫ್ ಜೊತೆಗೂಡಿ ಸಾಹಿಬ್ಜಾದಾ ಫರ್ಹಾನ್ ಆಕ್ರಮಣಕ್ಕೆ ಮುಂದಾಗುವ ವೇಳೆ ರನ್ ಔಟ್ಗೆ ಬಲಿಯಾದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗಿಳಿದ ತಯ್ಯಬ್ ತಾಹಿರ್ ಆಕರ್ಷಕ ಆಟದ ಮೂಲಕ ಶತಕ (108) ಬಾರಿಸಿ ಪಾಕ್ ಬೃಹತ್ ಮೊತ್ತ ಗಳಿಸಲು ಕಾರಣವಾದರು. ಒಮೈರ್ ಯೂಸುಫ್ 35 ರನ್ ಗಳಿಸಿ ರಿಯಾನ್ ಪರಾಗ್ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
-
Innings Break!
— BCCI (@BCCI) July 23, 2023 " class="align-text-top noRightClick twitterSection" data="
Pakistan 'A' post 352/8 in the first innings.
🎯 India 'A' need 3⃣5⃣3⃣ to win the #ACCMensEmergingTeamsAsiaCup Final 🏆
Second innings coming up shortly.
Scorecard - https://t.co/qztT65tDLs #ACC pic.twitter.com/xUZJY3WaOR
">Innings Break!
— BCCI (@BCCI) July 23, 2023
Pakistan 'A' post 352/8 in the first innings.
🎯 India 'A' need 3⃣5⃣3⃣ to win the #ACCMensEmergingTeamsAsiaCup Final 🏆
Second innings coming up shortly.
Scorecard - https://t.co/qztT65tDLs #ACC pic.twitter.com/xUZJY3WaORInnings Break!
— BCCI (@BCCI) July 23, 2023
Pakistan 'A' post 352/8 in the first innings.
🎯 India 'A' need 3⃣5⃣3⃣ to win the #ACCMensEmergingTeamsAsiaCup Final 🏆
Second innings coming up shortly.
Scorecard - https://t.co/qztT65tDLs #ACC pic.twitter.com/xUZJY3WaOR
ಬಳಿಕ ಒಮೈರ್ ಯೂಸುಫ್ ಕೂಡ ಶತಕದ ನಂತರ ಆರ್.ಎಸ್ ಹಂಗಾರಗೇಕರ ಬೌಲಿಂಗ್ನಲ್ಲಿ ಔಟ್ ಆದರು. ಖಾಸಿಂ ಅಕ್ರಮ್ ಕೂಡ ಶೂನ್ಯಕ್ಕೆ ರಿಯಾನ್ ಪರಾಗ್ ಗೆವಿಕೆಟ್ ನೀಡಿದರು. ಪಾಕ್ ನಾಯಕ ಮೊಹಮ್ಮದ್ ಹ್ಯಾರಿಸ್ ಕೂಡ 2 ರನ್ಗೆ ಸುಸ್ತಾಗಿ ನಿಶಾಂತ್ ಸಿಂಧು ಬೌಲಿಂಗ್ನಲ್ಲಿ ಔಟ್ ಆಗುವ ಮೂಲಕ ಹೊರ ನಡೆದರು. ಮುಬಾಸಿರ್ ಖಾನ್ ಕೆಳ ಕ್ರಮಾಂಕರದಲ್ಲಿ ತಂಡಕ್ಕೆ 35 ರನ್ ಕೊಡುಗೆ ನೀಡಿ ಹಂಗಾರಗೇಕರ ಬೌಲಿಂಗ್ನಲ್ಲಿ ವಿಕೆಟ್ ಕಳೆದುಕೊಂಡರು. ಇನ್ನು 13 ರನ್ ಗಳಿಸಿದ್ದ ಮೆಹ್ರಾನ್ ಮುಮ್ತಾಜ್ ನನ್ನು ಹರ್ಷಿತ್ ರಾಣಾ ತನ್ನ ಬೌಲಿಂಗ್ನಲ್ಲಿ ಬಲಿ ಪಡೆದುಕೊಂಡರು. ಕೊನೆಯಲ್ಲಿ ಮೊಹಮ್ಮದ್ ವಾಸಿಂ ಜೂ 13 ರನ್ ಮತ್ತು ಸೂಫಿಯಾನ್ ಮುಖೀಮ್ 8 ರನ್ ಗಳಿಸಿ ಔಟ್ ಆಗದೆ ಉಳಿದುಕೊಂಡರು.
ಭಾರತ ಪರ ಪಾಕ್ ರನ್ ವೇಗಕ್ಕೆ ಬ್ರೇಕ್ ಹಾಕಲು ಸಾಧ್ಯವಾಗದೆ ಬೌಲರ್ಸ್ ದುಬಾರಿಯಾದರು. ಆದರು ರಿಯಾನ್ ಪರಾಗ್ 4 ಓವರ್ನಲ್ಲಿ 24 ರನ್ ನೀಡಿ 6.00 ಸರಾಸರಿಯಲ್ಲಿ 2 ವಿಕೆಟ್ ಪಡೆದು ಮಿಂಚಿದರು. ಹಂಗಾರಗೇಕರ ಕೂಡ 2 ವಿಕೆಟ್ ಪಡೆದುಕೊಂಡು ಹೆಚ್ಚು ಬಿಟ್ಟು ಕೊಟ್ಟರು. ಇನ್ನುಳಿದಂತೆ ಮಾನವ್ ಸುತಾರ್, ಹರ್ಷಿತ್ ರಾಣಾ, ನಿಶಾಂತ್ ಸಿಂಧು ತಲಾ ಒಂದು ವಿಕೆಟ್ ಪಡೆದರು. ಅಭಿಷೇಕ್ ಶರ್ಮಾ ಮತ್ತು ಯುವರಾಜ್‌ಸಿನ್ಹ್ ದೋಡಿಯಾ ವಿಕೆಟ್ ಪಡೆಯುವಲ್ಲಿ ವಿಫಲರಾದರೂ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದರು.
ತಂಡಗಳು : ಭಾರತ ಎ ಇಲೆವೆನ್ : ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ, ನಿಕಿನ್ ಜೋಸ್, ಯಶ್ ಧುಲ್ (ನಾಯಕ), ರಿಯಾನ್ ಪರಾಗ್, ನಿಶಾಂತ್ ಸಿಂಧು, ಧ್ರುವ್ ಜುರೆಲ್ (ವಿಕೀ), ಮಾನವ್ ಸುತಾರ್, ಯುವರಾಜ್‌ಸಿನ್ಹ್ ದೋಡಿಯಾ, ಹರ್ಷಿತ್ ರಾಣಾ, ರಾಜವರ್ಧನ್ ಹಂಗಾರಗೇಕರ.
ಪಾಕಿಸ್ತಾನ ಎ ಇಲೆವೆನ್ : ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಒಮೈರ್ ಯೂಸುಫ್, ತಯ್ಯಬ್ ತಾಹಿರ್, ಖಾಸಿಂ ಅಕ್ರಮ್, ಮೊಹಮ್ಮದ್ ಹ್ಯಾರಿಸ್ (ನಾಯಕ ಮತ್ತು ವಿಕೀ), ಮುಬಾಸಿರ್ ಖಾನ್ ಮತ್ತು ಮೆಹ್ರಾನ್ ಮುಮ್ತಾಜ್, ಮೊಹಮ್ಮದ್ ವಾಸಿಂ ಜೂ, ಅರ್ಷದ್ ಇಕ್ಬಾಲ್, ಸೂಫಿಯಾನ್ ಮುಖೀಮ್.