ETV Bharat / sports

5000 ರನ್​ + 300 ವಿಕೆಟ್.. ಎಲಿಸ್​ ಪೆರ್ರಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಮೊದಲ ಮಹಿಳೆ.. - ಪೆರ್ರಿ 5000 ರನ್​ + 300 ವಿಕೆಟ್

ಪೆರ್ರಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈ ಮೈಲುಗಲ್ಲು ಸೃಷ್ಟಿಸಿದ ಮೊದಲ ಆಸ್ಟ್ರೇಲಿಯನ್ ಕ್ರಿಕೆಟರ್(ಪುರುಷ ಮತ್ತು ಮಹಿಳೆ) ಎನಿಸಿಕೊಂಡಿದ್ದಾರೆ. ಒಟ್ಟಾರೆ ವಿಶ್ವದ 18ನೇ ಕ್ರಿಕೆಟರ್ ಆಗಿದ್ದಾರೆ..

5000 Runs, 300 Wickets In International Cricket
ಎಲಿಸ್​ ಪೆರ್ರಿ ವಿಶ್ವದಾಖಲೆ
author img

By

Published : Oct 2, 2021, 4:48 PM IST

ಕ್ವೀನ್ಸ್‌ಲ್ಯಾಂಡ್​ : ಆಸ್ಟ್ರೇಲಿಯಾದ ಆಲ್​​ರೌಂಡರ್​ ಎಲಿಸ್​ ಪೆರ್ರಿ ಭಾರತದ ವಿರುದ್ಧ ನಡೆಯುತ್ತಿರುವ ಅಹರ್ನಿಶಿ ಟೆಸ್ಟ್​ ಪಂದ್ಯದಲ್ಲಿ 2 ವಿಕೆಟ್​ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 300 ವಿಕೆಟ್​ ಪೂರ್ಣಗೊಳಿಸಿದ್ದಾರೆ. ಈ ಮೂಲಕ 300 ವಿಕೆಟ್ ಜೊತೆಗೆ 5000 ರನ್​ ಬಾರಿಸಿದ ಏಕೈಕ ಮಹಿಳಾ ಕ್ರಿಕೆಟರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.

ಭಾರತದ ಪೂಜಾ ವಸ್ತ್ರಾಕರ್​ ಅವರ ವಿಕೆಟ್​ ಪಡೆಯುವ ಮೂಲಕ 30 ವರ್ಷದ ಪೆರ್ರಿ ಈ ವಿಶೇಷ ದಾಖಲೆಗೆ ಪಾತ್ರರಾದರು. ಪೆರ್ರಿ ಏಕದಿನ ಕ್ರಿಕೆಟ್​ನಲ್ಲಿ 3135 ರನ್​ ಮತ್ತು 152 ವಿಕೆಟ್, ಟಿ20 ಕ್ರಿಕೆಟ್​ನಲ್ಲಿ 1243 ರನ್​ ಮತ್ತು 115 ವಿಕೆಟ್​ ಪಡೆದಿದ್ದಾರೆ.

ಪೆರ್ರಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈ ಮೈಲುಗಲ್ಲು ಸೃಷ್ಟಿಸಿದ ಮೊದಲ ಆಸ್ಟ್ರೇಲಿಯನ್ ಕ್ರಿಕೆಟರ್(ಪುರುಷ ಮತ್ತು ಮಹಿಳೆ) ಎನಿಸಿಕೊಂಡಿದ್ದಾರೆ. ಒಟ್ಟಾರೆ ವಿಶ್ವದ 18ನೇ ಕ್ರಿಕೆಟರ್ ಆಗಿದ್ದಾರೆ.

ಇಯಾನ್​ ಬಾಥಮ್( ಇಂಗ್ಲೆಂಡ್) ಕಪಿಲ್ ದೇವ್( ಭಾರತ), ಇಮ್ರಾನ್ ಖಾನ್( ಪಾಕಿಸ್ತಾನ್), ವಾಸೀಮ್ ಅಕ್ರಮ್(ಪಾಕಿಸ್ತಾನ) ಕ್ರಿಸ್​ ಕ್ರೇನ್ಸ್(ನ್ಯೂಜಿಲ್ಯಾಂಡ್), ಕಾರ್ಲ್​ ಹೂಪರ್( ವೆಸ್ಟ್ ಇಂಡೀಸ್ ) ಜಾಕ್ ಕಾಲೀಸ್(ದಕ್ಷಿಣ ಆಫ್ರಿಕಾ), ಸನತ್ ಜಯಸೂರ್ಯ(ಶ್ರೀಲಂಕಾ), ಶಾನ್ ಪೊಲಕ್(ದ. ಆಫ್ರಿಕಾ), ಅಬ್ದುಲ್ ರಜಾಕ್(ಪಾಕಿಸ್ತಾನ್), ಆ್ಯಂಡ್ರ್ಯೂ ಫ್ಲಿಂಟಾಫ್(ಇಂಗ್ಲೆಂಡ್), ಶಾಹೀದ್ ಅಫ್ರಿದಿ(ಪಾಕಿಸ್ತಾನ), ಚಮಿಂದಾ ವಾಸ್​(ಶ್ರೀಲಂಕಾ), ಡೇನಿಯಲ್ ವಿಟೋರಿ(ನ್ಯೂಜಿಲ್ಯಾಂಡ್), ಶಕಿಬ್ ಅಲ್ ಹಸನ್(ಬಾಂಗ್ಲಾದೇಶ), ಡ್ವೇನ್ ಬ್ರಾವೋ(ವೆಸ್ಟ್ ಇಂಡೀಸ್), ಮೊಯೀನ್ ಅಲಿ(ಇಂಗ್ಲೆಂಡ್), ಎಲಿಸ್ ಪೆರ್ರಿ(ಆಸ್ಟ್ರೇಲಿಯಾ).

ಇದನ್ನೂ ಓದಿ:ಆಸಿಸ್ ನೆಲದಲ್ಲಿ ಮೊದಲ ಟೆಸ್ಟ್ ಶತಕ ಗಳಿಸಿ ದಾಖಲೆ ಬರೆದ ಸ್ಮೃತಿ ಮಂಧಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.