ETV Bharat / sports

"ಐಪಿಎಲ್​ ಆಡಬೇಡಿ" ಜೋಫ್ರಾ ಆರ್ಚರ್‌ಗೆ ಇಸಿಬಿ ಸೂಚನೆ - Indian Premier League 2024

ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ನಡೆಯಲಿರುವ 17ನೇ ಆವೃತ್ತಿಯ ಐಪಿಎಲ್​ನಲ್ಲಿ ಆಡದಂತೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಜೋಫ್ರಾ ಆರ್ಚರ್‌ಗೆ ಸೂಚನೆ ನೀಡಿದೆ.

Jofra Archer
Jofra Archer
author img

By ETV Bharat Karnataka Team

Published : Dec 4, 2023, 9:08 PM IST

ಲಂಡನ್: ಲೀಗ್​ ಪಂದ್ಯಗಳಲ್ಲಿ ಆಡಿ ಗಾಯಕ್ಕೆ ತುತ್ತಾಗಿ ರಾಷ್ಟ್ರೀಯ ತಂಡದಿಂದ ಒಂದು ವರ್ಷಕ್ಕೂ ಹೆಚ್ಚು ಕಾಲ ಹೊರಗುಳಿದಿದ್ದ ಜೋಫ್ರಾ ಆರ್ಚರ್​ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಬಿಟ್ಟುಬಿಡುವಂತೆ ಹೇಳಿದೆ ಎಂದು ವರದಿಯಾಗಿದೆ. 2024ರ ವಿಶ್ವಕಪ್​ ವೇಳೆಗೆ ಜೋಫ್ರಾ ಆರ್ಚರ್‌ ಇಂಗ್ಲೆಂಡ್​ ತಂಡಕ್ಕೆ ಲಭ್ಯರಾಗಿರಬೇಕು ಎಂಬ ಉದ್ದೇಶಕ್ಕೆ ಇಸಿಬಿ ಈ ಸೂಚನೆ ನೀಡಿದಂತಿದೆ.

ಗಾಯಕ್ಕೆ ತುತ್ತಾಗಿದ್ದ ಆರ್ಚರ್​ ಇತ್ತೀಚೆಗೆ ಚೇತರಿಸಿಕೊಂಡಿದ್ದಾರೆ ಮತ್ತೆ ಲೀಗ್​​ ಪಂದ್ಯಗಳಲ್ಲಿ ಆಡುವುದು ಮತ್ತು ಒತ್ತಡದ ಸಮಯದಲ್ಲಿ ಗಾಯಕ್ಕೆ ತುತ್ತಾದರೆ ರಾಷ್ಟ್ರೀಯ ತಂಡಕ್ಕೆ ಸಮಸ್ಯೆ ಆಗುತ್ತದೆ. ಹಾಗೇ ಐಪಿಎಲ್​ ಮುಗಿದ ಬೆನ್ನಲ್ಲೇ ವಿಶ್ವಕಪ್​ ಇರುವುದರಿಂದ ಚೇತರಿಕೆ ಮತ್ತು ವಿಶ್ರಾಂತಿಗೆ ಅವಕಾಶ ಸಿಗುವುದಿಲ್ಲ ಎಂಬ ಉದ್ದೇಶದಿಂದ ಈ ಸೂಚನೆ ನೀಡಿದೆ.

2022ರ ಐಪಿಎಲ್‌ಗೆ ಮುಂಚಿತವಾಗಿ 8 ಕೋಟಿ ರೂಪಾಯಿಗಳಿಗೆ ಮುಂಬೈ ಇಂಡಿಯನ್ಸ್ ಆರ್ಚರ್ ಅವರನ್ನು ಖರೀದಿಸಿತ್ತು. ಕಳೆದ ವಾರ ಫ್ರಾಂಚೈಸಿ ಆರ್ಚರ್​​ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ ಹರಾಜಿಗೆ ನೋಂದಾಯಿಸಿದ ಆಟಗಾರರ ಪಟ್ಟಿಯಲ್ಲಿ ಅರ್ಚರ್​ ಅವರ ಹೆಸರಿಲ್ಲ. ಹೀಗಾಗಿ ಇಸಿಬಿ ಸೂಚನೆಯ ಮೇರೆಗೆ ಆರ್ಚರ್​ ಹಿಂದೆ ಸರಿದಿದ್ದಾರೆ ಎನಿಸುತ್ತಿದೆ.

ಗಾಯಗಳಿಂದ ಬಳಲುತ್ತಿದ್ದ ಆರ್ಚರ್ ಚೇತರಿಸಿಕೊಂಡು ಮರಳಿದ್ದರು. ಆದರೆ ಮೇ ತಿಂಗಳಲ್ಲಿ ಐಪಿಎಲ್‌ನಲ್ಲಿ ಎಂಐ ಪರ ಆಡುವಾಗ ಮತ್ತೆ ಮೊಣಕೈ ಒತ್ತಡದ ಮುರಿತಕ್ಕೆ ಒಳಗಾದರು. 28 ವರ್ಷದ ಬಾರ್ಬಡೋಸ್ ಮೂಲದ ಕ್ರಿಕೆಟಿಗ ಅಂದಿನಿಂದ ಯಾವುದೇ ವೃತ್ತಿಪರ ಕ್ರಿಕೆಟ್ ಆಡಿಲ್ಲ ಮತ್ತು ಇದರಿಂದ ಏಕದಿನ ವಿಶ್ವಕಪ್ ಆಡುವುದನ್ನು ತಪ್ಪಿಸಿಕೊಂಡರು.

"ಐಪಿಎಲ್​ ಉದ್ದೇಶದಿಂದ ಆರ್ಚರ್​ ಏಪ್ರಿಲ್ ಮತ್ತು ಮೇ ಸಮಯದಲ್ಲಿ ಭಾರತದಲ್ಲಿದ್ದರೆ ಅವರ ಪುನರಾಗಮನವನ್ನು ನಿರ್ವಹಿಸುವುದು ಕಷ್ಟ ಆಗುತ್ತದೆ. ಆದರೆ ಇಂಗ್ಲೆಂಡ್​​ನಲ್ಲಿದ್ದರೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ ಅವರ ಚೇತರಿಕೆ ಮೇಲೆ ಗಮನಹರಿಸಲು ಸಾಧ್ಯವಾಗುತ್ತದೆ" ಎಂದು ಮೂಲಗಳು ಮಾಹಿತಿ ನೀಡಿವೆ.

ವರದಿಯ ಪ್ರಕಾರ ಇಸಿಬಿಯೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಆರ್ಚರ್​ ಸಹಿ ಹಾಕಿದ್ದಾರೆ ಮತ್ತು ಮುಂದಿನ ವರ್ಷ ಜೂನ್ 4ರಿಂದ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಯುವ ವಿಶ್ವಕಪ್‌ಗೆ ಮುಂಚಿತವಾಗಿ ಆರ್ಚರ್ ಮೇಲೆ ಹೆಚ್ಚು ನಿಯಂತ್ರಣವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.

ಏಕದಿನ ವಿಶ್ವಕಪ್​ ತಂಡದ ಬ್ಯಾಕ್​ ಅಪ್​ ಆಟಗಾರನಾಗಿ ಆರ್ಚರ್​ ಅವರನ್ನು ಇಸಿಬಿ ಪ್ರಕಟಿಸಿತ್ತು. ಭಾರತಕ್ಕೆ ತಂಡದ ಜೊತೆಗೆ ಪ್ರಯಾಣವನ್ನು ಮಾಡಿದ್ದರು. ಆದರೆ ಮೊಣಕೈ ನೋವಿನಿಂದ ಚೇತರಿಸಿಕೊಳ್ಳದ ಅವರು ತವರಿಗೆ ಮರಳಿದ್ದರು. ಟಿ20 ವಿಶ್ವಕಪ್ ಸಮಯಕ್ಕೆ ಇಂಗ್ಲೆಂಡ್​ನ ಪ್ರಮುಖ ವೇಗಿಯಾಗಿ ಆರ್ಚರ್​ ಅವರನ್ನು ಇಸಿಬಿ ನೋಡುತ್ತಿದೆ.

ಹ್ಯಾರಿ ಬ್ರೂಕ್, ಆದಿಲ್ ರಶೀದ್ ಮತ್ತು ಕ್ರಿಸ್ ವೋಕ್ಸ್ ಸೇರಿದಂತೆ 34 ಇಂಗ್ಲೆಂಡ್ ಆಟಗಾರರು ಐಪಿಎಲ್ ಹರಾಜಿಗೆ ನೋಂದಾಯಿಸಿಕೊಂಡಿದ್ದಾರೆ. ಮೊಯಿನ್ ಅಲಿ, ಜೋಸ್ ಬಟ್ಲರ್, ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಜೇಸನ್ ರಾಯ್, ಮಾರ್ಕ್ ವುಡ್, ವಿಲ್ ಜ್ಯಾಕ್ಸ್ ಮತ್ತು ರೀಸ್ ಟೋಪ್ಲೆ ಅವರನ್ನು ಫ್ರಾಂಚೈಸಿಗಳು ತಮ್ಮಲ್ಲೇ ಉಳಿಸಿಕೊಂಡಿದೆ. ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ ಐಪಿಎಲ್​ನಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಗೆಲುವಿನಲ್ಲೂ ಲೋಪಗಳಿರುತ್ತವೆ, ಅವುಗಳನ್ನು ಅರಿತರೆ ಯಶಸ್ಸಿಗೆ ದಾರಿ ಆಗುತ್ತದೆ: ಸೂರ್ಯಕುಮಾರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.