ಲಂಡನ್: ಆಸ್ಟ್ರೇಲಿಯಾದಲ್ಲಿ ಕೋವಿಡ್ 19 ಪ್ರಕರಣಗಳು ದಿನದಿಂದ ಹೆಚ್ಚಾಗುತ್ತಿರುವುದರಿಂದ ಬಿಗ್ಬ್ಯಾಶ್ ಟಿ20 ಲೀಗ್ನಲ್ಲಿ ಭಾಗವಹಿಸಿರುವ ತನ್ನ ವೈಟ್ ಬಾಲ್ ತಂಡದ ಆಟಗಾರರಿಗೆ ತಕ್ಷಣವೇ ಇಂಗ್ಲೆಂಡ್ಗೆ ಆಗಮಿಸುವಂತೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸೂಚಿಸಿದೆ ಎಂದು ತಿಳಿದುಬಂದಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್ಗಳ ಸರಣಿ ಹತ್ತಿರ ಬರುತ್ತಿರುವುದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಆದಷ್ಟು ಬೇಗ ಲಂಡನ್ಗೆ ಬಂದು ಕ್ವಾರಂಟೈನ್ ಆಗಬೇಕೆಂದು ಬೋರ್ಡ್ ಸೂಚಿಸಿದೆ ಎಂದು ಇಂಗ್ಲಿಷ್ ಕ್ರಿಕೆಟಿಗನೊಬ್ಬ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಆ್ಯಶಸ್ ಸರಣಿಯಲ್ಲಿ ಪಾಲ್ಗೊಂಡಿರುವ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಂಡ ಬೆನ್ನಲ್ಲೇ ಇಸಿಬಿ ಈ ನಿರ್ಧಾರ ತೆಗೆದುಕೊಂಡಿದೆ. ಮೊದಲು ಬೆಂಬಲ ಸಿಬ್ಬಂದಿಯ ಕುಟುಂಬಸ್ಥರೊಬ್ಬರಿಗೆ ಕೋವಿಡ್ 19 ಸೋಂಕು ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಮುಖ್ಯ ಕೋಚ್ ಕ್ರಿಸ್ ಸಿಲ್ವರ್ವುಡ್ಗೂ ಕೂಡ ಪಾಸಿಟಿವ್ ದೃಢಪಟ್ಟಿತ್ತು.
ಜನವರಿ 22ರಿಂದ ಬಾರ್ಬಡೋಸ್ನಲ್ಲಿ 5 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಹಾಗಾಗಿ ವೈಟ್ ಬಾಲ್ ಸರಣಿಯಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ಜನವರಿ 7ರೊಳಗೆ ಇಂಗ್ಲೆಂಡ್ಗೆ ಮರಳಬೇಕೆಂದು ಇಸಿಬಿ ಸೂಚನೆ ನೀಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಸಕಿದ್ ಮಹ್ಮೂದ್, ಜಾರ್ಜ್ ಗಾರ್ಟನ್, ರೀಸ್ ಟಾಪ್ಲೆ, ಸ್ಯಾಮ್ ಬಿಲ್ಲಿಂಗ್ಸ್, ಜೇಮ್ಸ್ ವಿನ್ಸ್ ಮತ್ತು ತೈಮಲ್ ಮಿಲ್ಸ್, ಪ್ರಸ್ತುತ ಬಿಗ್ಬ್ಯಾಶ್ನಲ್ಲಿ ಆಡುತ್ತಿದ್ದಾರೆ.
ಇದನ್ನೂ ಓದಿ:ಫುಟ್ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿಗೆ ಕೋವಿಡ್-19 ಪಾಸಿಟಿವ್