ETV Bharat / sports

T20 Cricket: ಪೊಲಾರ್ಡ್​ ಹಿಂದಿಕ್ಕಿ ನೂತನ ಮೈಲಿಗಲ್ಲು ತಲುಪಿದ ಡ್ವೇನ್​ ಬ್ರಾವೋ - ಐಪಿಎಲ್ 2021

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಫೈನಲ್​ನಲ್ಲಿ 27 ರನ್​ಗಳಿಂದ ಗೆದ್ದ ಸಿಎಸ್​ಕೆ 14ನೇ ಆವೃತ್ತಿಯ ಐಪಿಎಲ್​ ಟ್ರೋಫಿ ಗೆದ್ದಿದೆ. ಈ ಜಯದ ಮೂಲಕ ವೆಸ್ಟ್​​ ಇಂಡೀಸ್​ನ ಆಲ್​ರೌಂಡರ್​ ಡ್ವೇನ್​ ಬ್ರಾವೋ ನೂತನ ದಾಖಲೆ ಬರೆದಿದ್ದಾರೆ.

Dwayne Bravo touched a new milestone in his illustrious T20 career
T20 Cricket: ಪೊಲಾರ್ಡ್​ ಹಿಂದಿಕ್ಕಿ ನೂತನ ಮೈಲಿಗಲ್ಲು ತಲುಪಿದ ಡ್ವೇನ್​ ಬ್ರಾವೋ
author img

By

Published : Oct 17, 2021, 5:23 AM IST

ದುಬೈ: ಚೆನ್ನೈ ಸೂಪರ್ ಕಿಂಗ್ಸ್ 'ಚಾಂಪಿಯನ್' ಆಲ್ ರೌಂಡರ್ ಡ್ವೇನ್ ಬ್ರಾವೋ ತಮ್ಮ ಟಿ-20 ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ. ದುಬೈನಲ್ಲಿ ಸಿಎಸ್‌ಕೆ 2021ರ ಐಪಿಎಲ್ ಚಾಂಪಿಯನ್​ ಆಗುತ್ತಿದ್ದಂತೆ ಬ್ರಾವೋ ಹೊಸ ದಾಖಲೆಗೆ ಪಾತ್ರರಾಗಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಫೈನಲ್​ನಲ್ಲಿ 27 ರನ್​ಗಳಿಂದ ಗೆದ್ದ ಸಿಎಸ್​ಕೆ 14ನೇ ಆವೃತ್ತಿಯ ಐಪಿಎಲ್​ ಟ್ರೋಫಿ ಗೆದ್ದಿದೆ. ಈ ಜಯದ ಮೂಲಕ ಬ್ರಾವೋ 16ನೇ ಟಿ-20 ಲೀಗ್​ ಪ್ರಶಸ್ತಿ ಎತ್ತಿ ಹಿಡಿದಂತಾಗಿದೆ. ಅಲ್ಲದೆ ವೆಸ್ಟ್ ಇಂಡೀಸ್ ತಂಡದ ಸಹ ಆಟಗಾರ, ನಾಯಕ ಕೀರನ್ ಪೊಲಾರ್ಡ್​​ ಅವರನ್ನು ಡಿಜೆ ಹಿಂದಿಕ್ಕಿದರು.

ಇದಕ್ಕೂ ಮುನ್ನ ಬ್ರಾವೋ ಹಾಗೂ ಪೊಲಾರ್ಡ್​ ತಲಾ 15 ಟಿ-20 ಲೀಗ್​ ಟ್ರೋಫಿ ಗೆದ್ದಿರು ದಾಖಲೆ ಹಂಚಿಕೊಂಡಿದ್ದರು. ಐಪಿಎಲ್​ಗೂ ಮುನ್ನ ಬ್ರಾವೋ ನೇತೃತ್ವದ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ತಂಡವು ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು.

ಇದನ್ನೂ ಓದಿ: T20 World Cup: ಇಂದಿನಿಂದ ಚುಟುಕು ಕ್ರಿಕೆಟ್​ ಟೂರ್ನಿ ಆರಂಭ, ಇಲ್ಲಿದೆ ಸಂಪೂರ್ಣ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.