ನವದೆಹಲಿ: ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ 18 ತಿಂಗಳ ಸುದೀರ್ಘ ಬಿಡುವಿನ ನಂತರ ಭಾರತ ಟೆಸ್ಟ್ ತಂಡದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಜೂನ್ 7 ರಿಂದ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಅವರು ಮತ್ತೆ ಸ್ಥಾನ ಪಡೆಯುವಲ್ಲಿ ಯಶ್ವಸ್ವಿಯಾಗಿದ್ದಾರೆ. ಆದರೆ ಅವರಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಆಗುವುದಂತೂ ಖಂಡಿತ. ಇದಕ್ಕೆ ಕಾರಣಗಳು ಇಲ್ಲಿವೆ..
ರಹಾನೆ ಇಷ್ಟು ದಿನಗಳ ಅಂತರದಲ್ಲಿ ಟೆಸ್ಟ್ಗೆ ಬಂದಿದ್ದಾರೆ. ಆದರೆ ಇಲ್ಲಿ ಕೇವಲ ಅವರು ಎರಡು ಬ್ಯಾಟಿಂಗ್ ಅವಕಾಶವನ್ನು ಪಡೆಯಲಿದ್ದಾರೆ. ಒಂದು ಪಂದ್ಯದಲ್ಲಿ ಕೇವಲ ಅವರು ಎರಡು ಇನ್ನಿಂಗ್ಸ್ನಲ್ಲಿ ತಮ್ಮ ಬ್ಯಾಟಿಂಗ್ ಫಾರ್ಮ್ನ್ನು ಮತ್ತೆ ಸಾಭೀತು ಮಾಡುವ ಅಗತ್ಯವಿದೆ. ಅತ್ಯಂತ ಅಗತ್ಯದ ಪಂದ್ಯದಲ್ಲಿ ಅವರು ಕಣಕ್ಕಿಳಿದಿದ್ದು, ಅವರು ಗಳಿಸುವ ಪ್ರತೀ ಸ್ಕೋರ್ಗಳೂ ಅತ್ಯಂತ ಮುಖ್ಯ ಅಗಲಿದೆ. ಅಲ್ಲದೇ ಎರಡು ತಿಂಗಳ ಟಿ20 ಮಾಡದರಿಗೆ ಒಗ್ಗಿಕೊಂಡಿರುವ ಅವರು ಈಗ ದೀರ್ಫ ಮಾದರಿಯ ಕ್ರಿಕೆಟ್ಗೆ ತಮ್ಮನ್ನು ಬದಲಾಯಿಸಿಕೊಳ್ಳುವ ಅಗತ್ಯ ಇದೆ.
ಟೆಸ್ಟ್ ಚಾಂಪಿಯನ್ಶಿಪ್ಗೆ ರಹಾನೆಗೆ ಸ್ಥಾನ ಸಿಗಲು ಪ್ರಮುಖವಾಗಿ ಐಪಿಎಲ್ನ ಪಂದ್ಯ ಕಾರಣ. ಮುಂಬೈ ವಿರುದ್ಧದ ಪಂದ್ಯದಲ್ಲಿ ಅವರು 27 ಬಾಲ್ನಲ್ಲಿ 61 ರನ್ಗಳಿಸಿ ಪ.ದ್ಯದ ಗೆಲುವಿಗೆ ಅಗತ್ಯ ರನ್ ಸೇರಿಸಿದ್ದರು. ಅದರ ಜೊತೆಗೆ ಈ ವರ್ಷ ಅವರು ದೇಶೀಯ ಕ್ರಿಕೆಟ್ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದು ಆಯ್ಕೆಗಾರರ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿತ್ತು.
-
Rapid-Fire ft. Ajinkya Rahane ⚡️@ajinkyarahane88 has some tough choices to make 😃
— BCCI (@BCCI) June 3, 2023 " class="align-text-top noRightClick twitterSection" data="
Stay tuned for the Full Interview ⏳
Coming 🔜 on https://t.co/Z3MPyeKtDz#TeamIndia | #WTC23 pic.twitter.com/OTyPFQ1Hmz
">Rapid-Fire ft. Ajinkya Rahane ⚡️@ajinkyarahane88 has some tough choices to make 😃
— BCCI (@BCCI) June 3, 2023
Stay tuned for the Full Interview ⏳
Coming 🔜 on https://t.co/Z3MPyeKtDz#TeamIndia | #WTC23 pic.twitter.com/OTyPFQ1HmzRapid-Fire ft. Ajinkya Rahane ⚡️@ajinkyarahane88 has some tough choices to make 😃
— BCCI (@BCCI) June 3, 2023
Stay tuned for the Full Interview ⏳
Coming 🔜 on https://t.co/Z3MPyeKtDz#TeamIndia | #WTC23 pic.twitter.com/OTyPFQ1Hmz
ಭಾರತದ ಆಡುವ ಹನ್ನೊಂದರಲ್ಲಿ ರಹಾನೆ ಸ್ಥಾನ ಬಹುತೇಕ ಖಚಿತವಾಗಿದೆ. 2022 ರ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯನ್ನು ಕಳೆದುಕೊಂಡ ನಂತರ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರನ್ನು ಕೈಬಿಡಲಾಯಿತು. ಕೌಂಟಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಪೂಜಾರ ಈಗಾಗಲೇ ರಾಷ್ಟ್ರೀಯ ತಂಡಕ್ಕೆ ಮರಳಿದ್ದರು.
ಇದುವರೆಗೆ 82 ಟೆಸ್ಟ್ ಪಂದ್ಯಗಳನ್ನು ಆಡಿರುವ ರಹಾನೆ ರಾಷ್ಟ್ರೀಯ ತಂಡಕ್ಕೆ ಮರಳಲು ಬಹಳ ಸಮಯ ಕಾಯಬೇಕಾಯಿತು. ರಣಜಿ ಟ್ರೋಫಿ ಮತ್ತು ಇತ್ತೀಚೆಗೆ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಅವರು ರಾಷ್ಟ್ರೀಯ ತಂಡಕ್ಕೆ ಮರಳಿದರು. ಆದರೆ ಶ್ರೇಯಸ್ ಅಯ್ಯರ್ ಗಾಯಗೊಳ್ಳದಿದ್ದರೆ ರಹಾನೆಗೆ ಪುನರಾಗಮನ ಕಷ್ಟವಾಗುತ್ತಿತ್ತು. ಅಯ್ಯರ್ ಮಧ್ಯಮ ಕ್ರಮಾಂಕದಲ್ಲಿ ತನ್ನನ್ನು ತಾನು ಸಾಬೀತುಪಡಿಸಿದ್ದಾರೆ. ಹೀಗಾಗಿ ರೆಹಾನೆ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಮಾಡು ಇಲ್ಲವೇ ಮಡಿ ಎಂಬಂತೆ ಆಡುವ ಅಗತ್ಯವಿದೆ. ಇಲ್ಲಿನ ಅವರ ಪ್ರದರ್ಶನ ಮುಂದಿನ ಆಯ್ಕೆಗೆ ದಾರಿ ಮಾಡಿಕೊಡಲಿದೆ.
-
Emotions on #TeamIndia comeback ☺️
— BCCI (@BCCI) June 3, 2023 " class="align-text-top noRightClick twitterSection" data="
Preps for the #WTC23 🙌
Support from family & friends 👍
In conversation with comeback man @ajinkyarahane88 👌👌 - By @RajalArora
Full Interview 🎥🔽
https://t.co/hUBvZ5rvYD pic.twitter.com/vJINbplobY
">Emotions on #TeamIndia comeback ☺️
— BCCI (@BCCI) June 3, 2023
Preps for the #WTC23 🙌
Support from family & friends 👍
In conversation with comeback man @ajinkyarahane88 👌👌 - By @RajalArora
Full Interview 🎥🔽
https://t.co/hUBvZ5rvYD pic.twitter.com/vJINbplobYEmotions on #TeamIndia comeback ☺️
— BCCI (@BCCI) June 3, 2023
Preps for the #WTC23 🙌
Support from family & friends 👍
In conversation with comeback man @ajinkyarahane88 👌👌 - By @RajalArora
Full Interview 🎥🔽
https://t.co/hUBvZ5rvYD pic.twitter.com/vJINbplobY
ರಹಾನೆ ನಾಯಕತ್ವದಲ್ಲಿ ಭಾರತವು 2021 ರಲ್ಲಿ ಆಸ್ಟ್ರೇಲಿಯಾವನ್ನು ತನ್ನ ನೆಲದಲ್ಲಿ ಸೋಲಿಸಿತು. ನಂತರ ಅವರು ತಮ್ಮ ಆಟ ಮತ್ತು ನಾಯಕತ್ವದ ಕೌಶಲ್ಯದಿಂದ ಸಾಕಷ್ಟು ಪ್ರಭಾವಿತರಾಗಿದ್ದರು. ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧ ರಹಾನೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರ ಪ್ರದರ್ಶನದಲ್ಲಿ ಸ್ಥಿರತೆಯ ಕೊರತೆ ಕಂಡುಬಂದಿದೆ. ಅವರ ಟೆಸ್ಟ್ ಸರಾಸರಿ 38.52 ಆಗಿದೆ. ಡಬ್ಲ್ಯುಟಿಸಿ ಫೈನಲ್‌ನಲ್ಲಿ ರಹಾನೆ ನಾಯಕತ್ವದ ಒತ್ತಡವನ್ನು ಹೊಂದಿರುವುದಿಲ್ಲ ಮತ್ತು ಅಂತಹ ಪರಿಸ್ಥಿತಿಯಲ್ಲಿ, ಅವರ ಗಮನವು ಕೇವಲ ಬ್ಯಾಟಿಂಗ್‌ನತ್ತ ಮಾತ್ರ ಇರುತ್ತದೆ. ಟೀಕಾಕಾರರಿಗೆ ತಮ್ಮ ಬ್ಯಾಟ್‌ನಿಂದ ತಕ್ಕ ಉತ್ತರ ನೀಡಲು ರಹಾನೆ ಬಯಸುತ್ತಾರೆ.
ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಆಸಿಸ್ ತಂಡದಿಂದ ಜೋಶ್ ಹ್ಯಾಜಲ್‌ವುಡ್ ಹೊರಕ್ಕೆ