ಕೋಲ್ಕತ್ತಾ: ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಶನಿವಾರ 28ನೇ ವಸಂತಕ್ಕೆ ಕಾಲಿಟ್ಟಿದ್ದು, ಕೆಕೆಆರ್ ಸಹ ಆಟಗಾರ ದಿನೇಶ್ ಕಾರ್ತಿಕ್ ನೀವು ಆದಷ್ಟು ಬೇಗ ಆಸ್ಟ್ರೇಲಿಯಾ ತಂಡದ ನಾಯಕನಾಗಬೇಕೆಂದು ಬಯಸುತ್ತೇನೆ ಎಂದು ವಿಶೇಷವಾಗಿ ಶುಭಕೋರಿದ್ದಾರೆ.
ಆಸ್ಟ್ರೇಲಿಯಾದ ಉಪನಾಯಕನಾಗಿರುವ ಪ್ಯಾಟ್ ಕಮ್ಮಿನ್ಸ್ಗೆ ರಸೆಲ್, ಮಾರ್ಗನ್ ಸೇರಿದಂತೆ ಕೆಕೆಆರ್ ತಂಡದ ಎಲ್ಲ ಆಟಗಾರರು ಶುಭ ಕೋರಿರುವ ವಿಡಿಯೋವನ್ನು ಫ್ರಾಂಚೈಸಿ ತನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
-
Wishes from our Knights pouring in for Patto! 🤩
— KolkataKnightRiders (@KKRiders) May 8, 2021 " class="align-text-top noRightClick twitterSection" data="
Wishing you lots of success, and good health on your big day 🎥@patcummins30 #KKR pic.twitter.com/5iHkIrkBhX
">Wishes from our Knights pouring in for Patto! 🤩
— KolkataKnightRiders (@KKRiders) May 8, 2021
Wishing you lots of success, and good health on your big day 🎥@patcummins30 #KKR pic.twitter.com/5iHkIrkBhXWishes from our Knights pouring in for Patto! 🤩
— KolkataKnightRiders (@KKRiders) May 8, 2021
Wishing you lots of success, and good health on your big day 🎥@patcummins30 #KKR pic.twitter.com/5iHkIrkBhX
ಇದೊಂದು ವಿಶೇಷ ದಿನ ಎಂದು ನಿಮಗೆ ಗೊತ್ತಿದೆ , ನಿಮಗೆ ಶುಭ ಕೋರಲು ಬಯಸುತ್ತೇನೆ , ಹ್ಯಾಪಿ ಬರ್ತಡೇ ವಿಶ್ವದ ನಂಬರ್ ಒನ್ ಟೆಸ್ಟ್ ಬೌಲರ್ ಎಂದು ರಸೆಲ್ ವಿಡಿಯೋದಲ್ಲಿ ಹೇಳಿದ್ದಾರೆ.
ಕಾರ್ತಿಕ್ ವಿಶೇಷವಾಗಿ ಶುಭಕೋರಿದ್ದು, ಕೆಕೆಆರ್ ನಿಮ್ಮ ಪಡೆಯಲು ಅದೃಷ್ಟ ಮಾಡಿದೆ ಎಂದು ನಾನು ಭಾವಿಸುತ್ತೇನೆ. ವಿಶ್ವದಲ್ಲಿರುವ ಅತ್ಯುತ್ತಮ(ಬೌಲರ್) ಆಟಗಾರರಲ್ಲಿ ನೀವು ಒಬ್ಬರು. ನೀವು ಆದಷ್ಟು ಬೇಗ ಆಸ್ಟ್ರೇಲಿಯಾದ ನಾಯಕನಾಗಲಿ ಎಂದು ಪ್ರಾಮಾಣಿಕವಾಗಿ ಬಯಸುತ್ತೇನೆ. ನಿಮಗೆ ಆ ಕೌಶಲ್ಯವಿದೆ. ಶುಭವಾಗಲಿ , ಹುಟ್ಟುಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಕಮ್ಮಿನ್ಸ್ ನಂಬರ್ 1 ಬೌಲರ್ ಆಗಿದ್ದಾರೆ. 2017ರಿಂದ ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 243 ವಿಕೆಟ್ ಪಡೆದಿದ್ದಾರೆ. ಇವರನ್ನು ಹೊರತುಪಡಿಸಿದರೆ 2ನೇ ಸ್ಥಾನದಲ್ಲಿರುವ ಕಗಿಸೋ ರಬಾಡ 239 ವಿಕೆಟ್ ಪಡೆದಿದ್ದಾರೆ.
ಇದನ್ನು ಓದಿ: ಆಕ್ಸಿಜನ್ ಸಿಲಿಂಡರ್ ,ಕೋವಿಡ್ ರಿಲೀಫ್ ಕಿಟ್ ಖರೀದಿಗಾಗಿ ದೇಣಿಗೆ ನೀಡಿದ ರಿಷಭ್ ಪಂತ್