ETV Bharat / sports

ಕ್ಯಾಚ್​ ಕೈಚೆಲ್ಲಿ ಪಂದ್ಯ ಕಳೆದುಕೊಂಡ ಭಾರತ: ಫೀಲ್ಡಿಂಗ್​ ವೈಫಲ್ಯ ಎಂದ ಕಾರ್ತಿ

ಗೆಲ್ಲುವ ಸನಿಹದಲ್ಲಿ ಮಾಡಿದ ಎರಡು ತಪ್ಪುಗಳು ನಿನ್ನೆಯ ಪಂದ್ಯದ ಸೋಲಿಗೆ ಕಾರಣವಾಯಿತು. ರಾಹುಲ್​ ಹಾಗೂ ಸುಂದರ್​ ಬಿಟ್ಟ ಎರಡು ಸುಲಭ ಕ್ಯಾಚ್​ಗಳಿಂದ ಗೆಲುವು ಕೈತಪ್ಪಿತು.

dinesh karthik slams india team fielding
ಕ್ಯಾಚ್​ ಕೈಚೆಲ್ಲಿ ಪಂದ್ಯ ಕಳೆದುಕೊಂಡ ಭಾರತ
author img

By

Published : Dec 5, 2022, 9:04 AM IST

Updated : Dec 5, 2022, 9:19 AM IST

ಹೈದರಾಬಾದ್​: ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಫೀಲ್ಡಿಂಗ್​ ವೈಫಲ್ಯದಿಂದ ಮ್ಯಾಚ್ ಕೈಚೆಲ್ಲಿತು. ಶಕೀಬ್​ ದಾಳಿಗೆ ಮಂಕಾದ ಭಾರತದ ಬ್ಯಾಟರ್​ಗಳು 186ಕ್ಕೆ ಎಲ್ಲಾ ವಿಕೆಟ್​ಗಳನ್ನು ಬಿಟ್ಟುಕೊಟ್ಟರು. ಆದರೆ ರನ್​ ಚೇಸಿಂಗ್​ ಆರಂಭಿಸಿದ ಬಾಂಗ್ಲಾ ಪಡೆಯು ಬೇಗ ವಿಕೆಟ್​ ಒಪ್ಪಿಸಿತು. 10 ನೇ ವಿಕೆಟ್​ನ 50 ರನ್​ನ ಜೊತೆಯಾಟ ಭಾರತಕ್ಕೆ ಗೆಲುವಿಗೆ ಮುಳುವಾಯಿತು. ಕಡಿಮೆ ಮೊತ್ತದ ಪಂದ್ಯದ ಕಳಪೆ ಕ್ಷೇತ್ರ ರಕ್ಷಣೆಯಿಂದ ಭಾರತ ತಂಡ ಟೀಕೆಗೆ ಗುರಿಯಾಗುತ್ತಿದೆ.

ಮೆಹಿದಿ ಹಸನ್ ಮಿರಾಜ್​ಗೆ 43 ನೇ ಓವರ್​ನಲ್ಲಿ ಸಿಕ್ಕ ಎರಡು ಜೀವದಾನಗಳು ಸಹ ಭಾರತದ ಸೋಲುಗೆ ಕಾರಣವಾಯಿತು. ಶಾರ್ದೂಲ್ ಠಾಕೂರ್ ಎಸೆದ 43.4ನೇ ಬಾಲ್​ ಮೆಹಿದಿ ಬ್ಯಾಟ್​ಗೆ ಟಾಪ್​ ಎಡ್ಜ್​ ಆಗಿ ಕೀಪರ್​ಗೆ ಸುಲಭ ಕ್ಯಾಚ್​ ಆಗುವ ರೀತಿ ಇತ್ತು. ಕೆ ಎಲ್​ ರಾಹುಲ್​ ಸುಲಭ ಕ್ಯಾಚನ್ನು ಕೈಚೆಲ್ಲಿದರು. ಇದು ಭಾರಿ ಟೀಕೆಗೆ ಗುರಿಯಾಗಿದೆ. ಏಕದಿನ ಪಂದ್ಯಗಳಿಂದ ಪಂತ್​ರನ್ನು ಕೈ ಬಿಡಲಾಗಿದ್ದು, ಟೆಸ್ಟ್​ ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ರಾಹುಲ್​ಗೆ ಕೀಪಿಂಗ್​ ಜವಾಬ್ದಾರಿ ನೀಡಲಾಗಿತ್ತು.

ವಾಷಿಂಗ್ಟನ್ ಸುಂದರ್​ ಕೈಗೆ ಬರುತ್ತಿದ್ದ ಸರಳ ಕ್ಯಾಚನ್ನು ಹಿಡಿಯುವ ಪ್ರಯತ್ನವೇ ಮಾಡದೇ ಕ್ಯಾಪ್ಟನ್​ ಕೆಂಗಣ್ಣಿಗೆ ಗುರಿಯಾದರು. ಥರ್ಡ್ ಮ್ಯಾನ್ ಜಾಗದಲ್ಲಿ ವಾಷಿಂಗ್ಟನ್ ಸುಂದರನ್ನು ನಿಲ್ಲಿಸಲಾಗಿತ್ತು. ಸ್ಲೈಸ್ ಮಾಡಿದ ಶಾಟ್​ ಥರ್ಡ್ ಮ್ಯಾನ್​ಗೆ ಸುಲಭ ಕ್ಯಾಚ್​ ಆಗಿತ್ತು. ಆದರೆ ಸುಂದರ್​ ಕ್ಯಾಚ್​ ಪ್ರಯತ್ನವನ್ನೂ ಮಾಡದೇ ಇದ್ದುದ್ದಕ್ಕೆ ಕ್ರಿಕೆಟ್​ ಅಭಿಮಾನಿಗಳು ಟೀಕಿಸುತ್ತಿದ್ದಾರೆ.

50-50 ಫೀಲ್ಡಿಂಗ್​: ಈ ಬಗ್ಗೆ ಟೀಮ್​ ಇಂಡಿಯಾದ ಫಿನಿಶರ್​ ಎಂದು ಕರೆಸಿಕೊಳ್ಳುತ್ತಿರುವ ಕೀಪರ್​ ಕಮ್​ ಬ್ಯಾಟರ್​ ದಿನೇಶ್​ ಕಾರ್ತಿಕ್​ ಕೂಡಾ ಮಾತನಾಡಿದ್ದು, ರಾಹುಲ್​ ಮತ್ತು ಸುಂದರ್​ ಕ್ಯಾಚ್​ ಕೈಚೆಲ್ಲದಿದ್ದರೆ ಪಂದ್ಯದ ಗೆಲುವು ಸಾಧ್ಯವಾಗುತ್ತಿತ್ತು. ರಾಹುಲ್​ ಮತ್ತು ಸುಂದರ್​ಗೆ ಲೈಟ್​ನಿಂದ ಸಮಸ್ಯೆ ಆಗಿದೆ ಎಂದು ನನಗೆ ಅನಿಸುತ್ತಿಲ್ಲ. ಅವರು ನೂರು ಪ್ರತಿಶತ ಪ್ರಯತ್ನ ಪಟ್ಟಿಲ್ಲ. ಪಂದ್ಯ ಉತ್ತಮವಾಗಿತ್ತು. ಆದರೆ ಕ್ಷೇತ್ರ ರಕ್ಷಣೆ 50-50 ಇತ್ತು. ಗೆಲ್ಲುವ ಸಾಧ್ಯತೆ ಇದ್ದಾಗ ಕೆಲವು ಸರಳ ಬೌಂಡರಿಗಳನ್ನು ಬಿಟ್ಟುಕೊಟ್ಟಿದ್ದು ಸೋಲಿಗೆ ಕಾರಣವಾಯಿತು ಎಂದಿದ್ದಾರೆ.

ಇದನ್ನೂ ಓದಿ: ಕಳಪೆ ಪ್ರದರ್ಶನ​: ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ ಹೀನಾಯ ಸೋಲು

Last Updated : Dec 5, 2022, 9:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.