ದುಬೈ(ಯುಎಇ): ಏಷ್ಯಾ ಕಪ್ ಟೂರ್ನಮೆಂಟ್ನಲ್ಲಿ ಭಾನುವಾರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಿದ್ದವು. ರೋಚಕ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ 5 ವಿಕೆಟ್ಗಳ ಅಂತರದ ಗೆಲುವು ದಾಖಲಿಸಿದೆ. ಆಲ್ರೌಂಡ್ ಆಟದ ಮೂಲಕ ತಂಡದ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು.
ಮೊದಲು ಬೌಲಿಂಗ್ನಲ್ಲಿ ಮಿಂಚು ಹರಿಸಿ ಪ್ರಮುಖ 3 ವಿಕೆಟ್ ಪಡೆದುಕೊಂಡಿದ್ದ ಈ ಪ್ಲೇಯರ್ ತದನಂತರ ಬ್ಯಾಟಿಂಗ್ನಲ್ಲಿಯೂ ಅಬ್ಬರಿಸಿದರು. ತಾವು ಎದುರಿಸಿದ 17 ಎಸೆತಗಳಲ್ಲಿ ಅಜೇಯ 33 ರನ್ಗಳಿಕೆ ಮಾಡಿ ತಂಡಕ್ಕೆ ಜಯದ ಕಾಣಿಕೆ ನೀಡಿದರು. ಆಲ್ರೌಂಡ್ ಆಟದ ಮೂಲಕ ಪಂದ್ಯ ಗೆಲ್ಲಿಸಿಕೊಟ್ಟ ಹಾರ್ದಿಕ್ ಪಾಂಡ್ಯ ಅವರಿಗೆ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಮೈದಾನದಲ್ಲಿ ವಿಭಿನ್ನವಾಗಿ ಗೌರವ ಅರ್ಪಿಸಿದ್ದಾರೆ.
-
#INDvsPAK pic.twitter.com/8RPPBRwr85
— Sanju Here 🤞👻 (@me_sanjureddy) August 28, 2022 " class="align-text-top noRightClick twitterSection" data="
">#INDvsPAK pic.twitter.com/8RPPBRwr85
— Sanju Here 🤞👻 (@me_sanjureddy) August 28, 2022#INDvsPAK pic.twitter.com/8RPPBRwr85
— Sanju Here 🤞👻 (@me_sanjureddy) August 28, 2022
ದಿನೇಶ್ ಕಾರ್ತಿಕ್ ನಡೆಗೆ ಕ್ರಿಕೆಟ್ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಆ ವಿಡಿಯೋ ತುಣುಕು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದರ ಜೊತೆಗೆ ದಿನೇಶ್ ಕಾರ್ತಿಕ್ ಹ್ಯಾಷ್ಟ್ಯಾಗ್ ಟ್ರೆಂಡ್ ಸಹ ಆಗಿದೆ.
ಟೀಂ ಇಂಡಿಯಾ ಗೆಲ್ಲಲು ಕೊನೆಯ ಮೂರು ಎಸೆತಗಳಲ್ಲಿ 6 ರನ್ಗಳ ಅವಶ್ಯಕತೆ ಇತ್ತು. ಸ್ಟ್ರೈಕ್ನಲ್ಲಿದ್ದ ಪಾಂಡ್ಯಾ ಚೆಂಡನ್ನು ಅದ್ಭುತವಾಗಿ ಸಿಕ್ಸರ್ನತ್ತ ಬಾರಿಸಿ, ಗೆಲುವು ತಂದುಕೊಟ್ಟರು. ನಾನ್ಸ್ಟ್ರೈಕ್ನಲ್ಲಿದ್ದ ದಿನೇಶ್ ಕಾರ್ತಿಕ್ ಹಾರ್ದಿಕ್ ಬಳಿಗೆ ತೆರಳಿ ಶಿರಬಾಗಿ ನಮಿಸಿದರು.
ಇದನ್ನೂ ಓದಿ: ಭಾರತ-ಪಾಕ್ ರೋಚಕ ಪಂದ್ಯದ ವೇಳೆ ಮಹಮ್ಮದ್ ರಿಜ್ವಾನ್ ತಬ್ಬಿ ಕ್ರೀಡಾಸ್ಫೂರ್ತಿ ಮೆರೆದ ಹಾರ್ದಿಕ್
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ತಮ್ಮ ಟ್ವಿಟರ್ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದ್ದು, ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ಅದ್ಭುತ ಆಟವಾಡಿರುವ ನಿಮಗೆ ಅಭಿನಂದನೆಗಳು. ನಿಮ್ಮ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ. ಅದ್ಭುತವಾಗಿ ಆಟವಾಡಿದ್ದೀರಿ ಎಂದು ಕೊಂಡಾಡಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಪಾಕ್ 19.5 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 147 ರನ್ಗಳಿಕೆ ಮಾಡಿತ್ತು. ಇದನ್ನು ಬೆನ್ನತ್ತಿದ್ದ ಟೀಂ ಇಂಡಿಯಾ 19.4 ಓವರ್ಗಳಲ್ಲಿ 148 ರನ್ಗಳಿಸಿ ಗೆಲುವಿನ ನಗೆ ಬೀರಿತು. ಇದರ ಜೊತೆಗೆ ಐಸಿಸಿ ಟಿ20 ವಿಶ್ವಕಪ್ ಸೋಲಿನ ಸೇಡು ಸಹ ತೀರಿಸಿಕೊಂಡಿದೆ. ತಂಡದ ಪರ ವಿರಾಟ್ ಕೊಹ್ಲಿ, ಜಡೇಜಾ ಹಾಗೂ ಪಾಂಡ್ಯ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.