ETV Bharat / sports

ಬುಮ್ರಾರನ್ನು ODIಗೆ ಉಪನಾಯಕನನ್ನಾಗಿ ನೇಮಕ ಮಾಡಿದ್ದು ಆಶ್ಚರ್ಯ ತಂದಿದೆ: ಸಬಾ ಕರೀಮ್ - ಭಾರತ ಏಕದಿನ ತಂಡದ ನಾಯಕ

ಶುಕ್ರವಾರ ಚೇತನ್​ ಶರ್ಮಾ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ 18 ಸದಸ್ಯರ ತಂಡವನ್ನು ಘೋಷಿಸಿದ್ದು, ಇದಕ್ಕೆ ಕೆ ಎಲ್ ರಾಹುಲ್​ರನ್ನು ನಾಯಕ ಮತ್ತು ಜಸ್​ಪ್ರೀತ್ ಬುಮ್ರಾರನ್ನು ಉಪನಾಯಕನನ್ನಾಗಿ ನೇಮಕ ಮಾಡಲಾಗಿದೆ. ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಳ್ಳದ ಕಾರಣ ರಾಹುಲ್​ಗೆ ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಗಿದೆ.

Jasprit Bumrah
ಜಸ್​ಪ್ರೀತ್ ಬುಮ್ರಾ
author img

By

Published : Jan 2, 2022, 5:12 PM IST

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಘೋಷಿಸಿರುವ ಭಾರತ ತಂಡಕ್ಕೆ ವೇಗಿ ಜಸ್​ಪ್ರೀತ್ ಬುಮ್ರಾ ಅವರನ್ನು ಉಪನಾಯಕನನ್ನಾಗಿ ನೇಮಕ ಮಾಡಿರುವುದು ನನಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದು ಭಾರತದ ಮಾಜಿ ವಿಕೆಟ್ ಕೀಪರ್ ಕಮ್​ ಬ್ಯಾಟರ್​ ಸಬಾ ಕರೀಮ್ ಹೇಳಿದ್ದಾರೆ.

ಶುಕ್ರವಾರ ಚೇತನ್​ ಶರ್ಮಾ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ 18 ಸದಸ್ಯರ ತಂಡವನ್ನು ಘೋಷಿಸಿದ್ದು, ಇದಕ್ಕೆ ಕೆ ಎಲ್ ರಾಹುಲ್​ರನ್ನು ನಾಯಕ ಮತ್ತು ಜಸ್​ಪ್ರೀತ್ ಬುಮ್ರಾರನ್ನು ಉಪನಾಯಕನನ್ನಾಗಿ ನೇಮಕ ಮಾಡಿದೆ. ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಳ್ಳದ ಕಾರಣ ರಾಹುಲ್​ಗೆ ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಗಿದೆ.

ಐಪಿಎಲ್​ನಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ರಿಷಭ್​ ಪಂತ್ ಮತ್ತು ಶ್ರೇಯಸ್​ ಅಯ್ಯರ್​ ಅಂತಹ ಆಟಗಾರರಿರುವಾಗ ಯಾವುದೇ ನಾಯಕತ್ವದ ಅನುಭವವಿಲ್ಲದ ಬುಮ್ರಾರನ್ನು ರಾಹುಲ್​ಗೆ ಉಪ ನಾಯಕನಾಗಿ ಆಯ್ಕೆ ಮಾಡಲಾಗಿತ್ತು.

ಇದರ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದ ಚೇತನ್​ ಶರ್ಮಾ, ಬುಮ್ರಾ ಲೀಡರ್​ಶಿಪ್​ ಗ್ರೂಪ್​ನ ಭಾಗವಾಗಿರುವುದರಿಂದ ಅವರಿಗೆ ಈ ಅವಕಾಶ ನೀಡಲಾಗಿದೆ. ಭವಿಷ್ಯದಲ್ಲಿ ಮುಂದಾಳತ್ವ ವಹಿಸಿಕೊಳ್ಳಲು ಸಾಧ್ಯವಾದಷ್ಟನ್ನು ಕಲಿಯಲು ಬುಮ್ರಾಗೆ ಉಪನಾಯಕನ ಪಟ್ಟ ನೀಡಲಾಗಿದೆ ಎಂದು ತಿಳಿಸಿದ್ದರು.

ಆದರೆ ಮಾಜಿ ಕ್ರಿಕೆಟಿಗ ಸಬಾ ಕರೀಮ್, ತಾವು ಬುಮ್ರಾ ಅವರಿಗಿಂತ ಯುವ ವಿಕೆಟ್ ಕೀಪರ್​ ರಿಷಭ್ ಪಂತ್​ ಅವರನ್ನು ಉಪನಾಯಕನನ್ನಾಗಿ ಮಾಡುವುದು ಸೂಕ್ತ ಎಂದು ಎದುರು ನೋಡುತ್ತಿದ್ದೆ ಎಂದು ಹೇಳಿದ್ದಾರೆ.

ನಾನು ತುಂಬಾ ಆಶ್ಚರ್ಯಕ್ಕೊಳಗಾಗಿದ್ದೇನೆ. ಭಾರತ ತಂಡದ ಉಪನಾಯಕನಾಗಿ ಜಸ್​ಪ್ರೀತ್ ಬುಮ್ರಾ ಅವರನ್ನು ನಿರೀಕ್ಷಿಸಿರಲಿಲ್ಲ. ರಿಷಭ್ ಪಂತ್​ ಅವರು ಆಗಬಹುದು ಎಂದುಕೊಂಡಿದ್ದೆ ಏಕೆಂದರೆ ಅವರೂ ಕೂಡ ಬಹುಮಾದರಿಯ ಆಟಗಾರ ಮತ್ತು ಭಾರತದ ಅವರೂ ಎಲ್ಲಾ ಮಾದರಿಯಲ್ಲೂ ಆಡುತ್ತಿದ್ದರಿಂದ ಅವರು ಉಪನಾಯಕನಾಗಬಹುದು ಎಂದು ನಿರೀಕ್ಷಿಸಿದ್ದೆ ಎಂದು ಇಂಡಿಯಾ ನ್ಯೂಸ್​ಗೆ ತಿಳಿಸಿದ್ದಾರೆ.

ಜಸ್​ಪ್ರೀತ್ ಬುಮ್ರಾ ಪ್ರತಿಭಾವಂತ, ಭಾರತ ತಂಡಕ್ಕೆ ಆತನ ಪಾತ್ರ ಮಹತ್ವದ್ದಾಗಿದೆ. ಆದರೆ ಅವರು ಇಲ್ಲಿಯವರೆಗೆ ಯಾವ ತಂಡಕ್ಕೂ ನಾಯಕನಾಗಿಲ್ಲ. ಹಾಗಾಗಿ ಅವರ ಆಯ್ಕೆ ನನಗೆ ಆಶ್ಚರ್ಯ ತಂದಿದೆ. ರಿಷಭ್ ಪಂತ್ ಉಪನಾಯಕನ ಸ್ಥಾನಕ್ಕೆ ಮೊದಲ ಆಯ್ಕೆ ಎಂದು ನಾನು ಭಾವಿಸುತ್ತೇನೆ ಎಂದು ಕರೀಮ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ 2 ಟೆಸ್ಟ್​ ಮುಗಿಯುತ್ತಿದ್ದಂತೆ ಜನವರಿ 19ರಿಂದ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.

ಇದನ್ನೂ ಓದಿ:ಕೊಹ್ಲಿ ಮತ್ತು ರೋಹಿತ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಆಯ್ಕೆಸಮಿತಿ ಅಧ್ಯಕ್ಷ ಚೇತನ್ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.