ದುಬೈ: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ಉಳಿದ ಪಂದ್ಯಗಳಲ್ಲಿ ಭಾಗಿಯಾಗುವ ಉದ್ದೇಶದಿಂದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ದುಬೈ ತಲುಪಿದೆ. ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದೆ.
-
Vanakkam again Dubai 😎#UrsAnbudenEverywhere #WhistlePodu #Yellove 🦁💛 pic.twitter.com/2wAjzwfxh3
— Chennai Super Kings - Mask P😷du Whistle P🥳du! (@ChennaiIPL) August 13, 2021 " class="align-text-top noRightClick twitterSection" data="
">Vanakkam again Dubai 😎#UrsAnbudenEverywhere #WhistlePodu #Yellove 🦁💛 pic.twitter.com/2wAjzwfxh3
— Chennai Super Kings - Mask P😷du Whistle P🥳du! (@ChennaiIPL) August 13, 2021Vanakkam again Dubai 😎#UrsAnbudenEverywhere #WhistlePodu #Yellove 🦁💛 pic.twitter.com/2wAjzwfxh3
— Chennai Super Kings - Mask P😷du Whistle P🥳du! (@ChennaiIPL) August 13, 2021
Vanakkam again dubai... ಎಂದು ಟ್ಯಾಗ್ಲೈನ್ ನೀಡಿ, ವಿಡಿಯೋ ಹರಿಬಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್, ನಾಳೆಯಿಂದ ಅಭ್ಯಾಸದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ ಸೇರಿದಂತೆ ಅನೇಕ ಭಾರತೀಯ ಪ್ಲೇಯರ್ಸ್ ನಿನ್ನೆ ಚೆನ್ನೈನಿಂದ ಪ್ರಯಾಣ ಬೆಳೆಸಿದ್ದರು.
ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಕೆಲ ಆಟಗಾರರಲ್ಲಿ ಕೊರೊನಾ ಸೋಂಕು ದೃಢಗೊಂಡಿತು. ಹೀಗಾಗಿ ಅರ್ಧದಲ್ಲೇ ಟೂರ್ನಿ ಮೊಟಕುಗೊಳಿಸಲಾಗಿತ್ತು. ಇದೀಗ ದುಬೈನಲ್ಲಿ ಉಳಿದ ಪಂದ್ಯಗಳು ಸೆಪ್ಟೆಂಬರ್ 19ರಿಂದ ಆಯೋಜನೆಗೊಂಡಿದ್ದು, ಎಲ್ಲ ತಂಡಗಳು ವಿದೇಶಕ್ಕೆ ಪ್ರಯಾಣ ಬೆಳೆಸಲಿವೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಟ ನಡೆಸಲಿವೆ.
ಧೋನಿ ಜೊತೆಗೆ ಋತುರಾಜ್ ಗಾಯ್ಕವಾಡ, ಸುರೇಶ್ ರೈನಾ, ದೀಪಕ್ ಚಹರ್ ಸೇರಿದಂತೆ ಅನೇಕರು ಬಂದಿಳಿದಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಸಿಎಸ್ಕೆ ತಂಡ ಎರಡನೇ ಸ್ಥಾನದಲ್ಲಿದ್ದು, ಡೆಲ್ಲಿ ಕ್ಯಾಪಿಟಲ್ ಮೊದಲನೇ ಸ್ಥಾನದಲ್ಲಿದೆ.
-
Super fam making an Anbu Dubai entry 💛#StartTheWhistles #WhistlePodu #Yellove 🦁 pic.twitter.com/Zml7EKMlWz
— Chennai Super Kings - Mask P😷du Whistle P🥳du! (@ChennaiIPL) August 14, 2021 " class="align-text-top noRightClick twitterSection" data="
">Super fam making an Anbu Dubai entry 💛#StartTheWhistles #WhistlePodu #Yellove 🦁 pic.twitter.com/Zml7EKMlWz
— Chennai Super Kings - Mask P😷du Whistle P🥳du! (@ChennaiIPL) August 14, 2021Super fam making an Anbu Dubai entry 💛#StartTheWhistles #WhistlePodu #Yellove 🦁 pic.twitter.com/Zml7EKMlWz
— Chennai Super Kings - Mask P😷du Whistle P🥳du! (@ChennaiIPL) August 14, 2021
ಇದನ್ನೂ ಓದಿರಿ: ಟೆಸ್ಟ್ನಲ್ಲಿ ಜೋ ರೂಟ್ 9000 ರನ್.. ಈ ಸಾಧನೆ ಮಾಡಿದ 2ನೇ ಇಂಗ್ಲಿಷ್ ದಾಂಡಿಗ..
ದುಬೈನಲ್ಲಿ 13 ಪಂದ್ಯಗಳು ಆಯೋಜನೆಗೊಂಡಿದ್ದು, ಶಾರ್ಜಾದಲ್ಲಿ 10 ಹಾಗೂ ಅಬುಧಾಬಿಯಲ್ಲಿ 8 ಪಂದ್ಯಗಳು ನಡೆಯಲಿವೆ. ಐಪಿಎಲ್ ಮುಕ್ತಾಯವಾಗುತ್ತಿದ್ದಂತೆ ಟಿ-20 ವಿಶ್ವಕಪ್ ಕೂಡ ಇಲ್ಲೇ ಆಯೋಜನೆಗೊಂಡಿದ್ದು, ಅನೇಕ ಪ್ಲೇಯರ್ಸ್ ಅಲ್ಲೇ ಉಳಿದುಕೊಳ್ಳಲಿದ್ದಾರೆ.