ETV Bharat / sports

ನಾನು ಕಂಡಂತಹ ತೀಕ್ಷ್ಣಕ್ರಿಕೆಟ್ ಮೈಂಡ್​ ಹೊಂದಿದವರಲ್ಲಿ ಎಂಎಸ್​ ಧೋನಿ ಕೂಡ ಒಬ್ಬರು : ಗ್ರೇಗ್ ಚಾಪೆಲ್ - Chapell on Dhoni

ನೈಸರ್ಗಿಕವಾಗಿ ಬ್ಯಾಟಿಂಗ್ ಕಲಿತಿರುವ ಧೋನಿಯನ್ನು ಉದಾಹರಣೆಯನ್ನಾಗಿ ತೆಗೆದುಕೊಂಡಿರುವ ಅವರು, ನಾನು ಭಾರತದಲ್ಲಿ ಎಂಎಸ್ ಧೋನಿ ಜೊತೆಗೆ ಕೆಲಸ ಮಾಡಿದ್ದೇನೆ. ಆತ ಪ್ರತಿಭೆಯನ್ನು ಅಭಿವೃದ್ಧಿಪಡಿಸಿಕೊಂಡ ಮತ್ತು ಈ ಶೈಲಿಯಲ್ಲಿ ಆಡಲು ಕಲಿತ ಬ್ಯಾಟರ್​ಗೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ..

Greg Chappell on MS Dhoni
ಎಂಎಸ್​ ಧೋನಿ ಗ್ರೇಗ್ ಚಾಪೆಲ್
author img

By

Published : Jan 26, 2022, 4:45 PM IST

ಅಡಿಲೇಡ್ ​: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವವನ್ನು ಪ್ರಶಂಸಿಸಿರುವ ಭಾರತದ ಮಾಜಿ ಕೋಚ್ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೇಗ್ ಚಾಪೆಲ್, ತಾವು ತಮ್ಮ ಕ್ರಿಕೆಟ್​ ಜೀವನದಲ್ಲಿ ಕಂಡಂತಹ ತೀಕ್ಷ್ಣ ಕ್ರಿಕೆಟ್​ ಮೆದುಳನ್ನು ಹೊಂದಿರುವ ಕ್ರಿಕೆಟಿಗರಲ್ಲಿ ಅವರೂ ಒಬ್ಬರು ಎಂದು ತಿಳಿಸಿದ್ದಾರೆ.

"ಭಾರತೀಯ ಉಪಖಂಡದಲ್ಲಿ ಈಗಲೂ ಉತ್ತಮ ಕೋಚಿಂಗ್​​ ಸೌಲಭ್ಯ ಸಮರ್ಪಕವಾಗಿಲ್ಲದ ಅನೇಕ ಪಟ್ಟಣಗಳನ್ನು ಹೊಂದಿದೆ. ಅಲ್ಲಿನ ಯುವಕರು ಔಪಚಾರಿಕ ತರಬೇತಿಯ ಹಸ್ತಕ್ಷೇಪವಿಲ್ಲದೆ ಬೀದಿಗಳಲ್ಲಿ ಮತ್ತು ಖಾಲಿ ಭೂಮಿಯಲ್ಲಿ ಕ್ರಿಕೆಟ್ ಆಡುತ್ತಾರೆ.

ಪ್ರಸ್ತುತ ಸ್ಟಾರ್ ಆಟಗಾರರು ಕೂಡ ಈ ಆಟವನ್ನು ಅಲ್ಲೆ ಕಲಿತಿದ್ದಾರೆ" ಎಂದು ಇಎಸ್​ಪಿನ್​ ಕ್ರಿಕ್​ಇನ್ಫೋಗೆ ಬರೆದಿರುವ ಅಂಕಣದಲ್ಲಿ ಚಾಪೆಲ್ ತಿಳಿಸಿದ್ದಾರೆ. ನೈಸರ್ಗಿಕವಾಗಿ ಬ್ಯಾಟಿಂಗ್ ಕಲಿತಿರುವ ಧೋನಿಯನ್ನು ಉದಾಹರಣೆಯನ್ನಾಗಿ ತೆಗೆದುಕೊಂಡಿರುವ ಅವರು, ನಾನು ಭಾರತದಲ್ಲಿ ಎಂಎಸ್ ಧೋನಿ ಜೊತೆಗೆ ಕೆಲಸ ಮಾಡಿದ್ದೇನೆ. ಆತ ಪ್ರತಿಭೆಯನ್ನು ಅಭಿವೃದ್ಧಿಪಡಿಸಿಕೊಂಡ ಮತ್ತು ಈ ಶೈಲಿಯಲ್ಲಿ ಆಡಲು ಕಲಿತ ಬ್ಯಾಟರ್​ಗೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ.

ಇದನ್ನೂ ಓದಿ:ಐಸಿಸಿ ಏಕದಿನ ರ‍್ಯಾಂಕಿಂಗ್ : 2ನೇ ಸ್ಥಾನದಲ್ಲೇ ಉಳಿದ ಕೊಹ್ಲಿ, ಡಿಕಾಕ್, ಡಸೆನ್ ಗಮನಾರ್ಹ ಏರಿಕ

ಅವರು ತನ್ನ ಬೆಳವಣಿಗೆಯ ಆರಂಭದಲ್ಲಿ ವಿವಿಧ ಸಂದರ್ಭಗಳಲ್ಲಿ ಹೆಚ್ಚು ಅನುಭವಿ ವ್ಯಕ್ತಿಗಳ ವಿರುದ್ಧ ಸ್ಪರ್ಧಿಸುವ ಮೂಲಕ ನಿರ್ಧಾರ ತೆಗೆದುಕೊಳ್ಳುವ ಮತ್ತು ಕಾರ್ಯತಂತ್ರದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡರು. ಅವರ ಆ ಕೌಶಲ್ಯ ಅನೇಕ ಸಮಕಾಲೀನ ಕ್ರಿಕೆಟಿಗರಿಂದ ಅವರನ್ನು ಪ್ರತ್ಯೇಕಿಸಿದೆ. ನಾನು ನನ್ನ ಕ್ರಿಕೆಟ್ ಜೀವನದಲ್ಲಿ ಎದುರಿಸಿದ ತೀಕ್ಷ್ಣವಾದ ಕ್ರಿಕೆಟ್ ಮೆದುಳುಗಳನ್ನು ಹೊಂದಿರುವವರಲ್ಲಿ ಅವರೂ ಒಬ್ಬರು ಎಂದು ಆಸೀಸ್​ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಚಾಪೆಲ್ ಹೇಳಿದ್ದಾರೆ.

ಗ್ರೇಗ್​ ಚಾಪೆಲ್ ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ಎಂಎಸ್ ಧೋನಿ 2020 ಆಗಸ್ಟ್​ 15ರಂದು ನಿವೃತ್ತಿ ಘೋಷಿಸುವ ವೇಳೆಗೆ ಭಾರತದ ಶ್ರೇಷ್ಠ ನಾಯಕನಾಗಿ ಗುರುತಿಸಿಕೊಂಡರು. ವಿಶ್ವದ ಶ್ರೇಷ್ಠ ಫಿನಿಷರ್ ಎನಿಸಿಕೊಂಡಿರುವ ಅವರು 90 ಟೆಸ್ಟ್​, 350 ಏಕದಿನ ಮತ್ತು 98 ಟಿ20 ಪಂದ್ಯಗಳಿಂದ 17 ಸಾವಿರಕ್ಕೂ ಹೆಚ್ಚು ರನ್​ಳಿಸಿದ್ದಾರೆ. ಐಸಿಸಿ ಆಯೋಜಿಸುವ ಎಲ್ಲಾ ಟ್ರೋಫಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ ಎನಿಸಿಕೊಂಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.