ETV Bharat / sports

ಧೋನಿ ನಟಿಸಿರುವ ಐಪಿಎಲ್ ಪ್ರೋಮೋ ಪ್ರಸಾರಕ್ಕೆ ತಡೆ: ಇದೇ ಪ್ರಮುಖ ಕಾರಣ?

ಈ ಜಾಹಿರಾತು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದನ್ನು ವಿಜೃಂಭಣೆಯಾಗಿ ತೋರಿಸಿದೆ ಎಂದು ರಸ್ತೆ ಸುರಕ್ಷತಾ ಕಂಪನಿಯೊಂದು ದೂರು ನೀಡಿದ್ದು, ಇದಕ್ಕಾಗಿ ​ವಿಡಿಯೋವನ್ನು ಬದಲಾಯಿಸಬೇಕು ಅಥವಾ ತೆಗೆದುಹಾಕಬೇಕು ಎಂದು ಎಎಸ್‌ಸಿಐ ಹೇಳಿದೆ ಎನ್ನಲಾಗಿದೆ.

IPL promo glorifying Violation Of Traffic Rules
ಐಪಿಎಲ್ ಪ್ರೋಮೋ ಟ್ರಾಫಿಕ್ ಉಲ್ಲಂಘನೆ
author img

By

Published : Apr 7, 2022, 8:41 PM IST

ಮುಂಬೈ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ನಟಿಸಿರುವ ಐಪಿಎಲ್​ನ ಪ್ರಮೋಷನಲ್ ಜಾಹಿರಾತೊಂದು ಟ್ರಾಫಿಕ್​ ನಿಯಮಗಳನ್ನು ಉಲ್ಲಂಘಿಸುವುದನ್ನು ವಿಜೃಂಭಿಸಿರುವ ಕಾರಣಕ್ಕೆ ಆ ಜಾಹಿರಾತನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಹಿಂತೆಗೆದುಕೊಳ್ಳಲು​ ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ (ASCI) ಸೂಚಿಸಿದೆ.

ಈ ಜಾಹಿರಾತು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದನ್ನು ವಿಜೃಂಭಣೆಯಾಗಿ ತೋರಿಸಿದೆ ಎಂದು ರಸ್ತೆ ಸುರಕ್ಷತಾ ಕಂಪನಿಯೊಂದು ದೂರು ನೀಡಿದ್ದು, ಇದಕ್ಕಾಗಿ ​ ವಿಡಿಯೊವನ್ನು ಬದಲಾಯಿಸಬೇಕು ಅಥವಾ ತೆಗೆದುಹಾಕಬೇಕು ಎಂದು ಎಎಸ್‌ಸಿಐ ಹೇಳಿದೆ ಎನ್ನಲಾಗಿದೆ.

ಈ ಐಪಿಎಲ್​ ಪ್ರೋಮೋದಲ್ಲಿ ಧೊನಿ ಬಸ್​ ಡ್ರೈವರ್​ ಆಗಿ ಕಾಣಿಸಿಕೊಂಡಿದ್ದಾರೆ. ಟ್ರಾಫಿಕ್​ನಲ್ಲಿ ಸಿಲುಕಿದ್ದ ಬಸ್​ಅನ್ನು ನಡುರಸ್ತೆಯಲ್ಲಿ ತಂದು ನಿಲ್ಲಿಸ್ತಾರೆ. ಏನು ಮಾಡ್ತಿದ್ದೀಯಾ? ಎಂದು ಒಬ್ಬ ಪೊಲೀಸ್​ ಪ್ರಶ್ನಿಸಿದ್ದಕ್ಕೆ, ಸೂಪರ್​ ಓವರ್​ ನಡೆಯುತ್ತಿದೆ ಎನ್ನುತ್ತಾರೆ. ಇದನ್ನು ಕೇಳಿದ ಪೊಲೀಸ್ ಏನು ಸಾಮಾನ್ಯ ವಿಷಯದಂತೆ ಪರಿಗಣಿಸಿ ಮುಂದೆ ಅಲ್ಲಿಂದ ಹೊರಡುತ್ತಾರೆ.

ಆದರೆ ಇದು ಟ್ರಾಫಿಕ್​ ನಿಯಮಗಳನ್ನು ಗಾಳಿಗೆ ತೂರಿರುವುದರಿಂದ ಈ ಜಾಹಿರಾತನ್ನು ಸಿದ್ಧಪಡಿಸಿರುವ ಸಂಸ್ಥೆಗೆ ಹಿಂತೆಗೆದುಕೊಳ್ಳಲು ಅಥವಾ ಏಪ್ರಿಲ್ 20ರೊಳಗೆ ಬದಲಿಲಾವಣೆ ಮಾಡಿಕೊಳ್ಳಲು ಎಎಸ್​ಸಿಐ ಸೂಚಿಸಿದೆ ಮತ್ತು ಕಂಪನಿ ಕೂಡ ಈ ಪ್ರೋಮೋವನ್ನು ವಾಪಸ್ ತೆಗೆದುಕೊಳ್ಳಲು ಒಪ್ಪಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:'ಪಾಕ್ ವಿರುದ್ಧ ಆ​ ಪಂದ್ಯದಲ್ಲಿ ಧೋನಿ ನನಗೆ ಚೆಂಡು ನೀಡಿದಾಗ ನಡುಕ ಶುರುವಾಗಿತ್ತು! ಆದರೆ...'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.