ETV Bharat / sports

ಐಪಿಎಲ್​ನಲ್ಲಿ ವೇಗವಾಗಿ 1000 ರನ್​: ಕೊಹ್ಲಿ, ಧೋನಿ, ರೋಹಿತ್​ ಹಿಂದಿಕ್ಕಿದ ಪಡಿಕ್ಕಲ್

author img

By

Published : Apr 18, 2022, 8:37 PM IST

2020ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಪದಾರ್ಪಣೆ ಮಾಡಿದ ದೇವದತ್ ಪಡಿಕ್ಕಲ್ ತಮ್ಮ 35ನೇ ಇನ್ನಿಂಗ್ಸ್​​ನಲ್ಲಿ 1000 ರನ್​ ಸಂಪೂರ್ಣಗೊಳಿಸಿದರು. ಈ ಮೂಲಕ ಅತಿ ಕಡಿಮೆ ಇನ್ನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ ಭಾರತದ 3ನೇ ಬ್ಯಾಟರ್ ಎನಿಸಿಕೊಂಡರು.

Devdatt Padikkal became 3rd fastest Indian to complete 1000 runs in IPL
ದೇವದತ್ ಪಡಿಕ್ಕಲ್ 1000 ರನ್ಸ್

ಮುಂಬೈ: ರಾಜಸ್ಥಾನ್ ರಾಯಲ್ಸ್ ತಂಡದ ದೇವದತ್​ ಪಡಿಕ್ಕಲ್ ಐಪಿಎಲ್​ನಲ್ಲಿ 1000 ರನ್​ಗಳನ್ನು ಪೂರೈಸಿದ್ದಾರೆ. ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ಬೌಂಡರಿ ಸಿಡಿಸುತ್ತಿದ್ದಂತೆಯೇ ಈ ಮೈಲಿಗಲ್ಲು ಸ್ಥಾಪಿಸಿದರು.

ಐಪಿಎಲ್​ನಲ್ಲಿ 1000 ರನ್​ ಪೂರೈಸಲು ದಂತಕತೆ ಸಚಿನ್​ ತೆಂಡೂಲ್ಕರ್​ 31 ಇನ್ನಿಂಗ್ಸ್​ ತೆಗೆದುಕೊಂಡಿದ್ದರು. 2010ರಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. 2ನೇ ಸ್ಥಾನದಲ್ಲಿ ಸಿಎಸ್​ಕೆ ಮಾಜಿ ಬ್ಯಾಟರ್ ಸುರೇಶ್ ರೈನಾ ಇದ್ದು, ಅವರು 34 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಇದೀಗ ಪಡಿಕ್ಕಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್(35) ಅವರ ಜೊತೆಗೆ 3ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಪಡಿಕ್ಕಲ್ ಈ ವಿಶೇಷ ದಾಖಲೆಯನ್ನು ದಿಗ್ಗಜರಾದ ಗಂಭೀರ್​(36), ಎಂ.ಎಸ್.ಧೋನಿ(37) ರೋಹಿತ್ ಶರ್ಮಾ( 37) ,ರಹಾನೆ(37),ಗಂಗೂಲಿ(38), ಕೆ.ಎಲ್.ರಾಹುಲ್​(38) ವಿರಾಟ್​ ಕೊಹ್ಲಿ(45) ಅವರಿಗಿಂತ ಕಡಿಮೆ ಇನ್ನಿಂಗ್ಸ್​ನಲ್ಲಿ ಸಾಧಿಸಿದ್ದಾರೆ.

ಐಪಿಎಲ್​ ಇತಿಹಾಸದಲ್ಲಿ ವೇಗವಾಗಿ 1000 ರನ್​ಗಳಿಸಿದ ದಾಖಲೆ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದಲ್ಲಿ ಆಡಿದ್ದ ಶಾನ್ ಮಾರ್ಷ್​ ಅವರ ಹೆಸರಿನಲ್ಲಿದೆ. ಅವರು 2011ರಲ್ಲಿ ಕೇವಲ 21 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದರು. ಲೆಂಡ್ಲ್​ ಸಿಮನ್ಸ್​(23), ಮ್ಯಾಥ್ಯೂ ಹೇಡನ್(25), ಜಾನಿ ಬೈರ್​ಸ್ಟೋವ್​(26) ಮತ್ತು ಕ್ರಿಸ್ ಗೇಲ್(27 ) ನಂತರದ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:ಭಾರತದ ಈ ಬ್ಯಾಟರ್​ ಐಪಿಎಲ್​ನಲ್ಲಿ ನಾನೆದುರಿಸಿದ ಕಠಿಣ ಬ್ಯಾಟರ್ : ನರೈನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.